Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸಂವಿಧಾನ ಉಳಿಸಲು, ದೇಶವನ್ನು...

ಸಂವಿಧಾನ ಉಳಿಸಲು, ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಎಸ್ಡಿಪಿಐ ಬದ್ಧವಾಗಿದೆ: ಅಬ್ದುಲ್ ಮಜೀದ್

ಎಸ್ಡಿಪಿಐ ಜನಾಧಿಕಾರ ಸಮಾವೇಶ

ವಾರ್ತಾಭಾರತಿವಾರ್ತಾಭಾರತಿ27 May 2022 7:54 PM IST
share
ಸಂವಿಧಾನ ಉಳಿಸಲು, ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಎಸ್ಡಿಪಿಐ ಬದ್ಧವಾಗಿದೆ: ಅಬ್ದುಲ್ ಮಜೀದ್

ಮಂಗಳೂರು, (ಕಣ್ಣೂರು ಮೈದಾನ): ದೇಶದಲ್ಲಿ ಸಂವಿಧಾನವನ್ನು ಉಳಿಸಲು, ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಎಸ್ಡಿಪಿಐ ಬದ್ಧವಾಗಿದೆ ಎಂದು ಎಸ್ಡಿಪಿಐ ರಾಜ್ಯ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ತಿಳಿಸಿದ್ದಾರೆ.

ನಗರದ ಕಣ್ಣೂರು ಮೈದಾನದಲ್ಲಿಂದು ಎಸ್ಡಿಪಿಐ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಜನಾಧಿಕಾರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಸರಕಾರ  ಜನರ ಪರವಾಗಿಲ್ಲ, ಅಂಬಾನಿ, ಅದಾನಿ ಅವರ ಪರವಾಗಿದೆ. ದೇಶವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಮಾಡುವ ಬದಲು ಅಧಿಕಾರ ಪಡೆದಿರುವ ಫ್ಯಾಸಿಸ್ಟ್ ಶಕ್ತಿಗಳು ಈ ದೇಶವನ್ನು ಭ್ರಷ್ಟಾಚಾರ, ಕೋಮವಾದ, ದ್ವೇಷದ ರಾಜಕಾರಣದ ಮೂಲಕ ಛಿದ್ರಗೊಳಿಸಲು ಹೊರಟಿವೆ.

ನೋಟ್ ಬ್ಯಾನ್, ಜಿಎಸ್ಟಿ, ಎನ್ಇಪಿ ಮೊದಲಾದ ನೀತಿಯ ಮೂಲಕ ಬಿಜೆಪಿ ಜನ ಸಾಮಾನ್ಯರ ಸಂಕಷ್ಟಕ್ಕೆ ಕಾರಣವಾಗಿದೆ. ಪೋಲೀಸರ ಸಮ್ಮಖದಲ್ಲಿಯೇ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ ನಡೆದಿದೆ. ಪರಿಹಾರ ನಿಡುವಲ್ಲಿ ತಾರತಮ್ಯ ನಡೆಯುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಹಿಂದೆಂದಿಗೂ ಕಂಡು ಕೇಳರಿಯದ ರೀತಿಯಲ್ಲಿ  ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ವಿರೋಧ ಪಕ್ಷಗಳು ಮೌನವಹಿಸಿವೆ.

ಹಿಜಾಬ್ ಧಾರ್ಮಿಕ ಆಚರಣೆಯಲ್ಲ ಎಂದು ರಾಜ್ಯ ಸರಕಾರ ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿದ ಸಂದರ್ಭದಲ್ಲಿ ವಿಪಕ್ಷದಲ್ಲಿದ್ದ ಮುಸ್ಲಿಂ ಸಮುದಾಯದ ಶಾಸಕರಿಗೆ ನಾಚಿಕೆಯಾಗಬೇಕು. ಎನ್ಇಪಿ ಎಂಬುವುದು ಆರೆಸೆಸ್ ಶಿಕ್ಷಣ ನೀತಿ ಹೊರತು ಬೇರೆ ಅಲ್ಲ ಎಂದು ಅಬ್ದುಲ್ ಮಜೀದ್ ತಿಳಿಸಿದರು.

ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ,  ಎಸ್ಡಿಪಿಐ ಜನಾಧಿಕಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ, ರಾಜ್ಯದಲ್ಲಿ ಹತ್ಯಾಕಾಂಡಕ್ಕೆ ಬಹಿರಂಗವಾಗಿ ಕರೆ ನೀಡುವ ಬಿಜೆಪಿಯ ಈಶ್ವರಪ್ಪನಂತಹ ನಾಯಕರಿಂದ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಹೇಳಿಕೆ ನೀಡುವ ರಾಜ್ಯದ ಮುಖ್ಯಮಂತ್ರಿ ನೇತೃತ್ವದ ಸರಕಾರದಿಂದ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹಿಂದೂ ಮುಸ್ಲಿಂ ಸಂಘರ್ಷ ಹೆಚ್ಚುತ್ತಿದೆ. ವೈಷಮ್ಯದ ರಾಜಕಾರಣಕ್ಕೆ ಸಂಚು ನಡೆಸುವವರಿಗೆ ಪರೋಕ್ಷವಾಗಿ ಬೆಂಬಲ ನೀಡಲಾಗುತ್ತಿದೆ. ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲು ದ್ವೇಷದ, ಕೋಮುವಾದದ  ರಾಜಕಾರಣ, ಶೇ.40 ಭ್ರಷ್ಟಾಚಾರದಲ್ಲಿ ತೊಡಗಿದ ಬಿಜೆಪಿಯ ಈ ನೀತಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಂಪೂರ್ಣ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಎಸ್ಡಿಪಿಐ  ಪರ್ಯಾಯ ರಾಜಕೀಯ ಶಕ್ತಿಯಾಗಿ ಮೂಡಿ ಬರುತ್ತಿದೆ ಎಂದು ಇಲ್ಯಾಸ್ ತುಂಬೆ ಹೇಳಿದರು.

ಮುಖ್ಯ ಅತಿಥಿಗಳಾಗಿ ಅಶ್ರಫ್ ಮೌಲವಿ ಮುವಾಟ್ಟುಪುರ (ರಾಜ್ಯಾಧ್ಯಕ್ಷರು: ಎಸ್‌ಡಿಪಿಐ ಕೇರಳ) ರಿಯಾಝ್ ಫರಂಗಿಪೇಟೆ (ರಾಷ್ಟ್ರೀಯ ಕಾರ್ಯದರ್ಶಿ, ಎಸ್‌ಡಿಪಿಐ) ಅಲ್ಫಾನೋ ಫ್ರಾಂಕೋ (ರಾಷ್ಟ್ರೀಯ ಕಾರ್ಯದರ್ಶಿ, ಎಸ್‌ಡಿಪಿಐ) ದೇವನೂರು ಪುಟ್ನಂಜಯ್ಯಾ (ರಾಜ್ಯ ಉಪಾಧ್ಯಕ್ಷರು, ಎಸ್‌ಡಿಪಿಐ, ಕರ್ನಾಟಕ) ಬಿ.ಆರ್‌ ಭಾಸ್ಕರ್‌ ಪ್ರಸಾದ್ (ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ) ಅಬ್ದುಲ್ ಲತೀಫ್ ಪುತ್ತೂರು (ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ) ಆಫ್ಸರ್‌ ಕೊಡ್ಲಿಪೇಟೆ (ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ) ಆಯಿಶಾ ಬಜಪೆ(ರಾಷ್ಟ್ರೀಯ ಕಾರ್ಯದರ್ಶಿ, ವಿಮೆನ್ ಇಂಡಿಯಾ ಮೂವ್‌ಮೆಂಟ್) ಶಾಹಿದಾ ತಸ್ವೀಮ್ (ರಾಜ್ಯಾಧ್ಯಕ್ಷೆ, ವಿಮೆನ್ ಇಂಡಿಯಾ ಮೂವ್‌ಮೆಂಟ್, ಕರ್ನಾಟಕ) ಫರ್ಝಾನಾ ಮುಹಮ್ಮದ್ (ರಾಜ್ಯಾಧ್ಯಕ್ಷ, ನ್ಯಾಷನಲ್ ವಿಮೆನ್ ಫ್ರೆಂಟ್, ಕರ್ನಾಟಕ) ಅಥಾವುಲ್ಲಾ ಪೂಂಜಾಲಕಟ್ಟೆ (ರಾಜ್ಯಾಧ್ಯಕ್ಷರು, ಕ್ಯಾಂಪಸ್ ಫ್ರಂಟ್, ಕನಾಟಕ) ಮಜೀದ್ ತುಂಬೆ (ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್‌ಡಿಪಿಐ ಕರ್ನಾಟಕ) ಅಶ್ರಫ್ ಮಾಚಾರ್ (ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ) ಆನಂದ ಮಿತ್ತಬೈಲ್ (ರಾಜ್ಯ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ)‌, ಶಾಫಿ ಬೆಳ್ಳಾರೆ (ರಾಜ್ಯ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ) ಅಬ್ದುಲ್ ಮಜೀದ್ ಖಾನ್ (ರಾಜ್ಯ ಸಮಿತಿ ಸದಸ್ಯರು ಎಸ್‌ಡಿಪಿಐ ಕರ್ನಾಟಕ) ಝೀನತ್‌ ಬಂಟ್ವಾಳ (ರಾಜ್ಯ ಸಮಿತಿ ಎಸ್‌ಡಿಪಿಐ ಕರ್ನಾಟಕ) ಜಲೀಲ್ ಕೆ. (ರಾಜ್ಯ ಸಮಿತಿ ಸದಸ್ಯರು ಎಸ್‌ಡಿಪಿಐ ಕರ್ನಾಟಕ) ಅಕ್ಬರ್‌ ಅಲಿ  (ರಾಜ್ಯ ಸಮಿತಿ ಸದಸ್ಯರು ಎಸ್‌ಡಿಪಿಐ ಕರ್ನಾಟಕ) ರಿಯಾಝ್ ಕಡಂಬು (ರಾಜ್ಯ ಸಮಿತಿ ಸದಸ್ಯರು ಎಸ್‌ಡಿಪಿಐ ಕರ್ನಾಟಕ) ಅಬೂಬಕ್ಕರ್‌ ಕುಳಾಯಿ (ಜಿಲ್ಲಾಧ್ಯಕ್ಷರು, ಎಸ್‌ಡಿಪಿಐ ದಕ್ಷಿಣ ಕನ್ನಡ) ನಝೀರ್ ಅಹಮದ್ (ಜಿಲ್ಲಾಧ್ಯಕ್ಷರು ಎಸ್‌ಡಿಪಿಐ ಉಡುಪಿ) ತೌಫೀಕ್ ಬ್ಯಾರಿ (ಜಿಲ್ಲಾದ್ಯಕ್ಷರು, ಎಸ್‌ಡಿಪಿಐ ಉತ್ತರ ಕನ್ನಡ) ಗೌಸ್ ಮುನೀರ್ (ಜಿಲ್ಲಾಧ್ಯಕ್ಷರು, ಎಸ್‌ಡಿಪಿಐ ಚಿಕ್ಕ ಮಗಳೂರು) ಸಲೀಂ ಸಕಲೇಶಪುರ (ಜಿಲ್ಲಾಧ್ಯಕ್ಷರು, ಎಸ್‌ಡಿಪಿಐ ಹಾಸನ ಗ್ರಾಮಾಂತರ) ನಸ್ರೀಯಾ ಬೆಳ್ಳಾರೆ (ಜಿಲ್ಲಾಧ್ಯಕ್ಷೆ, ವಿಮೆನ್ ಇಂಡಿಯಾ ಮೂವೆಂಟ್ ದಕ್ಷಿಣ ಕನ್ನಡ) ಮಿಶ್ರಿಯಾ ಕಣ್ಣೂರು (ಜಿಲ್ಲಾ ಉಪಾಧ್ಯಕ್ಷೆ, ಎಸ್‌ಡಿಪಿಐ ದಕ್ಷಿಣ ಕನ್ನಡ) ವಿಕ್ಟರ್ ಮಾರ್ಟಿಸ್ ( ಜಿಲ್ಲಾ ಉಪಾಧ್ಯಕ್ಷರು, ಎಸ್‌ಡಿಪಿಐ ದಕ್ಷಿಣ ಕನ್ನಡ) ಸಂಶಾದ್ ಅಬೂಬಕ್ಕರ್ (ಮ.ನ.ಪಾ ಸದಸ್ಯರು) ಮುನೀಬ್ ಬೆಂಗರೆ (ಮ.ನ.ಪಾ ಸದಸ್ಯರು) ಮಹಮ್ಮದ್ ಪಕ್ಯಾರ್ (ಜಿಲ್ಲಾಧ್ಯಕ್ಷರು, ಕಾಸರಗೋಡು) ಪೌಝಿಯಾ (ಅಧ್ಯಕ್ಷರು, ಸಜಿಪ ಗ್ರಾಮ ಪಂಚಾಯತ್) ಇಸ್ಮಾಯಿಲ್ (ಅಧ್ಯಕ್ಷರು ಮಳ್ಳೂರು ಗ್ರಾಮ ಪಂಚಾಯತ್) ಪೌಸ್ಪಿನ್‌ ಡಿ ಸೋಜ  (ಸಜಿಪ ಮುನ್ನೂರು ಗ್ರಾಮ ಪಂಚಾಯತ್) ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಸ್ವಾಗತಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X