ಉಡುಪಿ: ಮೇ 28ರಂದು ಜಯಂಟ್ಸ್ ಗ್ರೂಪ್ ಅಧ್ಯಕ್ಷರ ಪದಗ್ರಹಣ
ಇಕ್ಬಾಲ್ ಮನ್ನಾ
ಉಡುಪಿ, ಮೇ 26: ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಇದರ 2022- 23ನೆ ಸಾಲಿನ ನೂತನ ಅಧ್ಯಕ್ಷ ಇಕ್ಬಾಲ್ ಮನ್ನಾ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮೇ 28ರಂದು ಸಂಜೆ 7ಗಂಟೆ ಉಡುಪಿ ಹೊಟೇಲ್ ಕಿದಿಯೂರು ಸಭಾಂಗಣದಲ್ಲಿ ನಡೆಯಲಿದೆ.
ಪದಗ್ರಹಣ ಅಧಿಕಾರಿಯಾಗಿ ಜಯಂಟ್ಸ್ ಗ್ರೂಪ್ನ ಫೆಡ್ 6 ಇದರ ಫೆಡರೇಶನ್ ಅಧ್ಯಕ್ಷೆ ತಾರದೇವಿ ವಾಲಿ, ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬೈ ಇದರ ಕೇಂದ್ರ ಸಮಿತಿ ಸದಸ್ಯ ದಿನಕರ ಕೆ.ಅಮೀನ್, ನಗರಸಭೆ ಸದಸ್ಯೆ ಮಾನಸ ಚಿದಾನಂದ ಪೈ, ಫೆಡರೇಶನ್ ಉಪಾಧ್ಯಕ್ಷ ರಮೇಶ್ ಪೂಜಾರಿ, ಫೆಡರೇಶನ್ ಸಂಯೋಜಕ ಪಿ.ತೇಜಸ್ವರ್ ರಾವ್, ಯುನಿಟ್ ನಿರ್ದೇಶಕ ಲಕ್ಷ್ಮೀಕಾಂತ್ ಬೆಸ್ಕೂರ್ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
Next Story