ನಾಪತ್ತೆಯಾದ 12 ದಿನ ಬಳಿಕ ಪತ್ತೆಯಾದ ಗಾಯಕಿಯ ಮೃತದೇಹ

ಹೊಸದಿಲ್ಲಿ: ಹನ್ನೆರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹರ್ಯಾಣಿ ಗಾಯಕಿಯ ಮೃತದೇಹ ಹರ್ಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಹೆದ್ದಾರಿ ಸಮೀಪ ಮಣ್ಣಿನಲ್ಲಿ ಹೂತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದೆಹಲಿಯಲ್ಲಿ ವಾಸವಿದ್ದ ಗಾಯಕಿಯನ್ನು ಮೇ 11ರಂದು ಆಕೆಯ ಕುಟುಂಬ ಕೊನೆಯ ಬಾರಿಗೆ ನೋಡಿತ್ತು. ಮೂರು ದಿನಗಳ ಬಳಿಕ ಪೋಷಕರು ಅಪಹರಣ ಪ್ರಕರಣ ದಾಖಲಿಸಿದ್ದರು. ಗಾಯಕಿಯ ಇಬ್ಬರು ಸಹೋದ್ಯೋಗಿ ಗಳಾದ ರವಿ ಹಾಗೂ ರೋಹಿತ್ ವಿರುದ್ಧ ಅಪಹರಣ ಮತ್ತು ಹತ್ಯೆ ಆರೋಪವನ್ನು ಗಾಯಕಿ ಕುಟುಂಬದವರು ಮಾಡಿದ್ದಾರೆ. ರೋಹಿತ್ ಜತೆ ಈ ಗಾಯಕಿ ಭಿವಾನಿಗೆ ಸಂಗೀತ ವೀಡಿಯೊ ಶೂಟಿಂಗ್ಗೆ ತೆರಳಿದ್ದಳು ಎಂದು ಕುಟುಂಬದರು ಹೇಳಿದ್ದಾರೆ.
ರೋಹ್ಟಕ್ನ ಮೆಹಮ್ ಬಳಿಕ ಹೋಟೆಲ್ ಬಳಿಯ ಭದ್ರತಾ ಕ್ಯಾಮೆರಾದ ಸಿಸಿಟಿವಿ ದೃಶ್ಯಾವಳಿ, ಈ ಇಬ್ಬರು ರಾತ್ರಿ ಊಟ ಮಾಡುತ್ತಿರುವ ದೃಶ್ಯ ಸೆರೆ ಹಿಡಿದಿದೆ. ಪ್ರಕರಣದಲ್ಲಿ ಪೊಲೀಸರು ಕಾಲೆಳೆಯುತ್ತಿದ್ದಾರೆ ಎನ್ನುವುದು ಕುಟುಂಬದ ಆರೋಪ. ಗಾಯಕಿಯ ಮೈಮೇಲೆ ಒಳ ಉಡುಪು ಹೊರತುಪಡಿಸಿ ಯಾವುದೇ ಉಡುಪುಗಳು ಇರಲಿಲ್ಲ ಎಂದು ಕುಟುಂಬದವರು ವಿವರಿಸಿದ್ದಾರೆ.
ಭೈರೋನ್ ಭೈನಿ ಗ್ರಾಮದ ಬಳಿಕ ಫೈಓವರ್ ಸಮೀಪ ದೇಹವನ್ನು ಹೂತಿದ್ದ ಬಗ್ಗೆ ನಿನ್ನೆ ಮಾಹಿತಿ ಲಭ್ಯವಾಗಿದೆ ಎಂದು ಮೆಹಮ್ ಪೊಲೀಸರು ಹೇಳಿದ್ದಾರೆ. ಮೃತದೇಹವನ್ನು ಅಟಾಪ್ಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.