ಉಡುಪಿ: ಅತಾವುಲ್ಲಾ ಅಸಾದಿ ನಿಧನ

ಉಡುಪಿ: ಉದ್ಯಾವರ ನಿವಾಸಿ ಅತಾವುಲ್ಲಾ ಅಸಾದಿ (80) ಮಂಗಳವಾರ ನಿಧನರಾದರು.
ಉಡುಪಿ ಕೋರ್ಟಿನಲ್ಲಿ ಅಮೀನ್ ಆಗಿದ್ದ ಇವರು ನಾಯರ್ ಕೆರೆ ಹಾಶಿಮಿ ಮಸೀದಿಯ ಅಧ್ಯಕ್ಷ, ಕಿನ್ನಿಮುಲ್ಕಿ ಮಿತ್ರ ಮಂಡಳಿ ಸ್ಥಾಪಕ ಅಧ್ಯಕ್ಷ, ಗೌರವಾಧ್ಯಕ್ಷರಾಗಿದ್ದರು, ಕೊಡುಗೈ ದಾನಿಯಾಗಿದ್ದರು.
ಮೃತರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.
ಸಂತಾಪ: ಅತಾವುಲ್ಲಾ ಅಸಾದಿ ನಿಧನಕ್ಕೆ ಕನ್ನರ್ಪಾಡಿ ಶ್ರೀಜಯದುರ್ಗಾ ಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಹಾಗೂ ಉಡುಪಿ ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story