ಸರಕಾರದಿಂದ ಶಿಕ್ಷಣ ಕ್ಷೇತ್ರ ಕೇಸರೀಕರಣ : ಮುಸ್ಲಿಂ ಲೀಗ್ ಖಂಡನೆ
ಮಂಗಳೂರು : ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು ಶಿಕ್ಷಣವನ್ನು ಕೇಸರೀಕರಣಗೊಳಿಸಿದೆ. ಅಭಿವೃದ್ಧಿ ಮಾಡಲಾಗದ ಬಿಜೆಪಿ ಸರಕಾರವು ಮುಂದಿನ ಚುನಾವಣೆಯಲ್ಲಿ ಮತ್ತೆ ಆಡಳಿತಕ್ಕೆ ಬರಲು ಶಿಕ್ಷಣ ಕ್ಷೇತ್ರದಲ್ಲಿ ಹಸ್ತಕ್ಷೇಪ ನಡೆಸಿದೆ ಎಂದು ಜಿಲ್ಲಾ ಅಧ್ಯಕ್ಷ ಕೆ ಎಂ ಫಯಾಝ್ ಹೇಳಿದರು.
ಉಪ್ಪಿನಂಗಡಿಯಲ್ಲಿ ಮಂಗಳವಾರ ನಡೆದ ಮುಸ್ಲಿಂ ಲೀಗ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಚರಿತ್ರೆಯನ್ನು ಇಲ್ಲದಂತೆ ಮಾಡಿದ ಇವರು ಈಗ ನಾರಾಯಣ ಗುರು, ಪೆರಿಯಾರ್ ಇವಿ ರಾಮಸ್ವಾಮಿ ಅವರಂತಹ ವಿಚಾರ ಧಾರೆಯನ್ನು ಇನ್ನಿಲ್ಲದಂತೆ ಮಾಡಿದ್ದು ಖಂಡನೀಯ, ಈಗಿರುವ ಪಠ್ಯಪುಸ್ತಕ ಸಮಿತಿಯನ್ನು ಸರಕಾರ ಕೂಡಲೇ ರದ್ದು ಗೊಳಿಸಬೇಕು ಎಂದು ಒತ್ತಾಯಿಸಿದರು.
ಸಭೆಯನ್ನು ಇಸ್ಮಾಯಿಲ್ ತಂಙಳ್ ಉದ್ಘಾಟಿಸಿದರು. ಶಬೀರ್ ಅಝ್ಹರಿ ಸ್ವಾಗತಿಸಿದರು. ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪಿಕೆ ಸೈಯದ್ ಬಂಗೇರುಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿಯು ಇಸ್ಮಾಯಿಲ್, ಕರೀಂ ಕಡಬ, ಅಬ್ದುಲ್ ಸಮದ್ ಮಾಸ್ಟರ್, ಕೆ ಹೆಚ್ ಅಬ್ದುಲ್ ಲತೀಫ್ ಕರಾಯ ಉಪಸ್ಥಿತರಿದ್ದರು.





