ಮ್ಯಾನ್ಮಾರ್ ಸಮುದ್ರ ತೀರದಲ್ಲಿ ತೇಲಿ ಬಂದ 14 ರೊಹಿಂಗ್ಯಾ ನಿರಾಶ್ರಿತರ ಮೃತದೇಹಗಳು
ಸಾಂದರ್ಭಿಕ ಚಿತ್ರ
ಯಾಂಗನ್ (ಮ್ಯಾನ್ಮಾರ್), ಮೇ 23: ಮ್ಯಾನ್ಮಾರ್ನಲ್ಲಿ ಸಮುದ್ರ ತೀರದಲ್ಲಿ 14 ಮೃತದೇಹಗಳು ತೇಲುತ್ತಿವೆ ಎಂದು ಪೊಲೀಸರು ಸೋಮವರ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಅವರ ಪೈಕಿ ಕೆಲವರು ರೊಹಿಂಗ್ಯಾ ಮುಸ್ಲಿಮರು; ಅವರು ಮಲೇಶ್ಯ ತಲುಪಲು ಪ್ರಯತ್ನಿಸುತ್ತಿದ್ದರು ಎಂದು ಸ್ಥಳೀಯ ರಕ್ಷಣಾ ತಂಡವೊಂದು ತಿಳಿಸಿದೆ.
ಅವರು ಪಶ್ಚಿಮ ಮ್ಯಾನ್ಮಾರ್ನಿಂದ ಮಲೇಶ್ಯಕ್ಕೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ರೊಹಿಂಗ್ಯಾ ಪರ ಹೋರಾಟಗಾರರೊಬ್ಬರು ತಿಳಿಸಿದರು.
‘‘14 ಮೃತದೇಹಗಳು ಪತ್ತೆಯಾಗಿವೆ. ದೋಣಿಯ ಮಾಲೀಕ ಸೇರಿದಂತೆ 35 ಮಂದಿಯನ್ನು ರಕ್ಷಿಸಲಾಗಿದೆ’’ ಎಂದು ಪತೈನ್ ಜಿಲ್ಲೆಯ ಲೆಫ್ಟಿನೆಂಟ್ ಕರ್ನಲ್ ಟುನ್ ಶ್ವೆ ತಿಳಿಸಿದರು.ರವಿವಾರ 8 ಮೃತದೇಹಗಳನ್ನು ಪತ್ತೆಹಚ್ಚಲಾಗಿತ್ತು ಹಾಗೂ ಅವುಗಳೆಲ್ಲವೂ ರೊಹಿಂಗ್ಯಾ ನಿರಾಶ್ರಿತರದಾಗಿತ್ತು ಎಂದು ರೊಹಿಂಗ್ಯಾ ಹೋರಾಟಗಾರ ತಿಳಿಸಿದರು.
Next Story