ಬಸ್ ಪಾಸ್ ಪಡೆಯಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ
ಮಂಗಳೂರು : ನಗರದ ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ.ಕ.ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ವತಿಯಿಂದ ಪೂರ್ಣ ಆನ್‌ಲೈನ್ ಬಸ್ ಪಾಸ್ ವಿತರಣೆಯ ಭಾಗವಾಗಿ ಚಲೋ ಬಸ್ ಪಾಸ್ ಪೂರ್ವಭಾವಿ ಸಭೆಯು ಬುಧವಾರ ನಡೆದು ಬಸ್ ಪಾಸ್ ಪಡೆಯಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಯಿತು.
ದ.ಕ.ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗಲೆಂದು ಖಾಸಗಿ ಚಲೋ ಬಸ್ ಪಾಸ್ ಮಾಡಿಕೊಡಲು ಪ್ರತ್ಯೇಕ ಕೌಂಟರ್ ಮತ್ತು ಕೇಂದ್ರವನ್ನು ತೆರೆಯಲು ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲಾ ಅಡ್ಯಾಂತ್ಯುಯ, ಕಾರ್ಯದರ್ಶಿ ವಿ.ಕೆ.ಪುತ್ರನ್, ಚಲೋ ಸಂಸ್ಥೆಯ ವ್ಯವಸ್ಥಾಪಕ ಅಮೃತ್ ಮಯ್ಯ ಮತ್ತು ಶಿವರಾಜ್, ಸಹಾಯಕ ವ್ಯವಸ್ಥಾಪಕ ಪವನ್ ರೈ ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ, ಉಪ ಪ್ರಾಂಶುಪಾಲಡಾ.ಜಯಕರ ಭಂಡಾರಿ, ಕಚೇರಿ ಅಧೀಕ್ಷಕ ರಮೇಶ್ ಉಪಸ್ಥಿತರಿದ್ದರು.
Next Story