ಮಂಗಳೂರು: ಕಾಮಗಾರಿ ತಡೆಯಲು ರಸ್ತೆಯ ಮೇಲೆ ಮಲಗಿದ ಮಹಿಳೆ!

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಿಂದ ನಡೆಯುತ್ತಿದ್ದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯ ವೇಳೆ ಮಹಿಳೆಯೊಬ್ಬರು ರಸ್ತೆಯ ಮೇಲೆಯೇ ಮಲಗಿದ ಘಟನೆ ಮಂಗಳವಾರ ನಗರದ ಮಣ್ಣಗುಡ್ಡ ಬಳಿ ನಡೆದಿದೆ.
ಮಂಗಳೂರು ಮನಪಾ ವ್ಯಾಪ್ತಿಯ ಮಣ್ಣಗುಡ್ಡೆ ಗುರ್ಜಿಯ ವಾರ್ಡ್ ನಂ.೨೮ರಲ್ಲಿ ಓಣಿ ರಸ್ತೆಯ ಕಾಮಗಾರಿಯ ವೇಳೆ ಸ್ಥಳೀಯರಾದ ವೈಲೆಟ್ ಪಿರೇರಾ ‘ಈ ಜಾಗ ನನ್ನದು‘ ಎಂದು ತಗಾದೆ ತೆಗೆದು ರಸ್ತೆಯಲ್ಲೇ ಮಲಗಿ ಕಾಮಗಾರಿ ತಡೆಯಲು ಯತ್ನಿಸಿದ್ದಾರೆ.
ಕಾಮಗಾರಿ ನಡೆಯುತ್ತಿದ್ದಾಗಲೇ ಕೊಡೆ ಹಿಡಿದು ಕಾಂಕ್ರಿಟ್ ಹಾಕಿದ ರಸ್ತೆಯ ಮೇಲೆ ಸುಮಾರು ೨ ಗಂಟೆಗಳ ಕಾಲ ಮಲಗಿ ಹೊರಳಾಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಮಹಿಳೆಯ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮಹಿಳೆ ಮಣಿಯದಿದ್ದಾಗ ಮಹಿಳೆಯನ್ನು 10ಕ್ಕೂ ಅಧಿಕ ಮಹಿಳಾ ಪೊಲೀಸರು ಮಹಿಳೆಯನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರು.
Next Story