ಎಲಿಮಿನೇಟರ್ ಪಂದ್ಯ: ಲಕ್ನೋ ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್

photo: twitter@imVkohli
ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್ ನ ಎಲಿಮಿನೇಟರ್ ಪಂದ್ಯಾಟದಲ್ಲಿ ಲಕ್ನೋ ಸೂಪರ್ಜಯಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಗಳಿಸಿದೆ. 14 ರನ್ ಗಳ ಅಂತರದ ಜಯ ಸಾಧಿಸಿದ ಆರ್ಸಿಬಿ ಅಭಿಮಾನಿಗಳ ನಿರೀಕ್ಷೆಯನ್ನು ಸಾಕಾರಗೊಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡದ ಪರ ರಜತ್ ಪಾಟಿದಾರ್ ಅದ್ಭುತ ಪ್ರದರ್ಶನ ತೋರಿದರು. ವಿರಾಟ್ ಕೊಹ್ಲಿ 25 ರನ್ ಗಳಿಸಿದರೆ, ರಜತ್ ಪಾಟಿದಾರ್ ಕೇವಲ 54 ಎಸೆತಗಳಲ್ಲಿ 112 ರನ್ ಬಾರಿಸಿದರು. ದಿನೇಶ್ ಕಾರ್ತಿಕ್ 37 ರನ್ ಗಳ ನೆರವಿನಿಂದ ತಂಡ 207 ರನ್ ಗಳ ಬೃಹತ್ ಮೊತ್ತವನ್ನು ಲಕ್ನೋ ತಂಡದ ಮುಂದಿಟ್ಟಿತು.
ಬಳಿಕ ಬ್ಯಾಟಿಂಗ್ ನಡೆಸಿದ ಲಕ್ನೊ ತಂಡ ನಾಯಕ ಕೆ.ಎಲ್. ರಾಹುಲ್ (79 ರನ್) ಅದ್ಭುತ ಪ್ರದರ್ಶನದ ನಡುವೆಯೂ ಸೋಲು ಕಂಡಿತು.
Next Story