ಅಮೆರಿಕ: ಭಾರತೀಯ ಅಮೆರಿಕನ್ ವಿದ್ಯಾರ್ಥಿಗೆ ಹಿಂಸೆ ನೀಡಿ ಆನ್‌ಲೈನ್ ನಲ್ಲಿ ವೀಡಿಯೊ ಪ್ರಸಾರ ಮಾಡಿದ ದುಷ್ಕರ್ಮಿಗಳು
ವೀಡಿಯೊ ವೈರಲ್
ನ್ಯೂಯಾರ್ಕ್, ಮೇ 17:ಟೆಕ್ಸಾಸ್‌ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗೆ ಹಿಂಸೆ ನೀಡಿ ಅದರ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ.
ಟೆಕ್ಸಾಸ್ ಕಾಪೆಲ್ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ತರಗತಿಯಲ್ಲಿ ಬೆಂಚ್‌ನ ಮೇಲೆ ಕುಳಿತಿದ್ದ ಭಾರತೀಯ ಅಮೆರಿಕನ್ ವಿದ್ಯಾರ್ಥಿಯ ಬಳಿಗೆ ಬರುವ ಮತ್ತೊಬ್ಬ ವಿದ್ಯಾರ್ಥಿ ಎದ್ದೇಳುವಂತೆ ಸೂಚಿಸುತ್ತಾನೆ. ಇದಕ್ಕೆ ಭಾರತೀಯ ಅಮೆರಿಕನ್ ವಿದ್ಯಾರ್ಥಿ ನಿರಾಕರಿಸಿದಾಗ ಆತನ ಮೇಲೆ ಹಲ್ಲೆ ನಡೆಸಿದ ಮತ್ತೊಬ್ಬ ವಿದ್ಯಾರ್ಥಿ, ತನ್ನ ಮೊಣಕೈಗಳಿಂದ ಆತನ ಕುತ್ತಿಗೆಯನ್ನು ಹಿಂದಿನಿಂದ ಒತ್ತುತ್ತಾನೆ. ಉಸಿರುಗಟ್ಟಿದಂತಾದ ವಿದ್ಯಾರ್ಥಿ ಸೀಟಿನಿಂದ ಕೆಳಗೆ ಬೀಳುವ ದೃಶ್ಯವನ್ನು ಮತ್ತೊಬ್ಬ ವಿದ್ಯಾರ್ಥಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.ಈ ವೀಡಿಯೊ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಶಾಲೆಯ ಆಡಳಿತ ಮಂಡಳಿ ಹೇಳಿದೆ.
14 y/o at Coppell Middle School North gets assaulted in the cafeteria, while students just watched.
— Malini Basu (@MaliniBasu_) May 16, 2022
Teen in chokehold faced 3days of punishment. His parents are outraged. Other teen faced 1 day of punishment.
Teen tells me, he didn't want to fight back, & get in trouble.@wfaa pic.twitter.com/f2Clha8qpF