ಉದ್ಯಮಿ ನಾಪತ್ತೆ
ಕಾಪು : ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಕಟಪಾಡಿ ಕೋಟೆ ಗ್ರಾಮದ ಉದ್ಯಮಿಯೊಬ್ಬರು ನಾಪತ್ತೆ ಯಾಗಿರುವ ಬಗ್ಗೆ ವರದಿಯಾಗಿದೆ.
ಉದ್ಯಮಿ ಪ್ರಕಾಶ ರಾವ್(46) ಎಂಬವರು ವ್ಯವಹಾರದಲ್ಲಿ ತುಂಬಾ ನಷ್ಟವಾಗಿದ್ದು, ಕೆಲವು ಜನರಲ್ಲಿ ಸಾಲ ಮಾಡಿಕೊಂಡಿದ್ದರು. ಮೇ9ರಂದು ಬೆಳಗ್ಗೆ ಕೋಟದ ಗರಿಕೆಮಠ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story