ಉಡುಪಿ ಚಿತ್ರಕಲಾ ಮಂದಿರದಲ್ಲಿ ಚಿತ್ರಕಲೆಯಲ್ಲಿ ಪದವಿ ಕೋರ್ಸ್
ಉಡುಪಿ : ಉಡುಪಿ ಸಿಟಿಬಸ್ ನಿಲ್ದಾಣದ ಬಳಿ ಇರುವ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿರುವ ಚಿತ್ರಕಲೆಯಲ್ಲಿ ಪದವಿ -ಬ್ಯಾಚುಲರ್ ಇನ್ ವಿಜುವಲ್ ಆರ್ಟ್ (ಬಿವಿಎ) ಹಾಗೂ ಪಿಯುಸಿಗೆ ತತ್ಸಮಾನ ಕಲಾಮೂಲ ಕೋರ್ಸ್‌ಗಳನ್ನು ಕಲಿಸಲಾಗುತ್ತದೆ.
ಪದವಿ ಕೋರ್ಸ್ (ಬಿವಿಎ)ಗೆ ದ್ವಿತೀಯ ಪಿಯುಸಿ ಹಾಗೂ ಕಲಾಮೂಲಕ್ಕೆ ಎಸೆಸೆಲ್ಸಿ ತೇರ್ಗಡೆಗೊಂಡಿರಬೇಕು. ಕಿವುಡರು ಹಾಗೂ ಮೂಗರಿಗೂ ಪ್ರವೇಶಕ್ಕೆ ಅವಕಾಶವಿದೆ. ಹಾಸ್ಟೆಲ್, ವಿದ್ಯಾರ್ಥಿ ವೇತನ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯೊಂದಿಗೆ ಸುಸಸಜ್ಜಿತ ಗ್ರಂಥಾಲಯದ ವ್ಯವಸ್ಥೆಯೂ ಲಭ್ಯವಿದೆ.
ಬೋಧನಾ ವಿಷಯಗಳು: ನಿಸರ್ಗ, ಭಾವಚಿತ್ರ, ಶಿಲ್ಪ, ಮ್ಯೂರಲ್, ಕರಕುಶಲ ಕಲೆ, ಫೋಟೋಗ್ರಾಫಿ, ಸ್ಕ್ರೀನ್ ಪ್ರಿಂಟಿಂಗ್. ಉದ್ಯೋಗಾವಕಾಶ: ಸಿನಿಮಾ, ಎನಿಮೇಶನ್, ಜಾಹೀರಾತು, ಡ್ರಾಯಿಂಗ್, ಕ್ರಾಫ್ಟ್ ಟೀಚರ್, ಗ್ರಾಫಿಕ್ ಡಿಸೈನರ್, ಇಂಟಿರಿಯರ್ ಡೆಕೋರೇಷನ್.
ಆಸಕ್ತರು ಪ್ರಾಂಶುಪಾಲರು, ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ, ರಾಜ್ ಟವರ್ಸ್ ಬಳಿ, ಸಿಟಿಬಸ್ ನಿಲಾಣ ಉಡುಪಿ-೫೭೬೧೦೧, ದೂರವಾಣಿ: ೯೭೩೯೨೪೯೯೫೧, ೭೨೦೪೧೪೪೬೭೩ ಇವರನ್ನು ಸಂಪರ್ಕಿಸುವಂತೆ ಚಿತ್ರಕಲಾ ಮಂದಿರದ ಪ್ರಕಟಣೆ ತಿಳಿಸಿದೆ.