ದಾಖಲೆಯ ಗರಿಷ್ಟ ಮಟ್ಟ ತಲುಪಿದ ಹವಾಮಾನ ಬದಲಾವಣೆ ಸೂಚಕ: ವಿಶ್ವಸಂಸ್ಥೆ
"ಜಾಗತಿಕ ಇಂಧನ ವ್ಯವಸ್ಥೆಯು ಮನುಕುಲವನ್ನು ದುರಂತದತ್ತ ಕೊಂಡೊಯ್ಯುತ್ತಿದೆ"
UN chief Antonio Guterres
ಜಿನೆವಾ, ಮೇ 18: ಹವಾಮಾನ ಬದಲಾವಣೆಯ ಎಲ್ಲಾ ಪ್ರಮುಖ 4 ಸೂಚಕಗಳು 2021ರಲ್ಲಿ ದಾಖಲೆಯ ಗರಿಷ್ಟ ಮಟ್ಟಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದ್ದು, ಜಾಗತಿಕ ಇಂಧನ ವ್ಯವಸ್ಥೆಯು ಮನುಕುಲವನ್ನು ದುರಂತದತ್ತ ಕೊಂಡೊಯ್ಯುತ್ತಿದೆ ಎಂದು ಎಚ್ಚರಿಸಿದ್ದಾರೆ.
ಹಸಿರು ಮನೆ ಅನಿಲ ಸಾಂದ್ರತೆಗಳು, ಸಮುದ್ರ ಮಟ್ಟದ ಏರಿಕೆ, ಸಾಗರ ಶಾಖ ಮತ್ತು ಸಮುದ್ರ ಆಮ್ಲೀಕರಣ- ಈ ನಾಲ್ಕು ಸೂಚಕಗಳು ಕಳೆದ ವರ್ಷ ನೂತನ ದಾಖಲೆ ಮಟ್ಟಕ್ಕೆ ಏರಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) ತನ್ನ ‘2021ರಲ್ಲಿ ಜಾಗತಿಕ ಹವಾಮಾನದ ಸ್ಥಿತಿಗತಿ’ ಎಂಬ ವರದಿಯಲ್ಲಿ ಉಲ್ಲೇಖಿಸಿದೆ.
ವಾರ್ಷಿಕ ಅವಲೋಕನವು ಹವಾಮಾನ ಅಡೆತಡೆಗಳನ್ನು ನಿಭಾಯಿಸುವಲ್ಲಿ ಮಾನವಕುಲದ ವೈಫಲ್ಯದ ನಿರಾಶಾಜನಕ ಕಥನವಾಗಿದೆ . ಜಾಗತಿಕ ಹವಾಮಾನ ವ್ಯವಸ್ಥೆ ತುಂಡಾಗಿದ್ದು ನಮ್ಮನ್ನು ಹವಾಮಾನ ದುರಂತದತ್ತ ಮತ್ತಷ್ಟು ಮುಂದೊತ್ತಿದೆ. ನಾವು ಪಳೆಯುಳಿಕೆ ಇಂಧನದ ಮಾಲಿನ್ಯವನ್ನು ಕೊನೆಗೊಳಿಸಬೇಕು ಮತ್ತು ನಮ್ಮ ಸ್ವಂತ ಮನೆಗೆ ಬೆಂಕಿ ಬೀಳುವ ಮುನ್ನ ನವೀಕರಿಸಬಹುದಾದ ಇಂಧನ ಪರಿವರ್ತನೆಯನ್ನು ವೇಗಗೊಳಿಸಬೇಕು ಎಂದು ವಿಶ್ವಸಂಸ್ಥೆಯ ಮುಖ್ಯಸೃ ಅಂಟೋನಿಯೊ ಘೆಬ್ರಯೇಸಸ್ ಹೇಳಿದ್ದಾರೆ.