ಬೋಪಣ್ಣ-ಮಿಡ್ಲ್ ಕೂಪ್ ಜೋಡಿಯ ಗೆಲುವಿನಾರಂಭ
ಫ್ರೆಂಚ್ ಓಪನ್

ಪ್ಯಾರಿಸ್: ರೋಹನ್ ಬೋಪಣ್ಣ ಹಾಗೂ ಅವರ ಡಚ್‌ನ ಜೊತೆಗಾರ ಮಿಡ್ಲ್ ಕೂಪ್ ಫ್ರೆಂಚ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಮಂಗಳವಾರ ನಡೆದ ಪುರುಷರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 16ನೇ ಶ್ರೇಯಾಂಕದ ಇಂಡೋ-ಡಚ್ ಜೋಡಿ ಬೋಪಣ್ಣ-ಮಿಡ್ಲ್ ಕೂಪ್ ಸ್ಥಳೀಯ ವೈಲ್ಡ್‌ಕಾರ್ಡ್ ಪಡೆದಿರುವ, ಕೆಳ ರ್ಯಾಂಕಿನ ಆಟಗಾರರಾದ ಸಾಸ್ಚಾ ಗುಯೆಮಾರ್ಡ್ ಹಾಗೂ ಲುಕಾ ವ್ಯಾನ್ ಆಸ್ಚೆ ವಿರುದ್ಧ 6-4, 6-1 ನೇರ ಸೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದರು.
ರಾಮ್‌ಕುಮಾರ್ ರಾಮನಾಥನ್ ಅಮೆರಿಕದ ಹಂಟರ್ ರೀಸ್‌ರೊಂದಿಗೆ ಆಡಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಝಾ ಹಾಗೂ ಆಕೆಯ ಝೆಕ್ ಜೊತೆಗಾರ್ತಿ ಲೂಸಿ ಹ್ರಾಡೆಕಾರೊಂದಿಗೆ ಇಟಲಿಯ ಜಾಸ್ಮಿನ್ ಪಯೊಲಿನಿ ಹಾಗೂ ಮಾರ್ಟಿನಾ ಟ್ರೆವಿಸನ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಎಲ್ಲ ಮೂರು ಭಾರತೀಯ ಟೆನಿಸ್ ತಾರೆಯರು ಮಿಕ್ಸೆಡ್ ಡಬಲ್ಸ್ ಸ್ಪರ್ಧೆಯಲ್ಲೂ ಭಾಗವಹಿಸಲಿದ್ದಾರೆ.
Next Story