Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಶಿಕ್ಷಣದ ಹಾಲಿಗೆ ವಿಷ !

ಶಿಕ್ಷಣದ ಹಾಲಿಗೆ ವಿಷ !

ವಾರ್ತಾಭಾರತಿವಾರ್ತಾಭಾರತಿ19 May 2022 12:05 AM IST
share
ಶಿಕ್ಷಣದ ಹಾಲಿಗೆ ವಿಷ !

ಶಾಲೆಯನ್ನು ‘ವಿದ್ಯಾ ದೇಗುಲ’ ಎಂದು ಭಾರತದಲ್ಲಿ ಕರೆಯಲಾಗುತ್ತದೆ. ಭಾರತದ ಮಟ್ಟಿಗೆ ದೇಗುಲ ಎನ್ನುವುದು ಕೆಲವೊಮ್ಮೆ ಧನಾತ್ಮಕ ಅರ್ಥವನ್ನು ಕೊಟ್ಟರೆ, ಕೆಲವೊಮ್ಮೆ ಋಣಾತ್ಮಕ ಧ್ವನಿಯನ್ನೂ ಕೊಡುತ್ತದೆ. ಯಾಕೆಂದರೆ ಈ ದೇಶದಲ್ಲಿ ದೇಗುಲದೊಳಗೆ ಎಲ್ಲರಿಗೂ ಪ್ರವೇಶವಿಲ್ಲ. ಗರ್ಭಗುಡಿಯೊಳಗಂತೂ ನಿರ್ದಿಷ್ಟ ಸಮುದಾಯಕ್ಕಷ್ಟೇ ಪ್ರವೇಶ. ಈ ದೇಶದಲ್ಲಿ ‘ದೇವರ ಮುಂದೆ ಎಲ್ಲರೂ ಸಮಾನರು’ ಎನ್ನುವ ಬಾಯಿ ಮಾತಿದೆ. ಆದರೆ ದೇಗುಲದ ಮುಂದೆ ಎಲ್ಲರೂ ಸಮಾನರಲ್ಲ. ದೇವಾಲಯ ಎಂದಾಗ ಪಂಕ್ತಿಭೇದ, ಜಾತಿಭೇದ ಎಲ್ಲವೂ ಅದನ್ನು ಹಿಂಬಾಲಿಸಿಕೊಂಡು ಬರುತ್ತದೆ. ಇಲ್ಲಿ ಧರ್ಮಕ್ಕೊಂದು ದೇಗುಲ, ಮಸೀದಿ, ಚರ್ಚುಗಳು ಮಾತ್ರವಲ್ಲ, ಜಾತಿ, ಪಂಥಕ್ಕೊಂದು ಮಠ, ಮಂದಿರಗಳಿವೆ. ಸ್ವಾತಂತ್ರಪೂರ್ವದಲ್ಲಿ ಶಿಕ್ಷಣ ಕೆಲವರ ಸೊತ್ತಾಗಿದ್ದಾಗ, ಗುರುಕುಲವನ್ನು ವಿದ್ಯಾ ದೇಗುಲ ಎಂದು ಬಣ್ಣಿಸಲಾಗುತ್ತಿತ್ತು ನಿಜ. ಆದರೆ ಅಂಬೇಡ್ಕರ್ ಸಂವಿಧಾನ ಶಿಕ್ಷಣವನ್ನು ಎಲ್ಲರ ಸೊತ್ತಾಗಿ ಪರಿವರ್ತಿಸಿದಾಗ, ಶಾಲೆಗಳು ದೇಗುಲವೆನ್ನುವ ‘ಪಾವಿತ್ರತೆ’ಯಿಂದ ಮುಕ್ತಿ ಪಡೆಯಿತು. ಶಾಲೆಯೆಂಬ ಗರ್ಭಗುಡಿಯೊಳಗೆ ಸಂವಿಧಾನ ಎಲ್ಲರಿಗೂ ಪ್ರವೇಶವನ್ನು ದೊರಕಿಸಿಕೊಟ್ಟಿತು. ಮೆಕಾಲೆಯ ಶಿಕ್ಷಣದಲ್ಲಿ ಅದೆಷ್ಟು ಲೋಪ ದೋಷಗಳಿದ್ದರೂ, ‘ಸಮಾನತೆ’ ಅದರ ಬಹುದೊಡ್ಡ ಹೆಗ್ಗಳಿಕೆ. ಹೀಗೆ ಎಲ್ಲರ ಸೊತ್ತಾಗಿದ್ದ ಶಾಲೆಗಳನ್ನು ಮತ್ತೆ ಕೆಲವರದ್ದಷ್ಟೇ ಸೊತ್ತಾಗಿಸುವ ಪ್ರಯತ್ನ ಸರಕಾರದ ನೇತೃತ್ವದಲ್ಲೇ ನಡೆಯುತ್ತಿದೆ. ಇಂದು ಉಳ್ಳವರಿಗೊಂದು ಶಿಕ್ಷಣ, ಇಲ್ಲದವರಿಗೊಂದು ಶಿಕ್ಷಣ ಎನ್ನುವ ಅಸಮಾನತೆ ಸೃಷ್ಟಿಯಾಗಿ ಮೂರು ದಶಕಗಳು ಕಳೆದಿವೆ.

ಖಾಸಗಿ ಶಾಲೆ - ಸರಕಾರಿ ಶಾಲೆ, ಇಂಗ್ಲಿಷ್ ಮೀಡಿಯಂ ಶಾಲೆ-ಕನ್ನಡ ಮೀಡಿಯಂ ಶಾಲೆ ಇವುಗಳ ನಡುವಿನ ಅಂತರ ಸಮಾಜದ ಮೇಲೂ ಪರಿಣಾಮ ಬೀರುತ್ತಿದೆೆ. ಉಳ್ಳವರು-ಇಲ್ಲದವರ ನಡುವಿನ ಅಂತರವನ್ನು ಇದು ಹೆಚ್ಚಿಸುತ್ತಿದೆ. ಇವುಗಳ ಬೆನ್ನಿಗೇ ಮತ್ತೆ ಶಾಲೆಯನ್ನು ಸ್ವಾತಂತ್ರ ಪೂರ್ವಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಪಠ್ಯಪುಸ್ತಕಗಳ ಅಧ್ಯಾಯಗಳನ್ನೇ ಬದಲಿಸಿ, ಶಿಕ್ಷಣದ ಮೂಲ ಉದ್ದೇಶದ ಮೇಲೆಯೇ ದಾಳಿ ನಡೆಯುತ್ತಿದೆ. ಸ್ವಾತಂತ್ರ, ಸಮಾನತೆ, ಜಾತ್ಯತೀತತೆ, ಏಕತೆ ಇತ್ಯಾದಿಗಳನ್ನು ಬೋಧಿಸುತ್ತಿದ್ದ ನಮ್ಮ ಪಠ್ಯಗಳನ್ನು ಕಿತ್ತು ಆ ಜಾಗಕ್ಕೆ ಜಾತೀಯತೆ, ಬ್ರಿಟಿಷರ ಗುಲಾಮಗಿರಿ, ಅಸ್ಪಶ್ಯತೆ ಇತ್ಯಾದಿಗಳನ್ನು ವೈಭವೀಕರಿಸಿ ಸೇರಿಸುವ ಪ್ರಯತ್ನ ನಡೆದಿದೆ. ಅದರ ಭಾಗವಾಗಿಯೇ ನಾರಾಯಣ ಗುರು, ಭಗತ್ ಸಿಂಗ್, ಪೆರಿಯಾರ್, ಲಂಕೇಶ್, ಕುವೆಂಪು ಮೊದಲಾದವರ ಬರಹಗಳನ್ನ್ನು ಕಿತ್ತು ಆ ಜಾಗಕ್ಕೆ ಹೆಡಗೆವಾರ್‌ರಂತಹ ಜಾತಿವಾದಿ, ಕೋಮುವಾದಿ ಶಕ್ತಿಗಳನ್ನು ತುರುಕಲಾಗುತ್ತಿದೆ. ಈಗಾಗಲೇ ದೇಶಾದ್ಯಂತ ಇದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆಯಾದರೂ, ಸರಕಾರ ತನ್ನ ಕ್ರಮವನ್ನು ಸಮರ್ಥಿಸುವ ವ್ಯರ್ಥ ಪ್ರಯತ್ನ ನಡೆಸುತ್ತಿದೆ. ಭಗತ್ ಸಿಂಗ್ ಈ ದೇಶದ ಸ್ವಾತಂತ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯುವ ತರುಣ. ಆತ ಸ್ವಾತಂತ್ರ ಹೋರಾಟಗಾರರಿಗೆ ಮಾತ್ರವಲ್ಲ, ಇಂದಿಗೂ ನಮ್ಮ ಯುವಕರಿಗೆ ಆದರ್ಶವಾಗಿದ್ದಾರೆ. ಆತನನ್ನು ಕಲಿಯುವ ಮೂಲಕ ನಮ್ಮ ಯುವಕರು, ದೇಶಪ್ರೇಮವನ್ನು ಕಲಿಯುತ್ತಾರೆ ಮಾತ್ರವಲ್ಲ, ಸಮಾನತೆ, ಜಾತ್ಯತೀತತೆಯನ್ನು ಮೈಗೂಡಿಸಿಕೊಳ್ಳುತ್ತಾರೆ.

ನಾರಾಯಣ ಗುರುಗಳು ಕೇರಳದಲ್ಲಿ ಹುಟ್ಟದೇ ಇದ್ದಿದ್ದರೆ, ಇಂದಿಗೂ ಅದು ಜಾತಿಯ ಕೂಪವಾಗಿ ಬಿಡುತ್ತಿತ್ತು. ನಾರಾಯಣ ಗುರುಗಳು ಒಂದು ನಿರ್ದಿಷ್ಟ ಜಾತಿಯನ್ನಷ್ಟೇ ಪ್ರತಿನಿಧಿಸಲಿಲ್ಲ. ‘ಒಂದೇ ಜಾತಿ- ಒಂದೇ ದೇವರು’ ಎನ್ನುವುದನ್ನು ಪ್ರತಿಪಾದಿಸಿ ಕೇರಳದಲ್ಲಿರುವ ಅಸ್ಪಶ್ಯತೆಯ ವಿರುದ್ಧ ಬಹುದೊಡ್ಡ ಸಾಮಾಜಿಕ ಆಂದೋಲನವನ್ನು ಮಾಡಿದವರು. ಇಂದು ಕೇರಳ ರಾಜ್ಯವನ್ನು ಒಬ್ಬ ಬಿಲ್ಲವ ಸಮುದಾಯದ ನಾಯಕ ಮುಖ್ಯಮಂತ್ರಿಯಾಗಿ ಆಳುತ್ತಿದ್ದಾನೆ ಎಂದರೆ ಅದಕ್ಕೆ ನಾರಾಯಣ ಗುರುಗಳ ಕೊಡುಗೆಯೂ ಇದೆ. ನಾರಾಯಣ ಗುರುಗಳನ್ನು ಕಲಿಯುವ ಮೂಲಕ ನಮ್ಮ ಯುವಕರು ಈ ದೇಶದ ವಾಸ್ತವವನ್ನು ಅರಿತು ಜಾಗೃತರಾಗಿ ಮುನ್ನಡೆಯುವುದಕ್ಕೆ ಸಾಧ್ಯವಾಗುತ್ತದೆ. ಇಂದು ಬಿಲ್ಲವ ಸಮುದಾಯವೂ ಸೇರಿದಂತೆ ತಳಸ್ತರದ ಜಾತಿಯ ಜನರು ಮೇಲೆದ್ದು ನಿಲ್ಲುವುದಕ್ಕೆ ಹೇಗೆ ನಾರಾಯಣ ಗುರುಗಳು ಕಾರಣರಾದರು ಎನ್ನುವ ತಿಳುವಳಿಕೆ ಅವರಿಗೆ ಬರುತ್ತದೆ. ಸಂವಿಧಾನ ಬೋಧಿಸುವ ಸಮಾನತೆಯ ಜೊತೆಗೆ ಇವರೆಲ್ಲರಿಗೂ ನೇರ ಸಂಬಂಧ ವಿದೆ.

ಈ ದೇಶ ಪಡೆದ ಸ್ವಾತಂತ್ರದ ಮೂಲ ಚೈತನ್ಯ ಇವರು. ಇದೇ ಸಂದರ್ಭದಲ್ಲಿ ಕುವೆಂಪು, ಲಂಕೇಶ್ ಮೊದಲಾದವರು ನಮ್ಮ ಯುವಕರ ವೈಚಾರಿಕ ಚಿಂತನೆಯನ್ನು ಅರಳಿಸಿದರು. ದುರದೃಷ್ಟವಶಾತ್ ಸದ್ಯದ ಸರಕಾರಕ್ಕೆ ಮಕ್ಕಳ ಪಠ್ಯದಲ್ಲಿ ಇವರೆಲ್ಲ ಇರುವುದೇ ಬೇಡವಾಗಿದೆ. ಇಷ್ಟಕ್ಕೂ ಇವರಿಗೆ ಪರ್ಯಾಯವಾಗಿ ತುರುಕಿಸಲಾಗಿರುವ ಹೆಡಗೆವಾರ್ ಹಿನ್ನೆಲೆಯನ್ನು ಒಂದಿಷ್ಟು ನೋಡೋಣ. ಹೆಡಗೆವಾರ್ ಸ್ವಾತಂತ್ರ ಹೋರಾಟದಲ್ಲಿ ನೇರವಾಗಿ ಭಾಗವಹಿಸಿದ ಉದಾಹರಣೆಗಳೇ ಇಲ್ಲ. ಬದಲಿಗೆ ಇವರು ತಮ್ಮ ಬದುಕಿನುದ್ದಕ್ಕೂ ಬ್ರಿಟಿಷರ ಓಲೈಕೆಯಲ್ಲಿ ಜೀವನವನ್ನು ಕಳೆದರು. ಇವರು ಮೆಚ್ಚುವ ಚಿಂತನೆಗಳು ಈ ದೇಶದ ಜಾತಿಗಳನ್ನು ಎತ್ತಿ ಹಿಡಿಯುತ್ತವೆ. ಪ್ರೋತ್ಸಾಹಿಸುತ್ತದೆ. ಅಶೋಕ ಚಕ್ರವಿರುವ ರಾಷ್ಟ್ರಧ್ವಜವನ್ನು ವಿರೋಧಿಸಿದ ಇವರು ಕೇಸರಿ ಧ್ವಜಕ್ಕಷ್ಟೇ ಗೌರವವನ್ನು ಸಲ್ಲಿಸಿದವರು. ಇವರಿಂದ ನಮ್ಮ ವಿದ್ಯಾರ್ಥಿಗಳು ಕಲಿಯುವುದಾದರೂ ಏನನ್ನು ? ಈ ದೇಶಕ್ಕೆ ನೀಡಿದ ಯಾವ ಕೊಡುಗೆಗಾಗಿ ಇವರನ್ನು ಪಠ್ಯದಲ್ಲಿ ಸೇರಿಸಬೇಕು? ಅಷ್ಟೇ ಅಲ್ಲ, ತಳಸ್ತರದ ಹಲವು ಬರಹಗಾರರ ಬರಹಗಳನ್ನು ಕಿತ್ತು, ಆ ಜಾಗದಲ್ಲಿ ಮೇಲ್‌ಜಾತಿಯ ಜನರು ಬರೆದ ಬರಹಗಳನ್ನು ಪಠ್ಯವಾಗಿಸಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಪಠ್ಯಗಳಲ್ಲಿ ಈ ಬದಲಾವಣೆ ತರುವುದರ ಹಿಂದೆ ಎರಡು ಉದ್ದೇಶಗಳಿವೆ. ನಾರಾಯಣಗುರುಗಳನ್ನು ಪಠ್ಯದಲ್ಲಿ ಅಳವಡಿಸಿದಾಕ್ಷಣ, ಮೇಲ್‌ಜಾತಿಯ ಜನರು ಈ ಹಿಂದೆ ಕೆಳಜಾತಿಯ ಜನರ ಮೇಲೆ ಎಸಗಿದ ದೌರ್ಜನ್ಯ ಮುನ್ನೆಲೆಗೆ ಬರುತ್ತದೆ. ನಾರಾಯಣ ಗುರುಗಳು ತನ್ನ ಜೀವನದುದ್ದಕ್ಕೂ ಹೋರಾಡಿದ್ದು ಯಾವುದೋ ಅನ್ಯ ಧರ್ಮೀಯರ ವಿರುದ್ಧ ಅಲ್ಲ. ಹಿಂದೂ ಧರ್ಮದೊಳಗಿರುವ ಮೇಲ್‌ಜಾತಿಗಳ ವಿರುದ್ಧ. ಇದನ್ನು ಹೊಸತಲೆಮಾರಿನಿಂದ ಮುಚ್ಚಿಡುವ ಉದ್ದೇಶ ಇವರದು. ಭಗತ್ ಸಿಂಗ್ ಅವರು ಸ್ವಾತಂತ್ರಕ್ಕಾಗಿ ಹುತಾತ್ಮರಾದದ್ದಷ್ಟೇ ಅಲ್ಲ, ರಾಜಕೀಯವಾಗಿ ಅವರು ಸಮತಾವಾದಿ ಚಿಂತನೆಗಳನ್ನು ಹೊಂದಿದ್ದರು. ಸಮಾನತೆಯ ಕನಸನ್ನು ಕಂಡವರು. ಸಮಾನತೆ ಎನ್ನುವ ಪದ ಕೇಳಿದಾಕ್ಷಣ ಬೆಚ್ಚಿ ಬೀಳುವ ಮಂದಿ ಭಗತ್ ಸಿಂಗ್‌ನ ಪಠ್ಯವನ್ನು ಕಿತ್ತು ಹಾಕುವುದು ಸಹಜವೇ ಆಗಿದೆ.

ಪಠ್ಯ ಪುಸ್ತಕವನ್ನು ರೂಪಿಸುವ ಮಂದಿ ಶಿಕ್ಷಣ ತಜ್ಞರಾಗಿರಬೇಕು. ಇತಿಹಾಸಕಾರರು, ಸಂಶೋಧಕರು ಆಗಿರಬೇಕು. ಸಮಾಜ ವಿಜ್ಞಾನದ ಕುರಿತಂತೆ ಆಳವಾದ ಅರಿವು ಇರಬೇಕು. ಫೇಸ್‌ಬುಕ್‌ನಲ್ಲಿ ಅದೇನೋ ಗೀಚುತ್ತಾ, ಇಂಟರ್‌ನೆಟ್‌ನಿಂದ ಲೇಖನಗಳನ್ನು ಕದ್ದು ಒಂದೆರಡು ಪತ್ರಿಕೆಗಳಿಗೆ ಬರೆದು ಲೇಖಕ ಎಂದು ಕರೆಸಿಕೊಂಡವರೆಲ್ಲ ಪಠ್ಯಪುಸ್ತಕ ರಚನೆ ಸಮಿತಿಯಿಲ್ಲಿದ್ದರೆ ಈ ಅನಾಹುತ ಸಹಜವೇ ಆಗಿದೆ. ಮುಖ್ಯವಾಗಿ ಹೆಸರಿಗಷ್ಟೇ ಈ ಸಮಿತಿಯನ್ನು ರಚಿಸಲಾಗಿದೆ. ಯಾವ ಪಠ್ಯವನ್ನು ಸೇರಿಸಬೇಕು, ಸೇರಿಸಬಾರದು ಎನ್ನುವ ಸೂಚನೆ ನೇರವಾಗಿ ಆರೆಸ್ಸೆಸ್‌ನಿಂದಲೇ ಬಂದಿದೆ. ತಕ್ಷಣ ಈ ಪಠ್ಯ ಪುಸ್ತಕಗಳನ್ನು ಹಿಂದೆಗೆಯದೇ ಇದ್ದರೆ, ಭವಿಷ್ಯದಲ್ಲಿ ನಮ್ಮ ಶಿಕ್ಷಣ ಕ್ಷೇತ್ರ ಮತ್ತೆ ಬ್ರಿಟಿಷರ ಗುಲಾಮರನ್ನು, ಅಸ್ಪಶ್ಯತೆ, ಅಸಮಾನತೆಯ ಪ್ರತಿಪಾದಕರನ್ನು ಸೃಷ್ಟಿಸಲಿದೆ. ಅದು ಭಾರತವನ್ನು ಮತ್ತೆ ವೈದಿಕರ ಗುಲಾಮಗಿರಿಗೆ ತಳ್ಳಲಿದೆ. ಹಾಲು ಕುಡಿದ ಮಕ್ಕಳೇ ಬದುಕುವುದಿಲ್ಲ, ಇನ್ನು ಶಿಕ್ಷಣದ ಹೆಸರಲ್ಲಿ ವಿಷ ಕುಡಿದ ಮಕ್ಕಳು ಬದುಕಲು ಸಾಧ್ಯವೆ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X