ಮಂಗಳೂರಿನಲ್ಲಿ ಎನ್‌ಡಬ್ಲ್ಯುಎಫ್ ಪ್ರತಿಭಟನೆ

ಮಂಗಳೂರು : ಉತ್ತರ ಪ್ರದೇಶದ ಪೊಲೀಸರು ಗುಂಡು ಹಾರಿಸಿ ಮಹಿಳೆಯನ್ನು ಬರ್ಬರವಾಗಿ ಹತೈಗೈದಿದ್ದಾರೆ ಎನ್ನಲಾದ ಕೃತ್ಯವನ್ನು ಖಂಡಿಸಿ ನ್ಯಾಷನಲ್ ವಿಮೆನ್ಸ್ ಫ್ರಂಟ್‌ನ ದ.ಕ.ಜಿಲ್ಲಾ ಸಮಿತಿಯು ಶುಕ್ರವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು.
ತನ್ನ ಮಗನ ಬಂಧನವನ್ನು ತಡೆಯಲು ಬಂದ ತಾಯಿಯನ್ನು ಉತ್ತರ ಪ್ರದೇಶದ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಈ ಘಟನೆಯು ಆಘಾತಕಾರಿಯಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎನ್‌ಡಬ್ಲ್ಯುಎಫ್ ರಾಜ್ಯಾಧ್ಯಕ್ಷೆ ಫರ್ಝಾನಾ, ಮಿಡಿತ ಪತ್ರಿಕೆಯ ಉಪಸಂಪಾದಕಿ ಮುಜಾಹಿದಾ, ವಿದ್ಯಾರ್ಥಿ ನಾಯಕಿಯರಾದ ಗೌಸಿಯಾ, ಸಹಲಾ ಮಾತನಾಡಿದರು.
ದ.ಕ.ಜಿಲ್ಲಾಧ್ಯಕ್ಷೆ ಝುಲೈಖಾ, ಮಂಗಳೂರು ನಗರ ಕಾರ್ಯದರ್ಶಿ ಶಹನಾಝ್ ಕಂದಕ್, ಮಂಗಳೂರು ವಲಯ ಅಧ್ಯಕ್ಷೆ ರಮ್ಲತ್ ಕುದ್ರೋಳಿ, ಬಂಟ್ವಾಳ ಘಟಕದ ಅಧ್ಯಕ್ಷೆ ಅಫ್ರೀನಾ, ಮಿನಾಝ್, ರಮ್ಲತ್ ವಾಮಂಜೂರು ಮತ್ತಿತರರು ಉಪಸ್ಥಿತರಿದ್ದರು.
Next Story