ಮಂಗಳೂರು: ಮೇ 22ರಂದು ಲ್ಯಾಂಡ್ ಟ್ರೇಡ್ಸ್ ಅನಂತೇಶ್ ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಮಂಗಳೂರು : ನಗರದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಮತ್ತು ಡೆವಲಪರ್ಸ್‌ನ ನೂತನ ವಾಣಿಜ್ಯ ಸಂಕೀರ್ಣ ‘ಅನಂತೇಶ್’ ಔಪಚಾರಿಕ ಉದ್ಘಾಟನೆಗೆ ಸಜ್ಜಾಗಿದೆ. ಮಂಗಳೂರು ಕಾರ್‌ಸ್ಟ್ರೀಟ್ ನಲ್ಲಿರುವ ಈ ಅತ್ಯಾಧುನಿಕ ಕಟ್ಟಡವು ಮೇ 22ರಂದು ಬೆಳಗ್ಗೆ 10ಕ್ಕೆ ಉದ್ಘಾಟನೆಗೊಳ್ಳಲಿದೆ.
ವಿವಿಧ ವಾಣಿಜ್ಯ ಅಗತ್ಯಗಳಿಗೆ ಸರಿಹೊಂದುವಂತೆ ಆಧುನಿಕ ವ್ಯಾಪಾರಕ್ಕನುಗುಣವಾಗಿ ವಿವಿಧ ರೀತಿಯ ಸೌಲಭ್ಯಗಳೊಂದಿಗೆ ಅನಂತೇಶ್ ಅನ್ನು ರಚಿಸಲಾಗಿದೆ. ಶೋರೂಂಗಳು, ಅಂಗಡಿಗಳು, ಬೂಟೀಕ್‌ಗಳು, ಕಚೇರಿಗಳು ಮತ್ತು ಕನ್ಸಲ್ಟೆಂಟ್ ಚೇಂಬರ್‌ಗಳಿಗೆ ಸ್ಥಳಾವಕಾಶಗಳಿವೆ, ಅತ್ಯುತ್ತಮ ಸೌಕರ್ಯಗಳು, ಸೌಲಭ್ಯಗಳು ಮತ್ತು ಅನುಕೂಲಗಳು ಇಲ್ಲಿ ಲಭ್ಯ. ವಿಶಾಲವಾದ ಹಾದಿಗಳು, ಮೆಟ್ಟಿಲುಗಳು ಮತ್ತು ಸಾಮಾನ್ಯ ಪ್ರದೇಶಗಳು ಗ್ರಾಹಕರ ಸುಲಭ ಚಲನೆಗೆ ಅನುವು ಮಾಡಿಕೊಡಲಿದೆ.
ನೆಲ ಮತ್ತು ನಾಲ್ಕು ಅಂತಸ್ತಿನ ಈ ಅತ್ಯಾಧುನಿಕ ಕಟ್ಟಡವು ನೆಲಮಾಳಿಗೆಯ ಪಾಕಿರ್ಂಗ್, ಎರಡು ಸ್ವಯಂ ಚಾಲಿತ ಲಿಫ್ಟ್ ಗಳು, ಬ್ಯಾಕಪ್ ಪವರ್ ಜನರೇಟರ್‌ನಂತಹ ಸೌಲಭ್ಯಗಳನ್ನು ಹೊಂದಿದೆ. ನೀರಿನ ಸಂರಕ್ಷಣೆಗಾಗಿ ಕಟ್ಟಡ ವಿನ್ಯಾಸದಲ್ಲಿ ಮಳೆ ನೀರು ಕೊಯ್ಲು ಅಳವಡಿಸಲಾಗಿದೆ. ಭದ್ರತೆ ಮತ್ತು ಸುರಕ್ಷತೆಗಾಗಿ ಆಯಕಟ್ಟು ಪ್ರದೇಶಗಳಲ್ಲಿ ಸಿಸಿಟಿವಿ ಮತ್ತು ಅಗ್ನಿಶಾಮಕ ಸೌಲಭ್ಯಗಳನ್ನು ಹೊಂದಿದೆ. ಕಟ್ಟಡ ನಿರ್ಮಾಣದಲ್ಲಿ ಅತ್ಯುತ್ತಮ ಸಾಮಗ್ರಿಗಳನ್ನು ಬಳಸಲಾಗಿದೆ.
ಮಂಗಳೂರಿನ ಜನಪ್ರಿಯ ಹೂ ಮಾರ್ಕೆಟ್ ಪಕ್ಕದಲ್ಲಿರುವ ‘ಅನಂತೇಶ್’, ಈ ಪ್ರದೇಶದ ಬಹು ಹೆಮ್ಮೆಯ ವ್ಯಾಪಾರ ಕೇಂದ್ರವಾಗಲಿದೆ. ಮಂಗಳೂರಿನ ಪಾರಂಪರಿಕ ಸ್ಥಳವಾಗಿರುವ ಕಾರ್‌ಸ್ಟ್ರೀಟ್‌ನ ಸುತ್ತಮುತ್ತ ಹಲವಾರು ದೇವಾಲಯಗಳೊಂದಿಗೆ, ಯಾವಾಗಲೂ ಚಟುವಟಿಕೆಗಳಿಂದ ತುಂಬಿರುತ್ತದೆ. ಈ ಪ್ರದೇಶಕ್ಕೆ ಹೊಸ ವಾಣಿಜ್ಯ ಹೆಗ್ಗುರುತನ್ನು ಕೊಡುಗೆಯಾಗಿ ನೀಡಲು ನಾವು ಹೆಮ್ಮೆಪಡುತ್ತೇವೆ’ ಎಂದು ಲ್ಯಾಂಡ್ ಟ್ರೇಡ್ಸ್ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಹೇಳುತ್ತಾರೆ.
‘ಅನಂತೇಶ್’ ಅನ್ನು ಮಂಗಳೂರಿನ ಆರ್ಕಿ-ಟೆಕ್ನಿಕ್ಸ್‌ನ ಸಂಸ್ಥೆಯ ವಾಸ್ತುಶಿಲ್ಪಿ ಪೀಟರ್ ಮಸ್ಕರೇನ್ಹಸ್ ವಿನ್ಯಾಸಗೊ ಳಿಸಿದ್ದಾರೆ. ನಿರ್ಮಾಣ ಕಾರ್ಯವನ್ನು ಅಂತರ್‌ರಾಷ್ಟ್ರೀಯ ಮಟ್ಟದ ನಿರ್ಮಾಣ ಸಂಸ್ಥೆ ಎಂಫಾರ್ ಕನ್‌ಸ್ಟ್ರಕ್ಷನ್ಸ್ ನಿರ್ವಹಿಸಿದೆ. ನಿರ್ಮಾಣದ ಗುಣಮಟ್ಟವನ್ನು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ಸ್ ಸಂಸ್ಥೆಯಾದ ಗೋಕುಲ ರಾಜ್ ಅಸೋಸಿಯೇಟ್ಸ್ ನಿರ್ವಹಿಸಿದ್ದಾರೆ.
ಲ್ಯಾಂಡ್ ಟ್ರೇಡ್ಸ್ ಯೋಜನೆಗಳು ಪರಿಪೂರ್ಣ ದಾಖಲಾತಿಗೆ ಹೆಸರುವಾಸಿಯಾಗಿವೆ. ಎಲ್ಲಾ ಯೋಜನೆಗಳು ಸ್ಪಷ್ಟ ದಾಖಲಾತಿ ಪತ್ರಗಳು ಮತ್ತು ಪ್ರಾಜೆಕ್ಟ್ ಪೂರ್ಣಗೊಂಡ ನಂತರ ಕಟ್ಟಡ ಪ್ರವೇಶ ಅನುಮತಿ ಪತ್ರವನ್ನು ಹೊಂದಿದ್ದು, ಮನೆ ಮತ್ತು ವಾಣಿಜ್ಯ ಮಾಲಕತ್ವವನ್ನು ಗ್ರಾಹಕರಿಗೆ ತೊಂದರೆ- ತೊಡಕುಗಳಿಲ್ಲದೆ ಆನಂದಿಸಲು ಅನುವು ಮಾಡಿಕೊಡುತ್ತದೆ.
ವಿಳಾಸ: ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಮತ್ತು ಡೆವಲಪರ್ಸ್, ಮೈಲ್‌ಸ್ಟೋನ್ ೨೫, ೫ನೇ ಮಹಡಿ, ಅಂಗಡಿ ಸಂಖ್ಯೆ ೫೧೪, ಕಲೆಕ್ಟರ್ಸ್‌ಗೇಟ್ ಜಂಕ್ಷನ್, ಬಲ್ಮಟ, ಮಂಗಳೂರು - ೫೭೫೦೦೧ (ದೂ.ಸಂ.: ೦೮೨೪-೨೪೨೫೪೨೪, ೨೪೨೩೮೬೬) ಇ-ಮೇಲ್: info@landtrades.in, www.landtrades.in
29 ವರ್ಷಗಳ ಸೇವೆ
ಮಂಗಳೂರಿನ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಡೆವಲಪರ್ಸ್ ಪ್ರಮುಖ ಗೃಹನಿರ್ಮಾಣ ಸಂಸ್ಥೆಯಾಗಿದ್ದು, ಯಶಸ್ವೀ ಯೋಜನೆಗಳನ್ನು ಉತ್ತೇಜಿಸುವಲ್ಲಿ 29 ವರ್ಷಗಳ ದಾಖಲೆಯನ್ನು ಹೊಂದಿದೆ. ೧೯೯೨ರಲ್ಲಿ ಮೊದಲ ತಲೆಮಾರಿನ ಉದ್ಯಮಿ ಕೆ.ಶ್ರೀನಾಥ್ ಹೆಬ್ಬಾರ್ ಸ್ಥಾಪಿಸಿದ ಲ್ಯಾಂಡ್ ಟ್ರೇಡ್ಸ್ ಐಎಸ್‌ಒ ೯೦೦೧:೨೦೧೫ ಸಂಸ್ಥೆಯಾಗಿದ್ದು, ಕ್ರಿಸಿಲ್‌ನಿಂದ ‘ಡಿಎ೨’ ರಿಯಲ್ ಎಸ್ಟೇಟ್ ಡೆವಲಪರ್ ರೇಟಿಂಗ್ ಅನ್ನು ಹೊಂದಿದೆ.
ಕಟ್ಟಡಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಕಾರ್ಯದಲ್ಲಿ ಹೆಸರುವಾಸಿಯಾಗಿರುವ ಈ ಸಂಸ್ಥೆ ಸಾಯಿ ಗ್ರ್ಯಾಂಡಿಯರ್, ಮೌರಿಷ್ಕಾ ಪ್ಯಾಲೇಸ್, ಅಟ್ಲಾಂಟಿಸ್ ಮತ್ತು ಸಾಲಿಟೇರ್‌ನಂತಹ ಖ್ಯಾತ ವಸತಿ ಸಮುಚ್ಛಯಗಳನ್ನು ಅಭಿವೃದ್ಧಿಪಡಿಸಿದೆ. ಸಂಸ್ಥೆಯು ಇದುವರೆಗೆ ೩೭ ವಸತಿ ಯೋಜನೆಗಳು, ೩,೦೦೦+ ಮನೆಗಳು ಮತ್ತು ೪೧.೩೨ ಲಕ್ಷ ಚದರ ಅಡಿಗಳ ಬಿಲ್ಟ್-ಅಪ್ ವಿಸ್ತೀರ್ಣವನ್ನು ಪೂರ್ಣಗೊಳಿಸಿದೆ.