ಮದ್ಯದ ಮತ್ತಿನಲ್ಲಿ ವ್ಯಕ್ತಿಗೆ ಹಲ್ಲೆಗೈದ ಜೋ ಬೈಡನ್ ಭದ್ರತಾ ಸಿಬ್ಬಂದಿ ದಕ್ಷಿಣ ಕೊರಿಯಾದಲ್ಲಿ ಸೆರೆ
ಸಿಯೋಲ್, ಮೇ 20: ಮದ್ಯಪಾನದ ಮತ್ತಿನಲ್ಲಿ ದಕ್ಷಿಣ ಕೊರಿಯಾದ ಪ್ರಜೆಯೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಭದ್ರತಾ ತಂಡದ ಸಿಬಂದಿಯೊಬ್ಬನನ್ನು ಬಂಧಿಸಿರುವುದಾಗಿ ದಕ್ಷಿಣ ಕೊರಿಯಾ ಪೊಲೀಸರು ಹೇಳಿದ್ದಾರೆ.
ದಕ್ಷಿಣ ಕೊರಿಯಾಕ್ಕೆ ಬೈಡನ್ ಭೇಟಿಗೂ ಮುನ್ನ ಅಲ್ಲಿನ ಭದ್ರತೆಯ ಪರಿಶೀಲನೆಗೆ ಮತ್ತು ಭದ್ರತಾ ಕಾರ್ಯದ ಸಿದ್ಧತೆಗೆ ಸಿಯೋಲ್ ಗೆ ತೆರಳಿದ್ದ ಈ ಭದ್ರತಾ ಸಿಬಂದಿ ಗುರುವಾರ ಟ್ಯಾಕ್ಸಿಯಲ್ಲಿ ತೆರಳುವ ವಿಷಯದಲ್ಲಿ ವ್ಯಕ್ತಿಯೊಬ್ಬನ ಜತೆ ಮಾತಿನ ಚಕಮಕಿಯ ಬಳಿಕ ಆತನ ಮೇಲೆ ಹಲ್ಲೆ ನಡೆಸಿರುವುದಾಗಿ ಸಿಯೋಲ್‌ನ ಯಾಂಗ್‌ಸಾನ್ ಜಿಲ್ಲಾ ಪೊಲೀಸರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಕೊರಿಯಾಕ್ಕೆ ಭೇಟಿ ನೀಡುವ ಸಂದರ್ಭ ಬೈಡನ್ ಉಳಿದುಕೊಳ್ಳುವ ಗ್ರ್ಯಾಂಡ್ ಹಯಾತ್ ಹೋಟೆಲ್ ನ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಏಶ್ಯಾಕ್ಕೆ ಪ್ರಥಮ ಭೇಟಿ ನೀಡಿರುವ ಬೈಡನ್, ಶುಕ್ರವಾರ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ಗೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.
Next Story