ಗ್ಯಾನ್ ವ್ಯಾಪಿ ಮಸೀದಿ ಷಡ್ಯಂತರ ಖಂಡಿಸಿ ಪ್ರತಿಭಟನೆ
ಕಾಪು : ಗ್ಯಾನ್‌ವ್ಯಾಪಿ ಮಸೀದಿಯ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಮತ್ತು ೧೯೯೧ರ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ಕಾಪು ಕ್ಷೇತ್ರ ಸಮಿತಿ ವತಿಯಿಂದ ಇಂದು ಕಾಪು ಬಸ್ ನಿಲ್ದಾಣನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಎಸ್‌ಡಿಪಿಐ ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹನಿಫ್ ಮೂಳೂರು, ಕಾಪು ಪುರಸಭೆ ಸದಸ್ಯ ನೂರುದ್ದೀನ್ ಮಾತನಾಡಿದರು. ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಮಜೀದ್ ಉಚ್ಚಿಲ, ಕಾಪು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಯೂಬ್ ಇಂಜಿನಿಯರ್ ಮಣಿಪುರ, ಮುಖಂಡರಾದ ರಜಾಕ್ ವೈ.ಸಿ. ಉಚ್ಚಿಲ, ಅಬ್ದುಲ್ ಖಾದರ್ ಮಲ್ಲಾರ್ ಮೊದಲಾದವರು ಉಪಸ್ಥಿತರಿದ್ದರು.
Next Story