ಬೈಂದೂರು: ಶಿಕ್ಷಕ ದಂಪತಿಯ ಮಗಳು ಅಕ್ಷತಾ ಎಸೆಸೆಲ್ಸಿಯಲ್ಲಿ ಟಾಪರ್

ಬೈಂದೂರು, ಮೇ ೧೯: ಶಿಕ್ಷಕ ದಂಪತಿಯ ಮಗಳು, ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಸಾಂದೀಪನಾ ಇಂಗ್ಲೀಷ್ ಮಿಡೀಯಂ ಹೈಸ್ಕೂಲಿನ ಅಕ್ಷತಾ 625 ಅಂಕ ಗಳಿಸುವ ಮೂಲಕ ಟಾಪರ್ ಆಗಿ ಮೂಡಿಬಂದಿದ್ದಾರೆ.
ಇವರು ಹಾಲೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾಗೇಶ್ ನಾಯ್ಕ್ ಹಾಗೂ ನಾವುಂದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಶಾಲಿನಿ ನಾಯ್ಕ್ ದಂಪತಿ ಪುತ್ರಿ.
ಸಾಧನೆ ಪ್ರತಿಕ್ರಿಯಿಸಿರುವ ಅಕ್ಷತಾ, ಈ ನಿರೀಕ್ಷಿತ ಸಾಧನೆಯಿಂದ ತುಂಬಾ ಖಷಿಯಾಗಿದೆ. ಪ್ರತಿಯೊಂದು ವಿಷಯವನ್ನು ಗಮನ ಇಟ್ಟು ಕೇಳಿ ಅರ್ಥ ಮಾಡಿಕೊಂಡು ಓದುತ್ತಿದ್ದೆ. ಓದುವುದರಲ್ಲಿ ಶಿಕ್ಷಕರ ಮಾರ್ಗದರ್ಶನ ಅನುಸರಿ ಸುತ್ತಿದೆ. ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದ ಸಾಧನೆ ಮಾಡಲು ಸಾಧ್ಯ. ಮುಂದೆ ಪಿಯುಸಿಯಲ್ಲಿ ಸೈನ್ಸ್ ಪಿಸಿಎಂಬಿ ಪಡೆದು, ವೈದ್ಯೆಯಾಗಿ ಜನ ಸೇವೆ ಮಾಡುವ ಗುರಿ ಹೊಂದಿದ್ದೇನೆ ಎಂದರು.
Next Story