ಕ್ವಾಡ್ ಶೃಂಗಸಭೆಗಾಗಿ ಜಪಾನ್ ತಲುಪಿದ ಪ್ರಧಾನಿ ನರೇಂದ್ರ ಮೋದಿ
Photo: twitter
ಟೋಕಿಯೊ: ಪ್ರಭಾವಿ ಗುಂಪಿನ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದ ಬೆಳವಣಿಗೆಗಳ ಕಾರ್ಯತಂತ್ರಗಳ ಕುರಿತು ಚರ್ಚಿಸುವ ಉದ್ದೇಶದಿಂದ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎರಡು ದಿನಗಳ ಭೇಟಿಗಾಗಿ ಜಪಾನ್ಗೆ ಆಗಮಿಸಿದ್ದಾರೆ. .
"ಟೋಕಿಯೋದಲ್ಲಿ ಬಂದಿಳಿದಿದ್ದೇನೆ. ಈ ಭೇಟಿಯ ಸಂದರ್ಭದಲ್ಲಿ ಕ್ವಾಡ್ ಶೃಂಗಸಭೆ, ಸಹವರ್ತಿ ಕ್ವಾಡ್ ನಾಯಕರನ್ನು ಭೇಟಿ ಮಾಡುವುದು, ಜಪಾನಿನ ಉದ್ಯಮಿಗಳು ಹಾಗೂ ಭಾರತೀಯ ಸಮುದಾಯದವರ ಜೊತೆ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ" ಎಂದು ಪ್ರಧಾನಿ ಮೋದಿ ಜಪಾನೀಸ್ ಮತ್ತು ಇಂಗ್ಲಿಷ್ ಎರಡರಲ್ಲೂ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಟೋಕಿಯೊದ ಹೋಟೆಲ್ನ ಹೊರಗೆ ಮಕ್ಕಳೊಂದಿಗೆ ಸಂವಾದ ನಡೆಸಿದರು. ಚಿಕ್ಕ ಹುಡುಗಿಯ ರೇಖಾಚಿತ್ರವನ್ನು ಕೂಡ ನೋಡಿದರು. ಮಕ್ಕಳೊಂದಿಗೆ ಸಂವಾದದ ಸಮಯದಲ್ಲಿ ಬಾಲಕಿಯ ಆಟೋಗ್ರಾಫ್ ಗೆ ಸಹಿ ಮಾಡಿದರು.
ನಂತರ ಅವರು ತ್ರಿವರ್ಣ ಧ್ವಜದ ರೇಖಾಚಿತ್ರದೊಂದಿಗೆ ತನಗಾಗಿ ಕಾಯುತ್ತಿದ್ದ ಹುಡುಗನೊಂದಿಗೆ ಮಾತನಾಡಿದರು. ಹಿಂದಿಯನ್ನು ಎಲ್ಲಿಂದ ಕಲಿತೆ ಎಂದು ಬಾಲಕನನ್ನು ಪ್ರಧಾನಿ ಮೋದಿ ಕೇಳಿದರು. ಭಾಷೆಯಲ್ಲಿ ಆತನ ನಿರರ್ಗಳತೆಯನ್ನು ಶ್ಲಾಘಿಸಿದರು.
Landed in Tokyo. Will be taking part in various programmes during this visit including the Quad Summit, meeting fellow Quad leaders, interacting with Japanese business leaders and the vibrant Indian diaspora. pic.twitter.com/ngOs7EAKnU
— Narendra Modi (@narendramodi) May 22, 2022