Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಪ್ರತಿಭಟನೆ ನಡೆಸಿದ್ದು ಹಿಜಾಬ್...

ಪ್ರತಿಭಟನೆ ನಡೆಸಿದ್ದು ಹಿಜಾಬ್ ವಿಷಯದಲ್ಲಿ ಅಲ್ಲ, ವಿನ್ಯಾಸ್ ವಿರುದ್ಧ: ಮಂಗಳೂರು ವಿವಿ ಪ್ರಾಂಶುಪಾಲೆ ಡಾ. ಅನಸೂಯ ರೈ

ವಾರ್ತಾಭಾರತಿವಾರ್ತಾಭಾರತಿ27 May 2022 8:48 PM IST
share
ಪ್ರತಿಭಟನೆ ನಡೆಸಿದ್ದು ಹಿಜಾಬ್ ವಿಷಯದಲ್ಲಿ ಅಲ್ಲ, ವಿನ್ಯಾಸ್ ವಿರುದ್ಧ: ಮಂಗಳೂರು ವಿವಿ ಪ್ರಾಂಶುಪಾಲೆ ಡಾ. ಅನಸೂಯ ರೈ

ಮಂಗಳೂರು : ಚುನಾವಣೆ ಮೂಲಕ ಆಯ್ಕೆಯಾದ ಕಾಲೇಜು ನಾಯಕನ ಬದಲಾವಣೆಗೆ ಕೋರಿ ನಿನ್ನೆ ಮಂಗಳೂರು ವಿವಿ ಕಾಲೇಜಿನಲ್ಲಿ  ಪ್ರತಿಭಟನೆ ನಡೆದಿದ್ದೇ ಹೊರತು ಹಿಜಾಬ್ ಪ್ರಮುಖ ಕಾರಣವಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ಅನುಸೂಯ ರೈ ತಿಳಿಸಿದ್ದಾರೆ.

‘‘ನಿನ್ನೆಯಿಂದ ಕಾಲೇಜಿನಲ್ಲಿ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ೧೫೪ ವರ್ಷ ಇತಿಹಾಸ ಇರುವ ಕಾಲೇಜಿನಲ್ಲಿ ೨೦೧೭ರಿಂದ ವಸ್ತ್ರ ಸಂಹಿತೆಯನ್ನು ಪಾಲಿಸಲಾಗುತ್ತಿದೆ. ಹಿಂದೆ ಬಣ್ಣದ ಶಿರವಸ್ತ್ರ ಧರಿಸುತ್ತಿದ್ದ ಕಾರಣ ಆಗಿನ ಪ್ರಾಂಶುಪಾಲರು ಶಿರವಸ್ತ್ರ ಧರಿಸುವವರು ತಮ್ಮ ಯೂನಿಫಾರಂನ ಬಣ್ಣದ ಶಿರವಸ್ತ್ರ ಧರಿಸಲು ಅವಕಾಶ ಕಲ್ಪಿಸಿದ್ದರು. ಅದರಂತೆ ಕೈಪಿಡಿಯಲ್ಲಿಯೂ ಆ ಬಗ್ಗೆ ಲಿಖಿತವಾಗಿ ತಿಳಿಸಲಾಗುತ್ತಿತ್ತು. ಈ ವರ್ಷದ ಆರಂಭದಲ್ಲಿಯೂ ಹಿಜಾಬ್ ಗೊಂದಲ ಇಲ್ಲದಿದ್ದಾಗ ಇದೇ ರೀತಿ ಕೈಪಿಡಿಯಲ್ಲಿ ಮುದ್ರಣಗೊಂಡಿತ್ತು. ೧೬೦೦ ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಹಿಜಾಬ್‌ಧಾರಿಗಳಾಗಿ ಕಾಲೇಜಿಗೆ ಬರುತ್ತಿದ್ದರು. ಮಾರ್ಚ್‌ನಲ್ಲಿ ಯೂನಿಯನ್ ಚುನಾವಣೆ ಬಳಿಕ ಮೇ 10ರಂದು ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಮನವಿ ಸಲ್ಲಿಸಿ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬಾರದು ಎಂದು ಕೋರಿದ್ದರು. ಆಗ ಪರೀಕ್ಷೆ ನಡೆಯುತ್ತಿತ್ತು. ಹಾಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ಕೋರಿದಾಗ ಅದಕ್ಕೆ ಒಪ್ಪಿಕೊಂಡಿದ್ದರು. ನಾನು ಆ ಮನವಿಯನ್ನು ವಿವಿಗೆ ಕಳುಹಿಸಿದ್ದೆ. ಮೇ ೧೬ರಂದು ಸಿಂಡಿಕೇಟ್ ಸಭೆಯಲ್ಲಿ ಈ ಸಮಸ್ಯೆಯನ್ನು ಅಜೆಂಡವಾಗಿರಿಸಿ ನಿರ್ಣಯ ತೆಗೆದುಕೊಳ್ಳುವಾದಾಗಿ ಹೇಳಿದ್ದರು. ಮೇ ೧೨ಕ್ಕೆ ಕಾಲೇಜು ಆರಂಭವಾಗಿದ್ದರು ೧೬ರವರೆಗೆ ಆನ್‌ಲೈನ್ ತರಗತಿ ಮಾಡಿ ಮೇ ೧೭ರಿಂದ ಆಫ್‌ಲೈನ್ ತರಗತಿ ಆರಂಭಿಸಿದ್ದೆವು. ಶಿರವಸ್ತ್ರದ ಬಗ್ಗೆ ನಾನು ಲಿಖಿತ ಸುತ್ತೋಲೆಯನ್ನು ನೀಡಿದ್ದೆ. ವಾಟ್ಸಾಪ್ ಸಂದೇಶವನ್ನು ನೀಡಿ ನಾಳೆಯಿಂದ ತರಗತಿಗೆ ಬರುವಾಗ ಶಿರವಸ್ತ್ರ ಧರಿಸಬಾರದೆಂದು ತಿಳಿಸಿದ್ದೆ. ಅದನ್ನು ಅನುಸರಿಸಲಾಗುತ್ತಿತ್ತು’’ ಎಂದು ಕಾಲೇಜಿನಲ್ಲಿ ನಡೆದ ಘಟನೆಯ ಕುರಿತಂತೆ ಡಾ. ಅನಸೂಯ ರೈ ವಿವರ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಮತ್ತೆ ವಿದ್ಯಾರ್ಥಿ ಪ್ರತಿನಿಧಿಗಳು ಬಂದು ಕ್ಯಾಂಪಸ್‌ನಲ್ಲಿಯೂ ಶಿರವಸ್ತ್ರ ಧರಿಸಲು ಅವಕಾಶ ನೀಡಬಾರದೆಂದು ಮನವಿ ಮಾಡಿದ್ದರು. ಈ ಬಗ್ಗೆ ನಾನು ವೈಯಕ್ತಿಕವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲದ ಕಾರಣ, ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿ ಎಚ್‌ಒಡಿ(೨೪ ವಿವಿಧ ವಿಭಾಗಗಳ ಮುಖ್ಯಸ್ಥರು)  ಸಭೆ ಕರೆಯಲಾಯಿತು. ಅಲ್ಲಿ ಬಹುತೇಕ ವಿಭಾಗಗಳ ಮುಖ್ಯಸ್ಥರು,ಕ್ಯಾಂಪಸ್‌ಗೆ ಬಂದ ಮೇಲೆ ಮಹಿಳಾ ಕೊಠಡಿಗೆ ತೆರಳಿ ಅಲ್ಲಿ ಶಿರವಸ್ತ್ರ ತೆಗೆದು ಬಳಿಕ ಕಾಲೇಜಿನಿಂದ ಮನೆಗೆ ಹೋಗುವ ವೇಳೆ ಧರಿಸಲು ಅವಕಾಶ ನೀಡಬೇಕೆಂದು ತಿಳಿಸಿದರು. ಅದರಂತೆ ವಿದ್ಯಾರ್ಥಿ ಸಭೆ ನಡೆದಾಗ ಮೇ ೨೬ರಿಂದ ಯಾರೂ ಕ್ಯಾಂಪಸ್‌ನಲ್ಲಿಯೂ ಶಿರವಸ್ತ್ರ ಧರಿಸುವಂತಿಲ್ಲ ವಿಷಯ ತಿಳಿಸಲಾಯಿತು. ಮೇ ೨೬ರಂದು ಕಾಲೇಜಿನಲ್ಲಿ ರೌಂಡ್ಸ್ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗಳು ಈ ಬಗ್ಗೆ ಮೌಖಿಕ ಆದೇಶಕ್ಕಿಂತ ಲಿಖಿತ ಆದೇಶ ನೀಡುವಂತೆ ಕೋರಿದ್ದರು. ಈ ನಡುವೆ ಲಿಖಿತ ಆದೇಶ ನೀಡುವ ನಡುವೆ ಕೆಲವು ವಿದ್ಯಾರ್ಥಿಗಳು ಶಿರವಸ್ತ್ರ ಧರಿಸಿ ಕ್ಯಾಂಪಸ್‌ನಲ್ಲಿದ್ದರು. ಅವರಿಗೆ ಈ ವಿಷಯ ಮನವರಿಕೆ ಮಾಡಲು ಮುಂದಾಗುವ ಸಂದರ್ಭದಲ್ಲೇ ಈ ನಡುವೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ನನಗೆ ಪ್ರತಿಭಟನೆಯ ಯಾವುದೇ ಮಾಹಿತಿ ಇರಲಿಲ್ಲ. ನಿನ್ನೆ ಅವರು ನನಗೆ ಮನವಿ ನೀಡಿದ್ದು, ಶಿರವಸ್ತ್ರದ ಕುರಿತಾಗಿ ಅಲ್ಲ. ಬದಲಾಗಿ ನಮ್ಮ ಸಂಘದ ನಾಯಕನನ್ನು ಬದಲಾವಣೆ ಮಾಡಬೇಕೆಂದು ಪ್ರತಿಭಟಿಸಿದ್ದರು. ಇದೊಂದು ವಿಶೇಷ ಪ್ರಕರಣ ಆದ ಕಾರಣ ಈ ಬಗ್ಗೆ ನಾನು ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಈ ನಡುವೆ ರಿಜಿಸ್ಟ್ರಾರ್ ಆಗಮಿಸಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದಾರೆ. ಇಂದು ಪರಿಸ್ಥಿತಿ ಶಾಂತವಾಗಿದೆ.  ಶಿರವಸ್ತ್ರವಿಲ್ಲದೆ ಬರುವುದಿಲ್ಲ ಎನ್ನುವ ಸುಮಾರು ೧೫ ಮಂದಿ  ವಿದ್ಯಾರ್ಥಿನಿಯರನ್ನು ಬಿಟ್ಟರೆ ಎಲ್ಲರೂ ಇಂದು ತರಗತಿಗೆ ಹಾಜರಾಗುತ್ತಿದ್ದಾರೆ. ಕಾಲೇಜು ಹಾಗೂ ತರಗತಿಯೊಳಗೆ ಶಿರವಸ್ತ್ರ ಧಾರಣೆಗೆ ಅವಕಾಶವಿಲ್ಲ ಎಂಬ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ವಿದ್ಯಾರ್ಥಿ ನಾಯಕನನ್ನು ಬದಲಾಯಿಸಬೇಕೆಂಬ ಮನವಿ ಬಗ್ಗೆ ಸಭೆ ನಡೆದು ನಿರ್ಧಾರ ಮಾಡಲಾಗುತ್ತದೆ. ವಿದ್ಯಾರ್ಥಿ ನಾಯಕನ ನೇಮಕ ಮಾಡಿರುವುದಲ್ಲ. ಚುನಾವಣೆಯ ಮೂಲಕ ಗೆದ್ದಿರುವುದರಿಂದ ಹಾಗೆ ಬದಲಾವಣೆ ಸಾಧ್ಯವಾಗುವುದಿಲ್ಲ’’ ಎಂದು ಅವರು ವಿವರಿಸಿದ್ದಾರೆ.

"ವಿದ್ಯಾರ್ಥಿ ಸಂಘದಲ್ಲಿ ಗೊಂದಲ ಉಂಟಾಗಿದೆ. ಯೂನಿಯನ್ ಸಭೆಯಲ್ಲಿ ನಾನು ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ತಿಳಿಸಿದ್ದೆ. ನಮ್ಮ ಕಾಲೇಜಿನಲ್ಲಿ ಹಿಜಾಬ್ ಧಾರಣೆ ಬಗ್ಗೆ ನನಗೂ ವಿರೋಧವಿದೆ. ಅದರ ಮಧ್ಯದಲ್ಲಿ ಯೂನಿಯನ್ ಸಭೆಯಲ್ಲಿ ನಿರ್ಧರಿಸುವುದಾಗಿ ಹೇಳಿದ್ದರು. ಈ ನಡುವೆ ನಮ್ಮ ವಿದ್ಯಾರ್ಥಿಗಳು ಶಾಲು ಧರಿಸುವ ಕಾರ್ಯ ಮಾಡಿದ್ದರಿಂದ ನನಗೆ ಬೇಸರವಾಗಿತ್ತು. ನಮ್ಮ ಕಾಲೇಜು ೧೫೦ ವರ್ಷಗಳ ಇತಿಹಾಸವಿದೆ. ವಿದ್ಯಾರ್ಥಿಗಳ ಶಿಕ್ಷಣ ಅತೀ ಅಗತ್ಯ. ನಾನೂ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿಯಾಗಿರುವುದರಿಂದ ಮೂರೂವರೆ ವರ್ಷದಿಂದ ನಾವು ಕಲಿತು ಇದೀಗ ಪ್ರತಿಭಟನೆಯಿಂದ ತೊಂದರೆ ಆದರೆ ನಮ್ಮ ಉದ್ಯೋಗದ ವಿಷಯದಲ್ಲಿ ಗೊಂದಲವಾಗಬಹುದು.  ನಾನು ಎಲ್ಲಾ ವಿದ್ಯಾರ್ಥಿಗಳ ಪರವಾಗಿದ್ದೇನೆ ಎಂದು  ಸಭೆಯಲ್ಲಿ ಹೇಳಿದ್ದೇನೆ. ಪ್ರತಿಭಟನೆ ನಿನ್ನೆ ನನ್ನ ವಿರುದ್ಧವೇ ಆಗಿದ್ದರಿಂದ ನಾನು ಬಂದಿರಲಿಲ್ಲ. ನಾನು ಹಿಜಾಬ್ ವಿಷಯದಲ್ಲಿ ಮೃದುಧೋರಣೆ ಹೊಂದಿದ್ದೇನೆಂಬ ಭಾವನೆ ಕೆಲ ವಿದ್ಯಾರ್ಥಿಗಳಿತ್ತು. ಆದರೆ ನಾನು ಆ ವಿಷಯದಲ್ಲಿ ಖಂಡನೀಯವಾಗಿದ್ದೆ. ನಾನು ವಿದ್ಯಾರ್ಥಿಗಳ ಪರವಾಗಿ ನನ್ನ ವೈಯಕ್ತಿಕ ಭಾವನೆಯನ್ನು ವ್ಯಕ್ತಪಡಿಸಿದ್ದೇನೆಯೇ ಹೊರತು ಬೇರೆ ಯಾವುದೇ ಉದ್ದೇಶದಿಂದ ಅಲ್ಲ. ಹಾಗಾಗಿ ಬೇರೆಯವರಿಗೆ ಬೇಸರವಾಗಿದೆ ಎಂಬ ಕಾರಣಕ್ಕೆ ನಾನು ರಾಜೀನಾಮೆ ನೀಡಲು ಮುಂದಾಗಿದ್ದೇನೆ. ನನಗೆ ರಾಜೀನಾಮೆಗೆ ಬೆದರಿಕೆ ಬಂದಿಲ್ಲ.
*ವಿನ್ಯಾಸ್, ವಿದ್ಯಾರ್ಥಿ ಸಂಘದ ನಾಯಕ,
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X