ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನರೇಂದ್ರ ಬಾತ್ರಾ ರಾಜೀನಾಮೆ

ಹೊಸದಿಲ್ಲಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ(ಐಒಎ) ಅಧ್ಯಕ್ಷ ಸ್ಥಾನಕ್ಕೆ ನರೇಂದ್ರ ಬಾತ್ರಾ ಬುಧವಾರ ರಾಜೀನಾಮೆ ನೀಡಿದ್ದಾರೆ. ಹಾಕಿ ಇಂಡಿಯಾದ 35 ಲಕ್ಷ ರೂ. ನಿಧಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಐಒಎಮುಖ್ಯಸ್ಥ ಬಾತ್ರಾ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆಯನ್ನು ಆರಂಭಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಈ ಹಿಂದೆ ಬಾತ್ರಾ ವಿರುದ್ಧ ಸಿಬಿಐ ದೂರು ಸ್ವೀಕರಿಸಿದ್ದು, ಪ್ರಾಥಮಿಕ ವಿಚಾರಣೆಯನ್ನು ಆರಂಭಿಸಿದೆ. ಹಾಕಿ ಇಂಡಿಯಾಕ್ಕೆ ಸೇರಿರುವ 35 ಲಕ್ಷ ರೂ.ನಿಧಿಯನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿಯೊಂದು ತಿಳಿಸಿದೆ.
ಟೂರ್ನಿಗಳಲ್ಲಿ ಪುರುಷರ ಹಾಕಿ ತಂಡದ ಪ್ರದರ್ಶನ ಕುರಿತು ಕ್ರೀಡಾ ಒಕ್ಕೂಟವನ್ನು ಬಾತ್ರಾ ಪ್ರಶ್ನಿಸಿದ ಬಳಿಕ ಬಾತ್ರಾ ಹಾಗೂ ಹಾಕಿ ಇಂಡಿಯಾದ ನಡುವೆ ವಾಗ್ವಾದ ಆರಂಭವಾಗಿತ್ತು.
Next Story