ಪೊಲ್ಯ: ಮದರಸ ಪ್ರಾರಂಭೋತ್ಸವ
ಕಾಪು: ಪೊಲ್ಯ ಹಿಮಾಯತುಲ್ ಇಸ್ಲಾಂ ಅರಬಿ ಮದರಸದ ಪ್ರಾರಂಭೋತ್ಸವವು ಮಸೀದಿ ಇಮಾಮ್ ಅಲಿ ಮದನಿ ಅವರ ದುವಾದೊಂದಿಗೆ ಇತ್ತೀಚೆಗೆ ನೆರವೇರಿತು.
ಮಸೀದಿಯ ಅಧ್ಯಕ್ಷ ಅಲಿಯಬ್ಬ ಕಟಪಾಡಿ ಅಧ್ಯಕ್ಷತೆ ವಹಿಸಿ, ಮದರಸ ಅಭಿವೃದ್ಧಿಯಲ್ಲಿ ಎಲ್ಲರೂ ಕೈ ಜೋಡಿಸಿ ಸಹಕರಿಸುವಂತೆ ಕರೆ ನೀಡಿದರು.
ಮದರಸ ಅಧ್ಯಾಪಕ ಸದರ್ ಇಲ್ಯಾಸ್ ಅಲ್ ವಾರಿಸಿ, ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಮದರಸದ ಕಾರ್ಯ ವೈಖರಿ ಬಗ್ಗೆ ವಿವರಿಸಿ ಶುಭ ಹಾರೈಸಿದರು. ಮುಹಝಿನ್ ಬದ್ರುದ್ದೀನ್ ಮಾತನಾಡಿದರು.
ಕೋಶಾಧಿಕಾರಿ ಅಬ್ದುಲ್ ರಝಾಕ್ ಮಜೂರು, ಕಾರ್ಯದರ್ಶಿ ಹನೀಫ್ ಪೊಲ್ಯ, ಜೊತೆ ಕಾರ್ಯದರ್ಶಿ ಇಬ್ರಾಹಿಂ, ಕೆ.ಎಚ್. ಸುಲೈಮಾನ್, ಹಾತೀಮ್ ಶೇಕ್, ಮಜೀದ್ ಹಸನ್ ಪೊಲ್ಯ ಮೊದಲಾದವರು ಉಪಸ್ಥಿತರಿದ್ದರು.
Next Story