ಬೈಂದೂರು: ಹಲವೆಡೆ ಭಾರೀ ಮಳೆ

ಉಡುಪಿ : ಜಿಲ್ಲೆಯ ಬೈಂದೂರು ತಾಲೂಕಿನ ವಿವಿಧೆಡೆ ರವಿವಾರ ಬೆಳಗ್ಗೆಯಿಂದ ಭಾರೀ ಮಳೆಯಾ ಗಿದ್ದು, ಇದರಿಂದ ಹಲವೆಡೆ ಜಲಾವೃತವಾಗಿ ರುವ ಬಗ್ಗೆ ವರದಿಯಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೈಂದೂರು ಯಡ್ತಾರೆ ಯಿಂದ ಕೊಲ್ಲೂರು ಸಂಪರ್ಕಿಸುವ ಹೆದ್ದಾರಿಯು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಉಳಿದಂತೆ ಕುಂದಾಪುರ, ಉಡುಪಿಯಲ್ಲಿ ಇಂದು ಮಳೆಯ ಪ್ರಮಾಣ ಇಳಿಕೆಯಾಗಿದೆ.
ಉಡುಪಿ- ೦.೪ಮಿ.ಮೀ., ಬ್ರಹ್ಮಾವರ- ೦.೨ಮಿ.ಮೀ., ಕಾಪು- ೨.೩ ಮಿ.ಮೀ., ಕುಂದಾಪುರ- ೦.೪ಮಿ.ಮೀ., ಬೈಂದೂರು- ೦.೨ಮಿ.ಮೀ., ಕಾರ್ಕಳ- ೧.೩ಮಿ.ಮೀ., ಹೆಬ್ರಿ-೦.೫ಮಿ.ಮೀ. ಮಳೆ ಆಗಿದ್ದು, ಉಡುಪಿ ಜಿಲ್ಲೆಯಲ್ಲಿ ಸರಾಸರಿ ೦.೭ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
Next Story