IPL ಎಲಿಮಿನೇಟರ್ ಪಂದ್ಯ: ಚರ್ಚೆಗೆ ಗ್ರಾಸವಾದ ಆರ್ ಸಿಬಿಯ ಫೀಲ್ಡರ್ ಹಸರಂಗ ಕ್ಯಾಚ್ ಪ್ರಯತ್ನ

Photo: videograb/iplt20.com
ಕೋಲ್ಕತಾ: ಐಪಿಎಲ್ ಎಲಿಮಿನೇಟರ್ ಸುತ್ತಿನಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡದ ಬ್ಯಾಟರ್ ದೀಪಕ್ ಹೂಡಾ ಅವರು ಹರ್ಷಲ್ ಪಟೇಲ್ ಬೌಲಿಂಗ್ ನಲ್ಲಿ ನೀಡಿದ ಕ್ಯಾಚ್ ಪಡೆಯಲು ಬೌಂಡರಿ ಹಗ್ಗಗಳ ಬಳಿ ಆರ್ ಸಿಬಿ ಫೀಲ್ಡರ್ ಹಸರಂಗ ಅವರು ಮಾಡಿದ್ದ ಅಮೋಘ ಪ್ರಯತ್ನವನ್ನು ಸೇವ್ ಎಂದು ಪರಿಗಣಿಸಲಾಗಿದ್ದು, ಸಿಕ್ಸರ್ ಬದಲಿಗೆ ಅವರು 5 ರನ್ ಉಳಿಸಿದರು ಎಂದು ಪರಿಗಣಿಸಲಾಗಿದೆ.
ಹಸರಂಗ ಅವರು ಚೆಂಡನ್ನು ಸಾಕಷ್ಟು ಸಮಯದವರೆಗೆ ಹಿಡಿದಿದ್ದರು, ಮೈದಾನದ ಮೇಲೆ ಹೊರಳಿದರು. ಚೆಂಡನ್ನು ಬಿಟ್ಟುಬಿಟ್ಟರು. ಆದಾಗ್ಯೂ ಅದನ್ನು ಔಟ್ ಎಂದು ಏಕೆ ನೀಡಲಿಲ್ಲ?ಎಂಬ ಪ್ರಶ್ನೆ ಎದ್ದಿದೆ.
ಕಾನೂನು 33.3.ರ ಪ್ರಕಾರ "ಕ್ಯಾಚ್ ಪಡೆಯುವ ಕ್ರಿಯೆಯು ಚೆಂಡು ಮೊದಲ ಬಾರಿಗೆ ಕ್ಷೇತ್ರರಕ್ಷಕನ ಸಂಪರ್ಕಕ್ಕೆ ಬಂದಾಗಿನಿಂದ ಆರಂಭವಾಗುತ್ತದೆ. ಕ್ಷೇತ್ರರಕ್ಷಕನು ಚೆಂಡು ಹಾಗೂ ಆತನ/ಆಕೆಯ ಸ್ವಂತ ಚಲನೆ ಎರಡರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆದಾಗ ಕೊನೆಗೊಳ್ಳುತ್ತದೆ"
ಹಸರಂಗ ಅವರು ಚೆಂಡಿನ ಮೇಲೆ ನಿಯಂತ್ರಣವನ್ನು ಹೊಂದಿದ್ದರು. ಆದರೆ ಅವರು ಸ್ವಂತ ಚಲನೆಯ ಮೇಲೆ ನಿಯಂತ್ರಣ ಹೊಂದಿರಲಿಲ್ಲ ಹಾಗೂ ಅವರು ಆ ನಿಯಂತ್ರಣವನ್ನು ಸಾಧಿಸುವ ಮೊದಲು ಚೆಂಡನ್ನು ಬಿಟ್ಟುಬಿಟ್ಟಿದ್ದರು.
Best effort ever saw on field...hasranga tried to keep it as much as he can great fielding...#IPLplayoffs #hasaranga pic.twitter.com/lxHgvrIQiy
— Amitk (@Indrabeing) May 25, 2022