Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಠ್ಯಪುಸ್ತಕ ʼಕೇಸರೀಕರಣʼ ಆರೋಪ:...

ಪಠ್ಯಪುಸ್ತಕ ʼಕೇಸರೀಕರಣʼ ಆರೋಪ: ಟ್ವಿಟರ್‌ ನಲ್ಲಿ #RejectRSSTextBooks ಟ್ರೆಂಡಿಂಗ್

ವಾರ್ತಾಭಾರತಿವಾರ್ತಾಭಾರತಿ22 May 2022 7:01 PM IST
share
ಪಠ್ಯಪುಸ್ತಕ ʼಕೇಸರೀಕರಣʼ ಆರೋಪ: ಟ್ವಿಟರ್‌ ನಲ್ಲಿ #RejectRSSTextBooks ಟ್ರೆಂಡಿಂಗ್

ಬೆಂಗಳೂರು: ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಬ್ರಾಹ್ಮಣ್ಯವನ್ನು ತುರುಕಲಾಗಿದೆ ಮತ್ತು ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ #RejectRSSTextBooks #RejectBrahminTextBooks ಹ್ಯಾಷ್‌ಟ್ಯಾಗ್‌ ಗಳು ಟ್ರೆಂಡ್‌ ಆಗುತ್ತಿವೆ. 

ಬಿಜೆಪಿ ಸರ್ಕಾರವು ಶಿಕ್ಷಣವನ್ನು ಕೇಸರೀಕರಣ ಮಾಡುವ ಮೂಲಕ ಶಾಲಾ ಮಕ್ಕಳ ತಲೆಗೆ ಹಿಂದುತ್ವದ ಅಜೆಂಡಾವನ್ನು ತುರುಕುತ್ತಿದೆ. ವೈವಿಧ್ಯತೆಯನ್ನು ನಾಶಮಾಡಿ ಕೇವಲ ಬ್ರಾಹ್ಮಣ ಲೇಖಕರನ್ನು ವೈಭವೀಕರಿಸಿ ಅವರ ಲೇಖನಗಳನ್ನೇ ಪಠ್ಯವನ್ನಾಗಿ ರೂಪಿಸಿದೆ. ಸಮಿತಿಯಲ್ಲಿ ಬಹುಪಾಲು ಬ್ರಾಹ್ಮಣ ಸಮುದಾಯದವರೇ ಇದ್ದು, ಪಠ್ಯದಲ್ಲೂ ಬ್ರಾಹ್ಮಣ್ಯವನ್ನು ವಿಜೃಂಭಿಸುವ ಅಂಶಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಲಾಗಿದೆ. 

ಒಂಭತ್ತು ಜನ ಬ್ರಾಹ್ಮಣ ಲೇಖಕರ ಪಠ್ಯ ಸೇರಿಸಲಾಗಿದೆ. ಆರು ಮಂದಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಲೇಖಕರ ಪಠ್ಯ ಕೈಬಿಡಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಈ ಕುರಿತು ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ರಾಷ್ಟ್ರಾದ್ಯಂತ ಈ ಚರ್ಚೆ ಗಮನ ಸೆಳೆದಿದೆ. ಜಾತಿ ನಿರ್ಮೂಲನಾ ಸುಧಾರಕರಾಗಿದ್ದ ನಾರಾಯಣ ಗುರು, ಬಸವಣ್ಣ, ಪೆರಿಯಾರ್‌ ಮೊದಲಾದವರ ಪಠ್ಯಗಳನ್ನು ಕೈ ಬಿಟ್ಟಿದ್ದಾರೆ ಎಂಬ ಆರೋಪ ಸದ್ಯ ಕೇಳಿ ಬಂದಿದ್ದು, ಭಗತ್‌ ಸಿಂಗ್‌ ಪಠ್ಯಕ್ಕೂ ಕತ್ತರಿ ಹಾಕಿ ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಗ್ಗಡೆವಾರ್‌ ಭಾಷಣವನ್ನು ಪಠ್ಯದಲ್ಲಿ ಸೇರಿಸಲಾಗಿದೆ. 

ಅಲ್ಲದೆ, ತಮ್ಮ ಭಾಷಣಗಳಿಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಪರೀತ ಟ್ರಾಲ್‌ ಗೆ ಒಳಗಾಗುತ್ತಿರುವ ಚಕ್ರವರ್ತಿ ಸೂಲಿಬೆಲೆಯ ಲೇಖನವನ್ನೂ ಪಠ್ಯದಲ್ಲಿ ಅಳವಡಿಸಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಾಡಿನ ಹಲವು ಚಿಂತಕರು, ಶಿಕ್ಷಣ ತಜ್ಞರು ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಯ ಅರ್ಹತೆಯನ್ನೇ ಪ್ರಶ್ನಿಸಿದ್ದು, ಸಮಿತಿಯ ನೇತೃತ್ವ ವಹಿಸಿರುವ ಚಕ್ರತೀರ್ಥರಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಷ್ಟು ಶೈಕ್ಷಣಿಕ ಯೋಗ್ಯತೆ ಮತ್ತು ದಕ್ಷತೆ ಇಲ್ಲ ಎಂದು ಹೇಳಿದೆ. ರೋಹಿತ್‌ ಚಕ್ರತೀರ್ಥ ಶಿಕ್ಷಣ ತಜ್ಞವೇ ಅಲ್ಲ, ಅವರು ನೇತೃತ್ವದಲ್ಲಿ ಪರಿಷ್ಕರಣೆಗೊಂಡಿರುವ ಪುಸ್ತಕಗಳು ಮಕ್ಕಳಿಗೆ ಪಾಠ ಮಾಡಲು ಯೋಗ್ಯವೂ ಇಲ್ಲ ಎಂದು ಶಿಕ್ಷಕರ ನಡುವೆಯೂ ಚರ್ಚೆಗಳಾಗುತ್ತಿವೆ. ಸದ್ಯ, ಈ ಪಠ್ಯ ಪುಸ್ತಕಗಳನ್ನು ನಿರಾಕರಿಸಲು ಸಾಮಾಜಿಕ ಜಾಲಾತಾಣದಲ್ಲಿ ಅಭಿಯಾನವಾಗುತ್ತಿದ್ದು, ಪ್ರೊಫೆಸರ್‌ ಪುರುಷೋತ್ತಮ ಬಿಳಿಮಲೆ ಮೊದಲಾದ ಚಿಂತಕರೂ ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. 

“ಕರ್ನಾಟಕಕ್ಕೆ ಆಧುನಿಕ ಶಿಕ್ಷಣವನ್ನು ತಂದುಕೊಟ್ಟವರು ಕ್ರಿಶ್ಚಿಯನ್ನರು. ಕರ್ನಾಟಕವನ್ನು ಜಾಗತಿಕ ಭೂಪಟಕ್ಕೆ ಸೇರಿಸಿದವರು ಮುಸ್ಲಿಮರು. ಕರ್ನಾಟಕದ ಮೂಲನಿವಾಸಿಗಳು ದಲಿತರು. ಪಠ್ಯಪುಸ್ತಕ ರಚನೆ ಮಾಡುವಾಗ ಸಮಿತಿಯಲ್ಲಿ ಇವರು ಇರಬೇಕಾದ್ದು ಅಗತ್ಯ. ಮಕ್ಕಳಿಗೆ ಜನಾಂಗ ದ್ವೇಷ ಕಲಿಸಬಾರದು” ಎಂದು ಪ್ರೊ. ಬಿಳಿಮಲೆ ಟ್ವೀಟ್‌ ಮಾಡಿದ್ದಾರೆ. 

“ಪಿ.ಲಂಕೇಶ್, ಅರವಿಂದ್ ಮಾಲಗತ್ತಿ, ಸಾರಾ ಅಬೂಬಕರ್, ಎಲ್.ಬಸವರಾಜು, ಕೆ.ನೀಲಾ ಮತ್ತು ಬಿಟಿ ಲಲಿತಾ ನಾಯಕ್ ಅವರಂತಹ ಧೀಮಂತ ಲೇಖಕರನ್ನು ಅವರು ಕೈಬಿಟ್ಟಿದ್ದಾರೆ. ಈ ಲೇಖಕರು ತಮ್ಮ ಕೃತಿಗಳಿಂದ ಸಮಾಜಕ್ಕೆ ಕೊಡುಗೆ ನೀಡಿದ್ದಲ್ಲದೆ ಹಲವರಲ್ಲಿ ಸ್ವಾಭಿಮಾನದ ಭಾವನೆಯನ್ನು ಮೂಡಿಸಿದ್ದಾರೆ.” ಎಂದು ಅಜಯ್‌ ರಾಜ್‌ ಎಂಬವರು ಟ್ವೀಟ್‌ ಮಾಡಿದ್ದಾರೆ. 

ಇನ್ನು ಕನ್ನಡ ಹಾಗೂ ಕನ್ನಡಿಗರನ್ನು ಅವಮಾನಿಸಿದ್ದಾರೆಂಬ ಆರೋಪವಿರುವ ರೋಹಿತ್‌ ಚಕ್ರತೀರ್ಥರ ವಿರುದ್ಧ ಕನ್ನಡ ಸಂಘಟನೆಗಳೂ ಈ ಅಭಿಮಾನದಲ್ಲಿ ಪಾಲ್ಗೊಂಡಿದೆ. “ನಾಡ ಧ್ವಜವನ್ನು ತನ್ನ ಹಾರಾಡುವ ಒಳಚೆಡ್ಡಿಗೆ ಹೋಲಿಸಿದ್ದ ರೋಹಿತ್ ಚಕ್ರತೀರ್ಥನನ್ನು ಪಠ್ಯಪುಸ್ತಕ ರಚನಾ ಸಮಿತಿಗೆ ಆಯ್ಕೆ ಮಾಡಿದ ಬಿಜೆಪಿ ಸರ್ಕಾರಕ್ಕೆ ಕನ್ನಡ ನಾಡ ಧ್ವಜದ ಬಗ್ಗೆ ಗೌರವ ಇದೆಯೇ ?” ಎಂದು ಎಂ ಆರ್‌ ಕೃಷ್ಣ ಎಂಬವರು ಪ್ರಶ್ನಿಸಿದ್ದಾರೆ. 

“ಬಸವಣ್ಣ ˌ ನಾರಾಯಣ ಗುರುˌ ಪೆರಿಯಾರˌ ಪುರೋಹಿತಶಾಹಿ ವಿರೋಧಿ ವಿವೇಕಾನಂದˌ ವೀರ ಭಗತ್ ಸಿಂಗ್ ರ ಜಾಗದಲ್ಲಿ ಮೊಘಲರ ಗುಲಾಮಿ ಸಂತತಿ ಮತ್ತು ಬ್ರಿಟೀಷರ ಗುಲಾಮರ ಪಾಠ ನಾವು ಓದಲಾರೆವು..” ಎಂದು ಚಂದ್ರಪ್ರಭಾ ಕಠಾರಿ ಟ್ವೀಟ್‌ ಮಾಡಿದ್ದಾರೆ.

ಬಸವಣ್ಣ ˌ ನಾರಾಯಣ ಗುರುˌ ಪೆರಿಯಾರˌ ಪುರೋಹಿತಶಾಹಿ ವಿರೋಧಿ ವಿವೇಕಾನಂದˌ ವೀರ ಭಗತ್ ಸಿಂಗ್ ರ ಜಾಗದಲ್ಲಿ ಮೊಘಲರ ಗುಲಾಮಿ ಸಂತತಿ ಮತ್ತು ಬ್ರಿಟೀಷರ ಗುಲಾಮರ ಪಾಠ ನಾವು ಓದಲಾರೆವು..#RejectBrahminTextBooks #RejectRSSTextBooks pic.twitter.com/0nPpYVJJ7D

— chandraprabha katari (@cpkatari) May 22, 2022

BJP trolls are deciding text for schools in Karnataka#RejectBrahminTextBooks#RejectRSSTextBooks https://t.co/YLVuHce5L1

— satisha.gt (@satishshile) May 22, 2022

Stop communalizing young minds through divisive sanghi ideology. Keep your ideology in your Shaakha. Don't bring it to school.#RejectBrahminTextBooks #RejectRSSTextBooks

— Shrinivas Karkala (@s_karkala) May 22, 2022

ಸರ್ವಜನಾಂಗದ ಶಾಂತಿಯ ಬೀಡಾದ ಕರ್ನಾಟಕದ ಮಕ್ಕಳಿಗೆ ಒಳ್ಳೆಯ ಪಠ್ಯಪುಸ್ತಕ ಕೊಡುವಂಥ ಬಲಪಂಥೀಯ ವಿದ್ವಾಂಸರನ್ನು ಹುಡುಕಲು ಸರಕಾರಕ್ಕೆ ಅಸಾಧ್ಯವಾದುದು ಅವರ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುವುದೇ? ಚಕ್ರತೀರ್ಥ ಬಿಟ್ಟರೆ ಅವರಲ್ಲಿ ಯಾರೂ ಇಲ್ಲವೇ? #RejectBrahminTextBooks #RejectRSSTextBooks

— Bahutva Karnataka ಬಹುತ್ವ ಕರ್ನಾಟಕ (@BahutvaKtka) May 22, 2022

ಕನ್ನಡ ಮಕ್ಕಳು ಓದಬೇಕಿರುವುದು ಸಿದ್ದಲಿಂಗಯ್ಯನವರ ಬಂಡಾಯದ ಹಾಡುಗಳನ್ನು.

ಸಂಸ್ಕಾರದ ಹೆಸರಲ್ಲಿ ಬರೀ ವಯ್ದಿಕ ಆಚರಣೆಗಳು, ನಂಬಿಕೆಗಳನ್ನೇ ಕನ್ನಡ ಮಕ್ಕಳಿಗೆ ಕಲಿಸಿದರೆ ಅದು ತಪ್ಪು.

ಸಂಸ್ಕಾರ ಬರೀ ಬ್ರಾಹ್ಮಣರಿಗಶ್ಟೇ ಇದೆಯಾ ?

ಇದೊಂದು ಹೊಣೆಗೇಡಿ ಪುರೋಹಿತಶಾಹಿ ಸರಕಾರ.#RejectRSSTextBooks #RejectBrahminTextBooks

— ಚಯ್ತನ್ಯ ಗವ್ಡ (@hosabaraha) May 22, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X