ಉಡುಪಿ: ಸೋಮವಾರ ಒಂದು ಕೋವಿಡ್ ಪಾಸಿಟಿವ್ ಪ್ರಕರಣ ದೃಢ
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಇಬ್ಬರು ಸೋಂಕಿತ ವ್ಯಕ್ತಿಗಳು ಕೋವಿಡ್-19ರಿಂದ ಸಂಪೂರ್ಣ ಗುಣಮುಖರಾದರೆ, ಒಬ್ಬರಲ್ಲಿ ಹೊಸದಾಗಿ ಪಾಸಿಟಿವ್ ಕಂಡುಬಂದಿದೆ. ಈ ಮೂಲಕ ಜಿಲ್ಲೆಯಲ್ಲೀಗ ಒಬ್ಬರು ಸೋಂಕಿತರಿದ್ದಾರೆ.
ಉಡುಪಿಯ ಪುರುಷರೊಬ್ಬರಲ್ಲಿ ಇಂದು ಪರೀಕ್ಷೆಯ ವೇಳೆ ಸೋಂಕು ಪತ್ತೆಯಾಗಿತ್ತು. ದಿನದಲ್ಲಿ ಒಟ್ಟು 48 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಕಳೆದ ಜನವರಿ ಒಂದರ ಬಳಿಕ ಜಿಲ್ಲೆಯಲ್ಲಿ ಒಟ್ಟು 18,450 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇಂದಿನ ಇಬ್ಬರು ಸೇರಿದಂತೆ ಒಟ್ಟು 18,516 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 53 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 10,84,810 ಮಂದಿ ಮೊದಲ ಡೋಸ್ ಲಸಿಕೆಯನ್ನು, 10,58,076 ಮಂದಿ ಎರಡನೇ ಡೋಸ್ ಲಸಿಕೆಯನ್ನು ಹಾಗೂ 70,298 ಮಂದಿ ಮುನ್ನೆಚ್ಚರಿಕಾ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. 12ರಿಂದ 14ವರ್ಷದೊಳಗಿನ 31,474 ಮಕ್ಕಳು ಮೊದಲ ಡೋಸ್ ಹಾಗೂ 18,948 ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.