ಪತ್ರಕರ್ತೆ ಶಿರೀನ್ ಹತ್ಯೆಯ ತನಿಖೆ ನಡೆಸದಿರಲು ಇಸ್ರೇಲ್ ನಿರ್ಧಾರ: ವರದಿ
PHOTO:AP
ಜೆರುಸಲೇಂ, ಮೇ 19: ಅಲ್ ಜಝೀರಾದ ಪತ್ರಕರ್ತೆ ಶಿರೀನ್ ಹತ್ಯೆ ಪ್ರಕರಣದ ತನಿಖೆ ನಡೆಸದಿರಲು ಇಸ್ರೇಲ್ ಸೇನೆ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತನಿಖೆ ನಡೆಸುವುದು ಇಸ್ರೇಲ್ನಲ್ಲಿ ವಿವಾದಕ್ಕೆ ಕಾರಣವಾಗಬಹುದು. ಇಸ್ರೇಲ್ ಯೋಧರನ್ನು ಶಂಕಿತರ ಸ್ಥಾನದಲ್ಲಿ ಇರಿಸಿ ತನಿಖೆ ನಡೆಸುವುದಕ್ಕೆ ಇಸ್ರೇಲ್ ಸಮಾಜದಿಂದ ವಿರೋಧ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಇಸ್ರೇಲ್ ಸೇನೆಯ ಪೊಲೀಸ್ ಕ್ರಿಮಿನಲ್ ತನಿಖಾ ವಿಭಾಗ ತನಿಖೆ ನಡೆಸದಿರಲು ನಿರ್ಧರಿಸಿದೆ ಎಂದು ಇಸ್ರೇಲ್ನ ಹಾರ್ತೆಜ್ ದಿನಪತ್ರಿಕೆಯ ವರದಿ ತಿಳಿಸಿದೆ.
ಇಸ್ರೇಲ್ ಸೇನೆಯ ನಿರ್ಧಾರದಿಂದ ತಮಗೆ ಆಶ್ಚರ್ಯವಾಗಿಲ್ಲ. ಇಸ್ರೇಲ್ ಕಡೆಯಿಂದ ಇದನ್ನು ನಾವು ನಿರೀಕ್ಷಿಸಿದ್ದೆವು. ಆದ್ದರಿಂದಲೇ ತನಿಖೆಯಲ್ಲಿ ಅವರನ್ನು ಸೇರಿಸುವುದು ಬೇಡ ಎಂದು ಹೇಳಿದ್ದೆವು. ಈಗ ಪಾರದರ್ಶಕ ತನಿಖೆ ನಡೆಸುವಂತೆ ಅಮೆರಿಕ(ಶಿರೀನ್ ಅಮೆರಿಕದ ಪ್ರಜೆ) ಮತ್ತು ಅಂತರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸುತ್ತೇವೆ ಎಂದು ಶಿರೀನ್ ಕುಟುಂಬದವರು ಪ್ರತಿಕ್ರಿಯಿಸಿದ್ದಾರೆ.
Next Story