ಪಿಎಂಜೆಜೆಬಿವೈ, ಪಿಎಂಎಸ್ಬಿವೈ ಪಾಲಿಸಿದಾರರಿಗೆ ಸೂಚನೆ
ಉಡುಪಿ : ಎಲ್ಲಾ ಬ್ಯಾಂಕುಗಳು ಪಿಎಂಜೆಜೆಬಿವೈ ಮತ್ತು ಪಿಎಂಎಸ್ಬಿವೈ ವಾರ್ಷಿಕ ನವೀಕರಣ ಪ್ರೀಮಿಯಂಅನ್ನು ಪಾಲಿಸಿದಾರರ ಖಾತೆ ಗಳಿಂದ ಮೇ ೨೫ರಿಂದ ೩೦ನೇ ತಾರೀಕಿನವರೆಗೆ ಡೆಬಿಟ್ ಮಾಡುತ್ತಿವೆ.
ಪಿಎಂಜೆಜೆಬಿವೈ (೩೩೦ರೂ.) ಮತ್ತು ಪಿಎಂಎಸ್ಬಿವೈ (೧೨ರೂ.) ೨೦೨೨-೨೩ನೇಸಾಲಿಗೆ ವಿಮಾ ಪಾಲಿಸಿ ಗಳ ನವೀಕರಣಕ್ಕಾಗಿ ದಯವಿಟ್ಟು ಕನಿಷ್ಠ ೩೪೨ರೂ.ಗಳ ಬ್ಯಾಲೆನ್ಸ್ ಸಂಬಂಧಿತ ಎಸ್ಬಿ ಖಾತೆಗಳಲ್ಲಿ ಇರುವ ಹಾಗೆ ಖಚಿತಪಡಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ಅಗ್ರಣಿ ಬ್ಯಾಂಕ್ ಕೆನರಾ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಪಿಎಂಜೆಜೆಬಿವೈ, ಪಿಎಂಎಸ್ಬಿವೈ ಪಾಲಿಸಿಗಳ ನವೀಕರಣಕ್ಕಾಗಿ ಜೂನ್೧ಕ್ಕೆ ಮೊದಲು ಪಾಲಿಸಿದಾರರ ಎಸ್ಬಿ ಅಕೌಂಟ್ನಿಂದ ಎರಡೂ ಪ್ರೀಮಿಯಂಗಳು ಡೆಬಿಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಪ್ರಕಟಣೆ ಸೂಚಿಸಿದೆ.
Next Story