ಎಸೆಸೆಲ್ಸಿ ಫಲಿತಾಂಶ: ನಫೀಸತ್ ಸಾಜಿದಾ ಉನ್ನತ ಶ್ರೇಣಿಯಲ್ಲಿ ತೇರ್ಗಡೆ
ಉಪ್ಪಿನಂಗಡಿ : ಎಸೆಸೆಲ್ಸಿ ಪರೀಕ್ಷೆಯಲ್ಲಿ ಕರಾಯ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಎಚ್. ನಫೀಸತ್ ಸಾಜಿದಾ 611 ಅಂಕಗಳನ್ನು ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಈಕೆ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರೂ, ಅಲ್ ಅಝ್ಹರಿಯಾ ಮಂಗಳೂರು ಇದರ ಪ್ರಾಂಶುಪಾಲರೂ ಆದ ಶೈಖುನಾ ಕೆಎಂ ಹೈದರ್ ಮದನಿ ಕರಾಯ ಹಾಗೂ ಅವ್ವಮ್ಮ ದಂಪತಿಯ ಪುತ್ರಿ.
ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಅಧ್ಯಾಪಕ ವೃಂದ, ಆಡಳಿತ ಸಮಿತಿ, ಕೆ.ಎಚ್ ಫ್ಯಾಮಿಲಿ, ಚೊಕ್ಕಬೆಟ್ಟು ಫ್ಯಾಮಿಲಿ ಅಭಿನಂದನೆ ಸಲ್ಲಿಸಿದೆ.
Next Story