ವ್ಯಕ್ತಿ ನಾಪತ್ತೆ

ಮಂಗಳೂರು : ನಗರದ ಕಾರ್‌ಸ್ಟ್ರೀಟ್ ಫ್ಲವರ್ ಮಾರ್ಕೆಟ್ ಬಳಿ ಜುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಶೇಟ್ (63) ಎಂಬವರು ನಾಪತ್ತೆಯಾಗಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 24ರಂದು ಬೆಳಗ್ಗೆ 9ಕ್ಕೆ ಉಮೇಶ್ ಅಂಗಡಿಗೆ ಕೆಲಸಕ್ಕೆ ಹೋಗಿದ್ದರು. ಬೆಳಗ್ಗೆ 10.30ಕ್ಕೆ ಮರಳಿ ಮನೆಗೆ ಬಂದು ತನ್ನ ಕೈಯಲ್ಲಿದ್ದ ಮೊಬೈಲ್ ಹಾಗೂ ಬೀಗದ ಕೀ ಹಾಕುತ್ತಿದ್ದಂತಹ ಬ್ಯಾಗ್‌ನ್ನು ಮನೆಯ ಕಪಾಟಿನಲ್ಲಿಟ್ಟು ಈಗ ಬರುತ್ತೇನೆಂದು ಹೇಳಿ ಹೋದವರು ಈವರೆಗೆ ಮನೆಗೆ ಹಿಂತಿರುಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story