ಶಾಂತಿ ಮಾತುಕತೆಗೆ ಮುಂದಾಗಲು ಹೌದಿಗಳ ಮೇಲೆ ವಿಶ್ವಸಂಸ್ಥೆ ಒತ್ತಡ ಹಾಕಬೇಕು ಸೌದಿ ಅರೆಬಿಯಾ ಒತ್ತಾಯ
PHOTO:AFP
ರಿಯಾದ್, ಮೇ 21: ಶಾಂತಿ ಮಾತುಕತೆಯಲ್ಲಿ ತೊಡಗಿಕೊಳ್ಳಲು ಮತ್ತು ಯೆಮನ್ನ ತಯೀರ್ ನಗರದಲ್ಲಿನ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಹೌದಿ ಬಂಡುಗೋರ ಸಂಘಟನೆಯ ಮೇಲೆ ವಿಶ್ವಸಂಸ್ಥೆ ಹಾಗೂ ಅಂತರಾಷ್ಟ್ರೀಯ ಸಮುದಾಯ ಒತ್ತಡ ಹೇರಬೇಕು ಎಂದು ಸೌದಿ ಅರೆಬಿಯಾದ ಉಪರಕ್ಷಣಾ ಸಚಿವ ಖಾಲಿದ್ ಬಿನ್ ಸಲ್ಮಾನ್ ಒತ್ತಾಯಿಸಿದ್ದಾರೆ.
ತಯೀರ್ನಲ್ಲಿನ ಸಂಘರ್ಷದ ಪರಿಸ್ಥಿತಿ ಹಾಗೂ ವಿಶ್ವಸಂಸ್ಥೆ ಬೆಂಬಲಿತ ಶಾಂತಿ ಮಾತುಕತೆಯ ಅಗತ್ಯದ ಬಗ್ಗೆ ಖಾಲಿದ್ ಬಿನ್ ಸಲ್ಮಾನ್ ಅವರು ಅಮೆರಿಕದ ವಿಶೇಷ ಪ್ರತಿನಿಧಿ ಟಿಮ್ ಲೆಂಡರ್ಕಿಂಗ್ ಅವರೊಂದಿಗೆ ಅಮೆರಿಕದ ವಾಷಿಂಗ್ಟನ್ನಲ್ಲಿ ಚರ್ಚೆ ನಡೆಸಿದರು. ಈ ಸಂದರ್ಭ ಅವರು ಸೌದಿ ಅರೆಬಿಯಾ ನೇತೃತ್ವದ ಮೈತ್ರಿಪಡೆ ಯೆಮನ್ನ ಅಧ್ಯಕ್ಷೀಯ ನಾಯಕತ್ವ ಮಂಡಳಿಗೆ ಬೆಂಬಲ ನೀಡುತ್ತಿರುವುದನ್ನು ದೃಪಡಿಸಿದರು ಎಂದು ವರದಿಯಾಗಿದೆ.
ಬಿಕ್ಕಟ್ಟಿಗೆ ಸಮಗ್ರ ರಾಜಕೀಯ ಪರಿಹಾರ ರೂಪಿಸಿ ಯೆಮನ್ ಅನ್ನು ಶಾಂತಿ ಮತ್ತು ಸಮೃದ್ಧಿಯತ್ತ ಕೊಂಡೊಯ್ಯುವ ಸೌದಿ ಅರೆಬಿಯಾದ ಆಕಾಂಕ್ಷೆಗಳನ್ನು ಮಾತುಕತೆ ಸಂದರ್ಭ ಪುನರುಚ್ಚರಿಸಿದ್ದೇನೆ ಎಂದು ಖಾಲಿದ್ ಟ್ವೀಟ್ ಮಾಡಿದ್ದಾರೆ.