ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ಗೆ ಶೇ.97.62 ಫಲಿತಾಂಶ
ಉಡುಪಿ : ಮಲ್ಪೆಯ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ನ ೨೦೨೧-೨೨ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.೯೭.೬೨ ಫಲಿತಾಂಶ ಪಡೆದಿದೆ.
ಒಟ್ಟು ೪೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ೧೬ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ, ೨೪ ಮಂದಿ ಪ್ರಥಮ ದರ್ಜೆಯಲ್ಲಿ ಹಾಗೂ ಒಬ್ಬರು ಉತ್ತೀರ್ಣರಾಗಿದ್ದಾರೆ. ಶಶಾಂಕ್ ಶೇ.೯೭.೬, ಅಫಾನ್ ಮಿರ್ಝಾ ಉಸ್ಮಾನ್ ಶೇ.೯೭.೪೪, ಸಾನಿಯಾ ಶೇ.೯೬ ಅಂಕ ಗಳಿಸಿದ್ದಾರೆ.
ಈ ಬಾರಿಯ ಎಸ್ಎಸ್ಎಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ತೋನ್ಸೆ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ನಬೀಲಾ ಅಂಜುಮ್ ೬೧೨(ಶೇ.೯೭.೯೨), ತಸ್ಮಿಯಾ ಅಂಜುಮ್ ೬೦೭(ಶೇ.೯೭.೧೨), ಅಫ್ತಾ ರುಹಾ ೬೦೩(ಶೇ.೯೬.೪೮) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
Next Story