"ನಮ್ಮ ದೇಶದಲ್ಲಿ ಪೆಟ್ರೋಲ್ ಸಂಪೂರ್ಣ ಖಾಲಿಯಾಗುತ್ತಿದೆ": ಶ್ರೀಲಂಕಾ ಪ್ರಧಾನಿ ಕಳವಳ
ಕೊಲಂಬೋ: ಸದ್ಯ ಶ್ರೀಲಂಕಾವು ಪೆಟ್ರೋಲ್ ನ ಕೊರತೆಯನ್ನು ಎದುರಿಸುತ್ತಿದ್ದು, ಸದ್ಯದಲ್ಲೇ ಪೆಟ್ರೋಲ್ ಖಾಲಿಯಾಗುವ ಸಾಧ್ಯತೆಯಿರುವುದರಿಂದ ಮುಂದಿನ ತಿಂಗಳುಗಳಲ್ಲಿ ನಾಗರಿಕರು ಹೆಚ್ಚಿನ ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಉಂಟಾಗಬಹುದು ಎಂದು ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಸೋಮವಾರ ಟ್ವಿಟರ್ ನಲ್ಲಿ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.
"ಈ ಸಮಯದಲ್ಲಿ, ನಾವು ಒಂದೇ ದಿನಕ್ಕಾಗುವ ಪೆಟ್ರೋಲ್ ಸ್ಟಾಕ್‌ಗಳನ್ನು ಹೊಂದಿದ್ದೇವೆ" ಎಂದು ವಿಕ್ರಮಸಿಂಘೆ ರಾಷ್ಟ್ರವನ್ನು ಉದ್ದೇಶಿಸಿ ಹೇಳಿದರು. "ಮುಂದಿನ ಒಂದೆರಡು ತಿಂಗಳುಗಳು ನಮ್ಮ ಜೀವನದಲ್ಲಿ ಅತ್ಯಂತ ಕಷ್ಟಕರವಾಗಿರುತ್ತದೆ. ಕೆಲವು ತ್ಯಾಗಗಳನ್ನು ಮಾಡಲು ಮತ್ತು ಈ ಅವಧಿಯ ಸವಾಲುಗಳನ್ನು ಎದುರಿಸಲು ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ಅಗತ್ಯ ಆಮದುಗಳಿಗೆ ಪಾವತಿಸಲು ದೇಶಕ್ಕೆ $75 ಮಿಲಿಯನ್ ವಿದೇಶಿ ವಿನಿಮಯದ ಅಗತ್ಯವಿದೆ ಎಂದು ವಿಕ್ರಮಸಿಂಘೆ ಹೇಳಿದ್ದಾರೆ.
ಭಾರತೀಯ ಕ್ರೆಡಿಟ್ ಲೈನ್ ಅನ್ನು ಬಳಸಿಕೊಂಡು ಎರಡು ಪೆಟ್ರೋಲ್ ಮತ್ತು ಎರಡು ಡೀಸೆಲ್ ಸಾಗಣೆಗಳು ಮುಂದಿನ ಕೆಲವು ದಿನಗಳಲ್ಲಿ ಈ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ದೇಶವು 14 ಅಗತ್ಯ ಔಷಧಿಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.
"ಹೃದ್ರೋಗಕ್ಕೆ ಅಗತ್ಯವಿರುವ ಔಷಧಿ ಹಾಗೂ ಶಸ್ತ್ರಚಿಕಿತ್ಸಾ ಉಪಕರಣಗಳು ಸೇರಿದಂತೆ ಹಲವಾರು ಔಷಧಿಗಳ ತೀವ್ರ ಕೊರತೆಯಿದೆ. ಔಷಧಿ, ವೈದ್ಯಕೀಯ ಉಪಕರಣಗಳು ಮತ್ತು ರೋಗಿಗಳಿಗೆ ಆಹಾರದ ಪೂರೈಸುವವರಿಗೆ ನಾಲ್ಕು ತಿಂಗಳಿಂದ ಪಾವತಿಗಳನ್ನು ಮಾಡಲಾಗಿಲ್ಲ" ಎಂದು ಅವರು ಹೇಳಿದರು.
1. The next couple of months will be the most difficult ones of our lives. I have no desire to hide the truth and to lie to the public. Although these facts are unpleasant and terrifying, this is the true situation. #SriLankaEconomicCrisis
— Ranil Wickremesinghe (@RW_UNP) May 16, 2022