ಮೇ 26ರಂದು ‘ಸಹಬಾಳ್ವೆ ಮರಳಿ ಪಡೆಯಲು’ ಸೌಹಾರ್ದ ಸಮ್ಮೇಳನ
ಮಂಗಳೂರು : ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾ ಇದರ ಸುನ್ನಿ ವಿದ್ವಾಂಸರ ಒಕ್ಕೂಟದ ವಿದ್ಯಾರ್ಥಿ ಯುವ ಜನ ಸಂಘಟನೆಯಾದ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ಮೇ 26ರಂದು ‘ಸಹಬಾಳ್ವೆ ಮರಳಿ ಪಡೆಯಲು’ ಸೌಹಾರ್ದ ಸಮ್ಮೇಳನವನ್ನು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.
ಸಮ್ಮೇಳನ ಸಂಜೆ 3 ಗಂಟೆಗೆ ಆರಂಭಗೊಳ್ಳಲಿದ್ದು, ವಿವಿಧ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಪ್ರಮುಖರಾದ ಅನೀಸ್ ಕೌಸರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಸಮ್ಮೇಳನದಲ್ಲಿ ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಧ್ರುವೀಕರಣ, ಧಾರ್ಮಿಕ ಹಕ್ಕು ಅವಕಾಶಗಳ ನಿರಾಕರಣೆ ಕುರಿತಂತೆ ಧಾರ್ಮಿಕ ಸಾಮಾಜಿಕ ಮುಖಂಡರು ಮಾತನಾಡಲಿದ್ದಾರೆ. ಸಮಸ್ತ ಅಧ್ಯಕ್ಷರಾದ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಙಳ್, ಸಯ್ಯದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಡಾ. ವಿಜಯಾನಂದ ಸ್ವಾಮೀಜಿ ಚಿತ್ರದುರ್ಗ, ಡಾ. ಜಯಬಸವಾನಂದ ಸ್ವಾಮಿ ಚಿಕ್ಕಮಗಳೂರು, ತ್ವಾಕಾ ಅಹಮದ್ ಮುಸ್ಲಿಯಾರ್ ಅಲ್ ಅಝ್ಝರಿ, ಪ್ರಿಯಾಂಕ್ ಖರ್ಗೆ, ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ, ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಯು.ಟಿ.ಖಾದರ್, ಬಿ.ಎಂ. ಫಾರೂಕ್, ಇನಾಯತ್ ಅಲಿ, ಹಮೀದ್ ಫೈಝಿ ಅಂಬಲಕ್ಕಡವು, ಅಬ್ದುಲ್ ಸತ್ತಾರ್ ಪಂದಲ್ಲೂರು, ರಶೀದ್ ಫೈಝಿ ವೆಳ್ಳಾಯಿಕ್ಕೋಡು, ಅಮೀರ್ ತಂಙಳ್ ಕಿನ್ಯ, ವೈ. ಅಬ್ದುಲ್ಲ ಕುಂಞಿ ಯೆನೆಪೋಯ, ಮಂಗಳೂರು ಕೋರ್ಡೆಲ್ ಚರ್ಚ್‌ನ ಧರ್ಮಗುರು ರೆ. ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಇಸ್ಮಾಯಿಲ್, ತಾಜುದ್ದೀನ್ ರಹ್ಮಾನಿ, ಅಬ್ದುಲ್ ರಶೀದ್ ಹಾಜಿ, ಸಿದ್ದೀಕ್ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.





