ಐಪಿಎಲ್: ಗುಜರಾತ್ ವಿರುದ್ಧ ಆರ್ಸಿಬಿಗೆ 8 ವಿಕೆಟ್ ಗೆಲುವು, ಪ್ಲೇ ಆಫ್ ಆಸೆ ಜೀವಂತ
ವಿರಾಟ್ ಕೊಹ್ಲಿ ಅರ್ಧಶತಕ, ಹಾರ್ದಿಕ್ ಪಾಂಡ್ಯ ಹೋರಾಟ ವ್ಯರ್ಥ

Photo:twitter
ಮುಂಬೈ, ಮೇ 19: ಆರಂಭಿಕ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ(73 ರನ್, 54 ಎಸೆತ, 8 ಬೌಂಡರಿ, 2 ಸಿಕ್ಸರ್)ಹಾಗೂ ಎಫ್ ಡು ಪ್ಲೆಸಿಸ್(44 ರನ್, 38 ಎಸೆತ, 5 ಬೌಂಡರಿ)ಮೊದಲ ವಿಕೆಟ್ಗೆ ಸೇರಿಸಿದ 115 ರನ್ ಭರ್ಜರಿ ಜೊತೆಯಾಟದ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ನ 67ನೇ ಪಂದ್ಯದಲ್ಲಿ ಗೆಲ್ಲಲು 169 ರನ್ ಗುರಿ ಬೆನ್ನಟ್ಟಿದ ಆರ್ಸಿಬಿ 18.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್ವೆಲ್ (ಔಟಾಗದೆ 40, 18 ಎಸೆತ, 5 ಬೌಂಡರಿ, 2 ಸಿಕ್ಸರ್)ಹಾಗೂ ದಿನೇಶ್ ಕಾರ್ತಿಕ್(ಔಟಾಗದೆ 2)ತಂಡಕ್ಕೆ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು. 14ನೇ ಪಂದ್ಯದಲ್ಲಿ 8ನೇ ಗೆಲುವು ದಾಖಲಿಸಿರುವ ಆರ್ಸಿಬಿ ಒಟ್ಟು 16 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಈ ಮೂಲಕ ಆರ್ಸಿಬಿಯ ಪ್ಲೇ-ಆಫ್ ಆಸೆ ಜೀವಂತವಾಗಿದೆ.
ಗುಜರಾತ್ ಪರ ರಶೀದ್ ಖಾನ್(2-32)ಎರಡು ವಿಕೆಟ್ಪಡೆದು ಮಿಂಚಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಗುಜರಾತ್ ತಂಡವು ನಾಯಕ ಹಾರ್ದಿಕ್ ಪಾಂಡ್ಯ (ಔಟಾಗದೆ 62 ರನ್) ನೆರವಿನಿಂದ 5 ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕಿದೆ.
ಆರಂಭಿಕ ಬ್ಯಾಟರ್ ಶುಭಮನ್ ಗಿಲ್(1)ವಿಕೆಟನ್ನು 3ನೇ ಓವರ್ನಲ್ಲಿ ಕಳೆದುಕೊಂಡ ಗುಜರಾತ್ ಕಳಪೆ ಆರಂಭ ಪಡೆಯಿತು. ಮ್ಯಾಥ್ಯೂ ವೇಡ್(16ರನ್)ದೊಡ್ಡ ಸ್ಕೋರ್ ಗಳಿಸಲಿಲ್ಲ. ಇನ್ನೋರ್ವ ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಹಾ(31 ರನ್,22 ಎಸೆತ)ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸಲು ವಿಫಲರಾದರು.
ಗುಜರಾತ್ 62 ರನ್ಗೆ 3 ವಿಕೆಟ್ ಕಳೆದುಕೊಂಡಿತ್ತು. ಆಗ ಡೇವಿಡ್ ಮಿಲ್ಲರ್(34ರನ್, 25 ಎಸೆತ) ಹಾಗೂ ಪಾಂಡ್ಯ(ಔಟಾಗದೆ 62, 47 ಎಸೆತ, 4 ಬೌಂ., 3 ಸಿ.) 4ನೇ ವಿಕೆಟ್ಗೆ 61 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಮಿಲ್ಲರ್,ರಾಹುಲ್ ತೆವಾಟಿಯಾ(2) ಬೆನ್ನುಬೆನ್ನಿಗೆ ಔಟಾದಾಗ ಸ್ಪಿನ್ನರ್ ರಶೀದ್ ಖಾನ್ (19 ರನ್, 6 ಎಸೆತ, 1ಬೌಂಡರಿ, 2 ಸಿಕ್ಸರ್) ಜೊತೆಗೆ 6ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 36 ರನ್ ಸೇರಿಸಿದ ಪಾಂಡ್ಯ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಆರ್ಸಿಬಿ ಪರ ಜೋಶ್ ಹೇಝಲ್ವುಡ್(2-39)ಯಶಸ್ವಿ ಬೌಲರ್ ಎನಿಸಿಕೊಂಡರು. ಮ್ಯಾಕ್ಸ್ವೆಲ್(1-28) ಹಾಗೂ ಹಸರಂಗ(1-25)ತಲಾ ಒಂದು ವಿಕೆಟ್ ಪಡೆದರು.