ಮರು ಮೌಲ್ಯಮಾಪನ; ಎಸೆಸೆಲ್ಸಿಯಲ್ಲಿ ಮಹಮ್ಮದ್ ಇಸ್ಮಾಯಿಲ್ ಫಝಲ್ಗೆ 601 ಅಂಕ

ಮಹಮ್ಮದ್ ಇಸ್ಮಾಯಿಲ್ ಫಝಲ್
ಮಂಗಳೂರು : ಅಲ್ ಫಲಾಹ್ ಆಂಗ್ಲ ಮಾಧ್ಯಮ ಶಾಲೆ ಕೆಸಿ ನಗರ ತಲಪಾಡಿ ಇಲ್ಲಿನ ವಿದ್ಯಾರ್ಥಿ ಮಹಮ್ಮದ್ ಇಸ್ಮಾಯಿಲ್ ಫಝಲ್ ಅವರು ಎಸೆಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಿಂದ 601 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಈ ಹಿಂದೆ 595 ಅಂಕ ಪಡೆದಿದ್ದ ಮಹಮ್ಮದ್ ಇಸ್ಮಾಯಿಲ್ ಫಝಲ್ ಮರು ಮೌಲ್ಯಮಾಪನದಿಂದ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ತಲಾ 3 ಅಂಕ ಹೆಚ್ಚು ಪಡೆದಿದ್ದಾರೆ.
ಫಝಲ್ ಅವರು ಅಲ್ ಫಲಾಹ್ ಆಂಗ್ಲ ಮಾಧ್ಯಮ ಹೈಸ್ಕೂಲ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಹಮ್ಮದ್ ಇಸ್ಮಾಯಿಲ್ ಫಝಲ್ ಅವರು ಕಿನ್ಯಾ ಕುತುಬಿ ನಗರ ನಿವಾಸಿ ಅಬ್ದುಲ್ ಲತೀಫ್ ಮತ್ತು ಫಾತಿಮತ್ ರಿಝ್ವಾನ ದಂಪತಿಯ ಪುತ್ರ.
Next Story