ಜೆಪ್ಪು ಸಂತ ಆಂತೋನಿ ಆಶ್ರಮ ಪ್ರವೇಶ ದ್ವಾರ ಉದ್ಘಾಟನೆ

ಮಂಗಳೂರು : ನಗರದ ಜೆಪ್ಪು ಸಂತ ಆಂತೋನಿ ಆಶ್ರಮದ ಮಹಾ ಪ್ರವೇಶದ್ವಾರವನ್ನು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಮಂಗಳವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬಳಿಕ ಮಾತನಾಡಿದ ಅವರು ಈ ಆಶ್ರಮದ ಅಭಿವೃದ್ಧಿಗಾಗಿ ಫಾ. ಒನಿಲ್ ಡಿಸೋಜರ ಪರಿಶ್ರಮವನ್ನು ಸ್ಮರಿಸಬೇಕಿದೆ ಎಂದರು.
ಆಶ್ರಮದ ನಿರ್ದೇಶಕ ಜೆ. ಬಿ. ಕ್ರಾಸ್ತ ನಾಮಫಲಕವನ್ನು ಅನಾವರಣಗೊಳಿಸಿದರು.
ಈ ಸಂದರ್ಭ ಫಾ. ವಿಕ್ಟರ್ ಜಾರ್ಜ್, ಫಾ. ಫ್ರಾನ್ಸಿಸ್ ಡಿಸೋಜ, ಫಾ. ತ್ರಿಶಾನ್ ಡಿಸೋಜ, ರೋಹನ್ ಡಾಯಸ್, ಮಾರ್ಸೆಲ್ ಮೊಂತೆರೋ, ಕಾರ್ಪೊರೇಟರ್ ಜೆಸಿಂತಾ ಅಲ್ಪ್ರೆಡ್ ಉಪಸ್ಥಿತರಿದ್ದರು.
ಆಶ್ರಮದ ನಿರ್ದೇಶಕರಾದ ಫಾ. ಲ್ಯಾರಿ ಪಿಂಟೊ ವಂದಿಸಿದರು. ಫಾ.ರೂಪೇಶ್ ತಾವ್ರೋ, ಕಾರ್ಯಕ್ರಮ ನಿರೂಪಿದರು.
Next Story