ಬಿಹಾರದಲ್ಲಿ ಜಾತಿಗಣತಿ ಕುರಿತು ಈ ವಾರ ಸರ್ವಪಕ್ಷ ಸಭೆ ಸಾಧ್ಯತೆ: ನಿತೀಶ ಕುಮಾರ್

ಪಾಟ್ನಾ,ಮೇ 23: ರಾಜ್ಯಕ್ಕೆ ನಿರ್ದಿಷ್ಟವಾಗಿ ಜಾತಿಗಣತಿಯ ಕುರಿತು ಬಹು ನಿರೀಕ್ಷಿತ ಸರ್ವಪಕ್ಷ ಸಭೆಯು ಈ ವಾರದ ಉತ್ತರಾರ್ಧದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಇಲ್ಲಿ ಸುಳಿವು ನೀಡಿದರು.ಕಾರ್ಯಕ್ರಮವೊಂದರ ನೇಪಥ್ಯದಲ್ಲಿ,ಮೇ 27ರಂದು ಸಭೆಯನ್ನು ಕರೆಯಲಾಗಿದೆ ಎಂಬ ದೃಢಪಡದ ವರದಿಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ನಿತೀಶ,ಹೆಚ್ಚಿನ ಪಕ್ಷಗಳು ಆ ದಿನಾಂಕವನ್ನು ಒಪ್ಪಿಕೊಂಡಿವೆ. ಆದರೆ ಯಾವುದೇ ನಿರ್ದಿಷ್ಟ ದಿನಾಂಕದಂದು ಸಭೆಯನ್ನು ಕರೆಯಲು ನಮಗೆ ಎಲ್ಲ ಪಕ್ಷಗಳ ಒಪ್ಪಿಗೆ ಬೇಕು ಎಂದು ಉತ್ತರಿಸಿದರು.
ರಾಷ್ಟ್ರಮಟ್ಟದಲ್ಲಿ ಜಾತಿಗಣತಿಗೆ ನರೇಂದ್ರ ಮೋದಿ ಸರಕಾರವು ನಿರಾಕರಿಸಿದ ಬಳಿಕ ಬಿಹಾರ ಸರಕಾರದ ಪಾಲುದಾರನಾಗಿರುವ ಬಿಜೆಪಿ ಜಾತಿಗಣತಿಯ ಬಗ್ಗೆ ದ್ವಂದ್ವ ನಿಲುವನ್ನು ಪ್ರದರ್ಶಿಸುತ್ತಿದ್ದು, ಇದನ್ನು ಆರ್ಜೆಡಿಯಂತಹ ಪ್ರತಿಪಕ್ಷಗಳು ಟೀಕಿಸಿವಇತ್ತೀಚಿಗೆ ಬಿಹಾರ ಬಿಜೆಪಿ ನಾಯಕರು,ವಿಶೇಷವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರು,ಕೇಂದ್ರ ಸರಕಾರವು ‘ಪ್ರಾಯೋಗಿಕ ಕಾರಣ’ಗಳಿಂದಾಗಿ ಜಾತಿಗಣತಿ ನಡೆಸಲು ಒಲವು ಹೊಂದಿರದಿರಬಹುದು,ಆದರೆ ರಾಜ್ಯ ಘಟಕವು ಜಾತಿ ಗಣತಿಯನ್ನು ಎಂದೂ ವಿರೋಧಿಸಿಲ್ಲ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದ್ದರು.







