ಮಂಗಳೂರು: ಮೇ 25, 26ರಂದು ವಿದ್ಯುತ್ ವ್ಯತ್ಯಯ
ಮಂಗಳೂರು : ಕಾವೂರು ಉಪಕೇಂದ್ರದಿಂದ ಹೊರಡುವ ಕೂಳೂರು ಮತ್ತು ಚಿಲಿಂಬಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ಮೇ ೨೫ರ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಗಾಂಧಿನಗರ, ಶಾಂತಿನಗರ, ವಿದ್ಯಾನಗರ, ಕೂಳೂರು ಜಂಕ್ಷನ್, ಬಂಗ್ರಕೂಳೂರು, ಕೊಟ್ಟಾರ ಚೌಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಕುಲಶೇಖರ ಉಪಕೇಂದ್ರದಿಂದ ಹೊರಡುವ ಜೆಪ್ಪಿನಮೊಗರು ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಯನ್ನು ಹಮ್ಮಿಕೊಂಡ ಕಾರಣ ಮೇ ೨೬ರ ಬೆಳಗ್ಗೆ ೧೦ ರಿಂದ ಸಂಜೆ ೫ರವರೆಗೆ ಬಜಾಲ್, ಪಡೀಲ್, ವೀರನಗರ, ಫೈಸಲ್‌ನಗರ, ಕಲ್ಲಕಟ್ಟೆ, ತುಂಗನಗರ, ಹೇಮಾವತಿ ನಗರ, ಪಲ್ಲಕೆರೆ, ಕರ್ಮಾರ್, ಜೆ.ಎಂ. ರೋಡ್, ಪಕ್ಕಲಡ್ಕ, ಕುಡ್ತಡ್ಕ, ಸಾಲಿಯನ್ ರೈಸ್ ಮಿಲ್, ತೋಫಿಲ, ಜಲ್ಲಿಗುಡ್ಡೆ, ಕಟ್ಟಪುಣಿ, ದರ್ಬಾರ್‌ಗುಡ್ಡೆ, ಭಟ್ರಬೆಟ್ಟು, ಪ್ರಗತಿನಗರ, ಕೆಎಚ್‌ಬಿ ಕಾಲನಿ, ಎಕ್ಕೂರು, ಬಜಾಲ್ ಬೊಲ್ಲ, ಬಜಾಲ್ ಚರ್ಚ್, ಆದರ್ಶನಗರ, ಆದರ್ಶಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
*ಚೇಳಾರು ಮತ್ತು ತಡಂಬೈಲ್ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ಮೇ ೨೬ರ ಬೆಳಗ್ಗೆ ೧೦ ರಿಂದ ಸಂಜೆ ೫ರವರೆಗೆ ಚೊಕ್ಕಬೆಟ್ಟು, ಮಧ್ಯ, ಚೇಳಾರು, ಮುಕ್ಕ, ಸಸಿಹಿತ್ಲು, ಶ್ರೀನಿವಾಸ ನಗರ, ದಾಂಡಿ, ಅಯ್ಯಪ್ಪಗುಡಿ, ಮೂಡು ಕೊಪ್ಪಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.