Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೆಹರೂ ಜೈಲಿನಲ್ಲಿದ್ದಾಗ ಮಗಳು ಇಂದಿರಾಗೆ...

ನೆಹರೂ ಜೈಲಿನಲ್ಲಿದ್ದಾಗ ಮಗಳು ಇಂದಿರಾಗೆ ಬರೆದ ಪತ್ರ

ನೆಹರೂ ಇನ್ನಿಲ್ಲವಾಗಿ ಇಂದಿಗೆ 58 ವರ್ಷ

ವಾರ್ತಾಭಾರತಿವಾರ್ತಾಭಾರತಿ27 May 2022 10:35 AM IST
share
ನೆಹರೂ ಜೈಲಿನಲ್ಲಿದ್ದಾಗ ಮಗಳು ಇಂದಿರಾಗೆ ಬರೆದ ಪತ್ರ

ಜವಾಹರಲಾಲ್ ನೆಹರೂ ಮಗಳು ಇಂದಿರಾಗೆ ಬರೆದ ಜಗತ್ತಿನ ಪ್ರಾಚೀನ ಕಾಲದ ಸಂಕ್ಷಿಪ್ತ ವೃತ್ತಾಂತಗಳು.

ಇಂದಿರಾ ಗಾಂಧಿ ಹತ್ತು ವರ್ಷದ ಹುಡುಗಿಯಾಗಿದ್ದಾಗ ತನ್ನ ಬೇಸಿಗೆ ರಜೆಯನ್ನು ಮಸೂರಿಯಲ್ಲಿ ಕಳೆಯುತ್ತಿದ್ದರೆ, ಆಕೆಯ ತಂದೆ ನೆಹರೂ ಅಲಹಾಬಾದಿನಲ್ಲಿ ತಮ್ಮ ಕೆಲಸದಲ್ಲಿ ವ್ಯಸ್ತವಾಗಿದ್ದರು. ಆ ಬೇಸಿಗೆಯ ದಿನಗಳಲ್ಲಿ ನೆಹರೂ ಆಕೆಗೆ ಭೂಮಿಯ ಹುಟ್ಟು, ಮನುಕುಲ ಮತ್ತು ಜೀವ ವಿಕಸನದ ಕುರಿತು ಹಾಗೂ ನಾಗರಿಕತೆ ಮತ್ತು ಸಮಾಜಗಳ ಬೆಳವಣಿಗೆಯ ಕತೆಯನ್ನು ಸರಣಿ ಪತ್ರಗಳ ರೂಪದಲ್ಲಿ ಬರೆದರು.

1928ರಲ್ಲಿ ಬರೆದ ಈ ಪತ್ರಗಳು ಈ ಕಾಲಕ್ಕೂ ಸ್ಪಂದಿಸುವಷ್ಟು ತಾಜಾತನದಿಂದ ಕೂಡಿದೆ. ಪ್ರಕೃತಿ ಮತ್ತು ಮನುಷ್ಯರ ವಿಕಸನದ ಕತೆಗಳು ನೆಹರೂವಿಗೆ ಯಾವುದೇ ಕತೆ ಕಾದಂಬರಿಗಳಿಗಿಂತ ಹೆಚ್ಚು ಆಸಕ್ತಿಪೂರ್ಣವಾಗಿತ್ತೆಂಬುದನ್ನು ಈ ಪತ್ರಗಳಲ್ಲಿ ನಾವು ಕಾಣಬಹುದು.

ಅದು 1928ರ ಬೇಸಿಗೆಯ ಸಮಯ, ಆಗ ನೆಹರೂ ಮಸೂರಿಯಲ್ಲಿದ್ದ ಮಗಳು ಇಂದಿರಾಗೆ ಪತ್ರ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡರು. ತಮ್ಮ ಮೊದಲ ಪತ್ರ ‘ಬುಕ್ ಆಫ್ ನೇಚರ್’ನಲ್ಲಿ ನೆಹರೂ ವಿಶ್ವದ ಮೇಲಿನ ಜೀವ ಉಗಮದ ಬಗ್ಗೆ ಮಗಳಿಗೆ ವಿವರಿಸುತ್ತಾರೆ. ಇದಾದ ನಂತರ ಅವರು ಇತಿಹಾಸ, ಭಾಷೆ, ಮಹಾಕಾವ್ಯಗಳು, ಭೂಗೋಳ, ಹೀಗೆ ಹಲವಾರು ವಿಷಯಗಳ ಮೇಲೆ ಇಂದಿರಾಗೆ ಪತ್ರ ಬರೆಯಲು ಪ್ರಾರಂಭಿಸುತ್ತಾರೆ. 1930ರಲ್ಲಿ ಇಂದಿರಾ 13ನೇ ವಯಸ್ಸಿಗೆ ಕಾಲಿಟ್ಟಾಗ ಆಗಿನ್ನೂ ಜೈಲಿನಲ್ಲಿದ್ದ ನೆಹರೂ ಅವರು ಮಗಳು ತಂದೆಯ ಸಂಪರ್ಕದಲ್ಲಿರಲಿ ಎಂದು ವಿವರಣಾತ್ಮಕ ಪತ್ರಗಳನ್ನು ಬರೆಯಲು ಪ್ರಾರಂಭಿಸುತ್ತಾರೆ. ನಂತರ ಸತತ ನಾಲ್ಕು ವರ್ಷಗಳ ಕಾಲ ಜೈಲಿನಿಂದಲೇ ನೆಹರೂ ಪತ್ರಗಳನ್ನು ಬರೆಯುವುದನ್ನು ಮುಂದುವರಿಸುತ್ತಾರೆ.

 ಮುಂದೆ ಇದೇ ಪತ್ರಗಳ ವಿಚಾರವಾಗಿ 1973ರಲ್ಲಿ ಇಂದಿರಾ ಗಾಂಧಿ ಪ್ರತಿಕ್ರಿಯಿಸುತ್ತಾ ಈ ಪತ್ರಗಳು ಜನರ ಬಗೆಗಿನ ಕಾಳಜಿ ಮತ್ತು ಜಗತ್ತಿನೆಲ್ಲ್ಲೆಡೆ ಇರುವ ಕೌತುಕಗಳ ಬಗ್ಗೆ ಕೂತೂಹಲವನ್ನು ಹೆಚ್ಚಿಸುತ್ತವೆ. ಅವು ನಿಸರ್ಗವನ್ನು ಪುಸ್ತಕದ ಹಾಗೆ ಕಾಣಲು ನನಗೆ ಪ್ರೇರೇಪಿಸಿವೆ. ಎಂದು ಹೇಳುತ್ತಾರೆ.

ಅಂತಹ ಪತ್ರಗಳಲ್ಲಿ ಇಂದಿರಾಗೆ ಜವಾಹರ್ ಲಾಲ್ ನೆಹರೂ ಬರೆದ ಒಂದು ಪತ್ರ ಇಲ್ಲಿದೆ.

ನನ್ನ ಪ್ರೀತಿಯ ಇಂದಿರಾ

ನಿನ್ನ ಹುಟ್ಟುಹಬ್ಬದ ದಿನದಂದು ಶುಭ ಹಾರೈಕೆಗಳನ್ನು ಸ್ವೀಕರಿಸುವ ಹವ್ಯಾಸ ನಿನಗೆ ರೂಢಿಗತವಾಗಿದೆ. ಶುಭಹಾರೈಕೆಗಳು ನಿನಗೆ ಪರಿಪೂರ್ಣತೆಯನ್ನು ನೀಡುತ್ತವೆ.ಆದರೆ ನೈನಿ ಜೈಲಿನಿಂದ ನಾನು ನಿನಗೆ ಯಾವ ಊಡುಗೊರೆ ನೀಡಲಿ? ನಾನು ನೀಡುತ್ತಿರುವ ಉಡುಗೊರೆಗಳು ಭೌತಿಕ ಮತ್ತು ಘನವಾಗಿರುವಂತಹವುಗಳಲ್ಲ. ಬದಲಾಗಿ ಅವು ಮನಸ್ಸಿಗೆ ಮತ್ತು ಉತ್ಸಾಹಕ್ಕೆ ಸಂಬಂಧಿಸಿದವುಗಳು. ಅವು ಜೈಲಿನ ಎತ್ತರದ ಗೋಡೆಗಳಿಂದಲೂ ಸಹ ತಡೆಯನ್ನೊಡ್ಡಲು ಸಾಧ್ಯವಾಗದೆ ಇರುವಂತಹವುಗಳಾಗಿವೆ.

ಚಿನ್ನು ನಾನು ಸಲಹೆ ಮತ್ತು ಉಪದೇಶ ನೀಡುವುದೆಲ್ಲವನ್ನೂ ಹೇಗೆ ನಿರಾಕರಿಸುತ್ತೇನೆ ಎಂದು ನಿನಗೆ ಗೊತ್ತು. ನಾನು ಯಾವಾಗಲೂ ಯಾವುದು ಸರಿ, ಯಾವುದು ತಪ್ಪು, ಏನು ಮಾಡಬೇಕು ಏನನ್ನು ಮಾಡಬಾರದು ಎನ್ನುವುದರ ಕುರಿತಾಗಿ ಚಿಂತಿಸುತ್ತೇನೆ. ಆದರೆ ಇದನ್ನು ಬರಿ ಉಪದೇಶ ಹೇಳುವುದರ ಮೂಲಕ ಮಾಡುವುದಲ್ಲ, ಬದಲಾಗಿ ಅವುಗಳನ್ನು ಮಾತುಕತೆ ಮತ್ತು ಚರ್ಚೆ ಮೂಲಕ ಕಾರ್ಯಗೊಳಿಸುವಂತಹದ್ದು. ಅಂತಹ ಚರ್ಚೆ ಮೂಲಕ ಅಲ್ಪಸತ್ಯವಾದರೂ ಹೊರಬರಲು ಸಹಾಯಕವಾಗುತ್ತದೆ. ನಿನ್ನ ಜೊತೆಗಿನ ಮಾತುಕತೆ ನನಗೆ ಇಷ್ಟವಾಗಿದೆ ಮತ್ತು ನಾವಿಬ್ಬರು ಹಲವಾರು ವಿಷಯಗಳ ಕುರಿತಾಗಿ ಚರ್ಚೆ ಮಾಡಿದ್ದೇವೆ. ಆದರೆ ಜಗತ್ತು ವಿಶಾಲವಾಗಿದೆ. ಈ ಜಗತ್ತಿನ ಹೊರಗಡೆ ಮಿಥ್ಯ ಮತ್ತು ರಹಸ್ಯವನ್ನು ಒಳಗೊಂಡ ಇನ್ನೊಂದು ಅದ್ಭುತ ಜಗತ್ತಿದೆ. ಆದ್ದರಿಂದ ನಾವ್ಯಾರು ಕೂಡ ಎಂದಿಗೂ ಕೂಡ ನಿರಾಶೆಗೊಳ್ಳಬೇಕಾಗಿಲ್ಲ ಅಥವಾ ನಾವು ಎಲ್ಲವನ್ನು ಕಲಿತು ಬುದ್ಧಿವಂತರಾಗಿದ್ದೇವೆ ಎಂದು ಭಾವಿಸಬೇಕಿಲ್ಲ.

ಆದರೆ ಇದರ ನಂತರ ನಾನೇನು ಮಾಡಬೇಕು? ಪತ್ರವು ಮಾತುಕತೆಯ ರೂಪವನ್ನು ಪಡೆಯುವುದು ಕಷ್ಟ; ಇದು ಕೇವಲ ಒಂದೆಡೆಯ ಸಂಬಂಧ ಮಾತ್ರ. ನಾವು ನಿಜವಾಗಿಯೂ ಪರಸ್ಪರ ಮಾತುಕತೆ ನಡೆಸಿದ್ದೇವೆ ಎನ್ನುವ ಆಲೋಚನೆ ನಿನಗೆ ಬರಲು ನಾನು ಈ ಸಲಹೆಗಳನ್ನು ನೀಡಿದ್ದೇನೆ.

ಇತಿಹಾಸದಲ್ಲಿ ದೇಶಗಳ ಕಾಲಾವಧಿ, ವ್ಯಕ್ತಿಗಳು, ಮಹಿಳೆಯರ ಬಗ್ಗೆ ನಾವು ಓದಿರುತ್ತೇವೆ. ನೀನು ಮೊದಲ ಬಾರಿಗೆ ಜೀನ್ ಡಿ ಆರ್ಚ್ ಕಥೆಯನ್ನು ಓದಿದಾಗ ಹೇಗೆ ಉತ್ಸುಕಳಾಗಿದ್ದೆ ಎನ್ನುವುದರ ಬಗ್ಗೆ ನಿನಗೆ ನೆನಪಿದೆಯೇ? ಮತ್ತು ನಿನ್ನ ಬಯಕೆಯು ಕೂಡ ಆಕೆಯಂತದ್ದೆ ಆಗಿತ್ತು. ಸಾಮಾನ್ಯ ವ್ಯಕ್ತಿ ಮತ್ತು ಮಹಿಳೆಯರು ಜನಪ್ರಿಯ ನಾಯಕರ ಹಾಗೆ ಇರುವುದಿಲ್ಲ. ಏಕೆಂದರೆ ಅವರಿಗೆ ಆಹಾರ, ಮಕ್ಕಳು ಮತ್ತು ಆಶ್ರಯವೇ ಹೆಚ್ಚು ಚಿಂತಿಸುವಂತೆ ಮಾಡುತ್ತದೆ. ಆದರೆ ಅಂತಹ ಸನ್ನಿವೇಶ ಬಂದಾಗ ಇಡೀ ಜನ ಸಮುದಾಯವು ಕೂಡ ಅಂತಹ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಆ ಸಂದರ್ಭವು ಸಾಮಾನ್ಯ ವ್ಯಕ್ತಿ ಮತ್ತು ಮಹಿಳೆಯರನ್ನು ಸಹಿತ ಹೀರೊಗಳನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಪ್ರಮುಖ ನಾಯಕರು ಎಲ್ಲ ಜನರನ್ನು ಪ್ರೇರೇಪಿಸುವಂತೆ ಮಾಡಿ ಉತ್ತಮ ಕಾರ್ಯ ಕೈಗೊಳ್ಳುವಂತೆ ಮಾಡುತ್ತಾರೆ. ಭಾರತದಲ್ಲಿ ಉತ್ತಮ ನಾಯಕನಾದವನು ಶೋಷಿತರ ಮೇಲೆ ಪ್ರೀತಿ ತೋರಿಸುವುದಲ್ಲದೆ ಅವರಿಗೆ ಸಹಾಯ ಮಾಡುವ ಇಚ್ಛೆಯನ್ನು ಹೊಂದಿರುತ್ತಾನೆ ಮತ್ತು ನಮ್ಮ ಜನರನ್ನು ಉತ್ತಮ ಕಾರ್ಯ ಮತ್ತು ತ್ಯಾಗದಲ್ಲಿ ತೊಡಗಿಸಿಕೊಳ್ಳಲು ಪ್ರೇರಕನಾಗುತ್ತಾನೆ, ಅಲ್ಲದೆ ಹಸಿದವರಲ್ಲಿ, ಬಡವರಲ್ಲಿ ಮತ್ತು ಶೋಷಿತರಲ್ಲಿ ಮುಕ್ತಿ ಹಾಗೂ ಸಂತಸ ಮೂಡಲು ಅವರಿಗೆ ನೆರವಾಗುತ್ತಾನೆ.

ಬಾಪೂಜಿ ಜೈಲಿನಲ್ಲಿದ್ದಾರೆ, ಆದರೆ ಅವರ ಮಾಂತ್ರಿಕ ಸಂದೇಶ ಲಕ್ಷಾಂತರ ಭಾರತೀಯರ ಹೃದಯವನ್ನು ಗೆದ್ದಿದೆ, ಪುರುಷರು, ಮಹಿಳೆಯರು ಮತ್ತು ಚಿಕ್ಕಪುಟ್ಟ ಮಕ್ಕಳು ಸಹಿತ ಭಾರತದ ಸ್ವಾತಂತ್ರ್ಯ ಹೋರಾಟದ ಯೋಧರಾಗಿದ್ದಾರೆ. ಇಂದು ಭಾರತದಲ್ಲಿ ನಾವು ಇತಿಹಾಸವನ್ನು ನಿರ್ಮಿಸುತ್ತಿದ್ದೇವೆ. ಅದು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವುದನ್ನು ಈಗ ನೀನು ಮತ್ತು ನಾನು ನೋಡುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲಿ ನಾವು ಸಹ ಅದರ ಭಾಗವಾಗಿರುವುದು ನಿಜಕ್ಕೂ ನಮ್ಮ ಅದೃಷ್ಟವಾಗಿದೆ.

ಅದರಲ್ಲಿ ನಾವು ವಹಿಸುತ್ತಿರುವ ಪಾತ್ರವಾದರೂ ಏನು ?

ಒಂದು ವೇಳೆ ನಾವು ಭಾರತದ ಯೋಧರಾಗಬೇಕಾದರೆ ಭಾರತವನ್ನು ನಾವೆಲ್ಲರೂ ಗೌರವಿಸಬೇಕು, ಆ ಗೌರವ ಪವಿತ್ರ ನಂಬಿಕೆಯಾಗಿದೆ. ಅಷ್ಟಕ್ಕೂ ಯಾವುದು ಸರಿ ಯಾವುದು ತಪ್ಪುಎನ್ನುವುದನ್ನು ತಿರ್ಮಾನಿಸುವುದು ಅಷ್ಟು ಸುಲಭದ ಮಾತಲ್ಲ. ಆದ್ದರಿಂದ ನಿನಗೆ ಯಾವಾಗ ಸಂಶಯವೆನಿಸುತ್ತೋ ಆಗ ನೀನು ಈ ಪ್ರಯೋಗಕ್ಕೆ ಒಳಪಡಲು ನಾನು ನಿನ್ನನ್ನು ವಿನಂತಿಸಿಕೊಳ್ಳುತ್ತೇನೆ. ಯಾವತ್ತೂ ರಹಸ್ಯವಾಗಿ ಕೆಲಸವನ್ನು ಮಾಡಬೇಡ ಅಥವಾ ಮುಚ್ಚಿಡಬೇಡ. ಒಂದು ವೇಳೆ ನೀನು ಮುಚ್ಚಿಡುವುದಕ್ಕೆ ಬಯಸುತ್ತಿದ್ದರೆ ನೀನು ಹೆದರಿದ್ದಿಯಾ ಎಂದರ್ಥ. ನಿನಗೆ ಹೆದರಿಕೆ ಎನ್ನುವುದು ಅಷ್ಟು ಒಳ್ಳೆಯದಲ್ಲ ಮತ್ತು ಯೋಗ್ಯವೂ ಅಲ್ಲ. ಒಂದು ವೇಳೆ ನೀನು ಧೈರ್ಯವಾಗಿದ್ದರೆ ಎಲ್ಲವು ಕೂಡ ನಿನ್ನನ್ನು ಹಿಂಬಾಲಿಸುತ್ತದೆ.

ನಿನಗೆ ತಿಳಿದಿರುವವಂತೆ ಬಾಪೂಜಿಯವರ ನಾಯಕತ್ವದಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ರೀತಿಯ ರಹಸ್ಯಕ್ಕೆ ಮತ್ತು ಮುಚ್ಚಿಡುವಿಕೆಗೆ ಸ್ಥಾನವಿಲ್ಲ. ನಾವೇನು ಮಾಡುತ್ತೇವೆ ಮತ್ತು ಹೇಳುತ್ತೇವೆ ಎನ್ನುವುದಕ್ಕೆ ಯಾವುದೇ ರೀತಿಯ ಹೆದರಿಕೆ ಇಲ್ಲ. ಹಗಲು ರಾತ್ರಿಗಳೆನ್ನದೆ ನಾವು ಕಾರ್ಯನಿರ್ವಹಿಸುತ್ತೇವೆ. ನಮ್ಮ ಖಾಸಗಿ ಬದುಕಿನಲ್ಲಿಯೂ ಕೂಡ ಸೂರ್ಯನನ್ನು ಸ್ನೇಹಿತನನ್ನಾಗಿ ಮಾಡಿಕೊಂಡು ಹಗಲಿನಲ್ಲಿಯೂ ಕಾರ್ಯನಿರ್ವಹಿಸುತ್ತೇವೆ. ಆ ಮೂಲಕ ಯಾವುದನ್ನೂ ರಹಸ್ಯವಾಗಿಡುವುದಿಲ್ಲ. ಒಂದು ವೇಳೆ ನೀನು ಹಾಗೆ ಮಾಡಿದ್ದೇ ಆದಲ್ಲಿ ಯಾವುದೇ ಸಂಗತಿ ನಡೆದಾಗಲೂ ಕೂಡ ನೀನು ಬೆಳಕಿನ ಮಗುವಾಗಿ ಬೆಳೆಯುತ್ತಿಯ, ನಿರ್ಭಯ, ಶಾಂತ ಚಿತ್ತತೆಯಿಂದ ಇರುತ್ತಿಯ.

ನಾನು ನಿನಗೆ ಸುದೀರ್ಘ ಪತ್ರ ಬರೆದಿದ್ದೇನೆ. ಆದರೂ ನಾನು ನಿನಗೆ ಹೇಳುವುದು ಸಾಕಷ್ಟಿದೆ. ಆದರೆ ಅದೆಲ್ಲವೂ ಪತ್ರದಲ್ಲಿ ಒಳಗೊಳ್ಳಲು ಹೇಗೆ ಸಾಧ್ಯ ? ಗುಡ್ ಬೈ ಪುಟ್ಟಾ, ನೀನು ಭಾರತದ ಸೇವೆಯಲ್ಲಿ ದಿಟ್ಟ ಯೋಧಳಾಗಬಹುದು.

ನನ್ನ ಪ್ರೀತಿಯ ಶುಭ ಹಾರೈಕೆಗಳೊಂದಿಗೆ

ನಿನ್ನ ಪ್ರೀತಿಯ ತಂದೆ

ಜವಾಹರಲಾಲ್ ನೆಹರೂ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X