ಬಿಜೆಪಿ ‘ನಕಲಿ’ ಹಿಂದು ಧರ್ಮವನ್ನು ಬಿಂಬಿಸುತ್ತಿದೆ:ಕೀರ್ತಿ ಆಜಾದ್

keerthi azad
ಪಣಐ,ಮೇ 19: ಟಿವಿಗಳಲ್ಲಿ ‘ನಕಲಿ’ ಹಿಂದು ಧರ್ಮವನ್ನು ತೋರಿಸಲಾಗುತ್ತಿದೆ ಎಂದು ಗುರುವಾರ ಇಲ್ಲಿ ಆರೋಪಿಸಿದ ಟಿಎಂಸಿಯ ಗೋವಾ ಉಸ್ತುವಾರಿ ಹಾಗೂ ಮಾಜಿ ಸಂಸದ ಕೀರ್ತಿ ಆಜಾದ್ ಅವರು,‘ಸನಾತನ ಧರ್ಮ’ ಕುರಿತು ಚರ್ಚೆಗೆ ಬರುವಂತೆ ಬಿಜೆಪಿ ಮತ್ತು ಆರೆಸ್ಸೆಸ್ಗೆ ಸವಾಲು ಹಾಕಿದರು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು,ತಾನು ಸೀತೆ ಜನಿಸಿದ ನೆಲದಿಂದ ಬಂದಿದ್ದೇನೆ. ನೀವು ಸನಾತನ ಧರ್ಮದ ಗ್ರಂಥಗಳನ್ನು ಓದಿದರೆ ಅವು ಸಪ್ತಮಿ ಮತ್ತು ಅಷ್ಟಮಿ ಸಂದರ್ಭಗಳಲ್ಲಿ ಬಲಿಗೆ ಕರೆ ನೀಡುತ್ತವೆ. ಬಲಿಯು ಸಂಪ್ರದಾಯದ ಭಾಗವಾಗಿರುವ ಇಂತಹ ಅನೇಕ ಸಂದರ್ಭಗಳು ಇದ್ದಿರಬಹುದು. ಹೀಗಿರುವಾಗ ಬಿಜೆಪಿಯು ಅದ್ಹೇಗೆ ಸಸ್ಯಾಹಾರ ಮತ್ತು ಮಾಂಸಾಹಾರದ ಬಗ್ಗೆ ಮಾತನಾಡುತ್ತದೆ ಎಂದು ಪ್ರಶ್ನಿಸಿದರು.
‘ನಿರುದ್ಯೋಗ,ಹಣದುಬ್ಬರ,ಏರುತ್ತಿರುವ ಸಗಟು ಸೂಚ್ಯಂಕ,ಬೆಲೆ ಸೂಚ್ಯಂಕಗಳ ಬಗ್ಗೆ ಚರ್ಚೆಗಳನ್ನು ನಾವು ಕೇಳಿದ್ದೇವೆಯೇ? ನಾವು ಕೇವಲ ಸಸ್ಯಾಹಾರಿಗಳು ವಿರುದ್ಧ ಮಾಂಸಾಹಾರಿಗಳು ಕುರಿತು ಕೇಳುತ್ತಿದ್ದೇವೆ. ಈ ರೀತಿಯಲ್ಲಿ ದೇಶವು ಪ್ರಗತಿಯಾಗುತ್ತದೆಯೇ? ಟಿವಿಗಳಲ್ಲಿ ತೋರಿಸಲಾಗುತ್ತಿರುವ ‘ನಕಲಿ’ ಹಿಂದು ಧರ್ಮದ ಬಗ್ಗೆ ಜನರು ತಿಳಿದುಕೊಳ್ಳಬೇಕು ’ಎಂದರು.
ಇಂಧನ ಬೆಲೆ ಏರಿಕೆ ಕುರಿತಂತೆ ಆಜಾದ್,ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಐಪಿಎಲ್ನಲ್ಲಿ ಶತಕಗಳನ್ನು ಬಾರಿಸಲು ಸಾಧ್ಯವಾಗಿಲ್ಲ,ಆದರೆ ಕಳೆದ ಆರು ತಿಂಗಳುಗಳಿಂದ ಇಂಧನ ಬೆಲೆಗಳು ಶತಕಗಳನ್ನು ಬಾರಿಸಿವೆ ಮತ್ತು ಈ ಪ್ರವೃತ್ತಿ ಮುಂದುವರಿದೆ ಎಂದರು