ವಿಧಾನಸಭೆ ಚುನಾವಣೆಗೆ ಹಾಸನ ಕ್ಷೇತ್ರದಿಂದ ಸ್ಪರ್ಧೆ ವಿಚಾರ: ಭವಾನಿ ರೇವಣ್ಣ ಹೇಳಿದ್ದೇನು?

ಭವಾನಿ ರೇವಣ್ಣ
ಹಾಸನ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹಾಸನ ಕ್ಷೇತ್ರದಿಂದ ಸ್ಪರ್ಧಿತ್ತಾರೆಂಬ ಮಾತು ಜೆಡಿಎಸ್ ವಲಯದಿಂದ ಕೇಳಿ ಬರುತ್ತಿದ್ದು, ಈ ಕುರಿತು ಮಾಜಿ ಜಿ.ಪಂ. ಸದಸ್ಯೆ ಭವಾನಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಹಾಸನ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ' ಎಂಬ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ’ ಎಂದು ತಿಳಿಸಿದ್ದಾರೆ.
''ನಾನು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆಯಾಗಿಲ್ಲ. ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.
''ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾನು ಒಬ್ಬಳೆ ಆಕಾಂಕ್ಷಿಯಲ್ಲ, ಪಕ್ಷದಲ್ಲಿ ಇನ್ನೂ ಸುಮಾರು ಜನ ಇದ್ದಾರೆ. ಪಕ್ಷದ ವರಿಷ್ಠರು ಹಾಸನ ಜಿಲ್ಲೆಯ ಮುಖಂಡರು, ಶಾಸಕರುಗಳು, ಸಂಸದರ ಜೊತೆ ಚರ್ಚೆ ಮಾಡಿ ಯಾರು ಹೆಸರನ್ನ ಘೋಷಣೆ ಮಾಡ್ತಾರೆ ಅವರ ಪರವಾಗಿ ದುಡಿಯುವ ಕೆಲಸ ಮಾಡುತ್ತೇನೆ'' ಎಂದು ಸ್ಪಷ್ಟಪಡಿಸಿದ್ದಾರೆ.
'ಹಾಸನ ವಿಧಾನಸಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆ ಹಾಗೂ ಭವಾನಿ ಒಂದಲ್ಲ ಒಂದು ದಿನ ಎಂಎಲ್ಎ ಆಗ್ತಾರೆ' ಎಂದು ಇತ್ತೀಚೆಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿಕೆ ನೀಡಿದ್ದರು.
ಇದನ್ನೂ ಓದಿ... ನಮ್ಮಿಂದಲೇ ನಿಮಗೆ ಸೋಲಾಯಿತು: ದೇವೇಗೌಡರ ಎದುರು ಕಣ್ಣೀರು ಸುರಿಸಿದ ಸೊಸೆ ಭವಾನಿ ರೇವಣ್ಣ







