ರಾಷ್ಟ್ರೀಯ ಮಟ್ಟದ ಕರಾಟೆ: ಕೋಡಿ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕುಂದಾಪುರ : ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ವತಿ ಯಿಂದ ಇತ್ತೀಚೆಗೆ ಅಂಬಲಪಾಡಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರ ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪದಕ ಗೆದ್ದಿದ್ದಾರೆ.
9ನೆ ತರಗತಿಯ ಮಹಮ್ಮದ್ ಅಜೀಮ್ ಖಾನ್ ಚಿನ್ನದ ಪದಕ, ಐದನೇ ತರಗತಿಯ ಮಹಮ್ಮದ್ ಫರಾನ್ ಬೆಳ್ಳಿಯ ಪದಕ ಹಾಗೂ ಏಳನೇ ತರಗತಿಯ ಮುಹಮದ್ ಅಕ್ಮಲ್ ಜುನೈದ್ ಕಂಚಿನ ಪದಕವನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳು ಕರಾಟೆ ಶಿಕ್ಷಕರಾದ ಶಂಶುದ್ದೀನ್ ಅವರಿಂದ ತರಬೇತಿ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ನಿರ್ದೇಶಕರು, ಪ್ರಾಂಶು ಪಾಲರು, ಶಿಕ್ಷಕರು ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
Next Story