ವಿಶ್ವದಾಖಲೆ ಬರೆದ ಜರ್ಮನಿಯ ಸರ್ಫರ್ ಸೆಬಾಸ್ಟಿಯನ್
ಬರ್ಲಿನ್, ಮೇ 26: ಜರ್ಮನಿಯ ಸರ್ಫರ್(ಕಡಲ ಅಲೆಯ ಮೇಲೆ ಸವಾರಿ ಮಾಡುವ ಕ್ರೀಡಾಪಟು) ಸೆಬಾಸ್ಟಿಯನ್ ಸ್ಟೆಯುಟ್ನರ್ 86 ಅಡಿ ಎತ್ತರದ ಬೃಹತ್ ಅಲೆಗಳ ಮೇಲೆ ಸರ್ಫಿಂಗ್ ನಡೆಸುವ ಮೂಲಕ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸಿದ್ದಾರೆ ಎಂದು ಗಿನ್ನೆಸ್ ವಿಶ್ವದಾಖಲೆ ಹೇಳಿದೆ.
2020ರ ಅಕ್ಟೋಬರ್‌ನಲ್ಲಿ ಪೋರ್ಚುಗಲ್‌ನ ನಝರೆ ಪ್ರಾಂತದ ಪ್ರಯಡೊ ನೋರ್ಟೆ ಬಳಿಯ ಕಡಲಿನಲ್ಲಿ 37 ವರ್ಷದ ಸೆಬಾಸ್ಟಿಯನ್ ಅವರು ಭಾರೀ ಗಾತ್ರದ ಅಲೆ(86 ಅಡಿ ಎತ್ತರ)ಯ ಮೂಲಕ ಸರ್ಫಿಂಗ್ ನಡೆಸುವ ಮೂಲಕ ವಿಶ್ವದಾಖಲೆ ಬರೆದರು. ಈ ಸಾಧನೆಗಾಗಿ ಅವರನ್ನು 2021ರ ರೆಡ್‌ಬುಲ್ ಬೃಹತ್ ಅಲೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಸೆಬಾಸ್ಟಿಯನ್ ವಿಶ್ವದಾಖಲೆ ಬರೆದ ಸರ್ಫಿಂಗ್ ಸಾಹಸದ ವೀಡಿಯೊ ವೈರಲ್ ಆಗಿದೆ. ಸೆಬಾಸ್ಟಿಯನ್ ಹೆಸರು ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾಗಿರುವುದನ್ನು 2022ರ ಮೇ 24ರಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಘೋಷಿಸಲಾಗಿದೆ.
New record: Largest wave surfed (unlimited) - male 26.21 m (86 feet) by Germany's @SebastianSurfs
— Guinness World Records (@GWR) May 24, 2022
Jorge Leal + @wsl pic.twitter.com/Cb1c8vKP3Z