ಭಾರತೀಯ ಶಾಂತಿಪಾಲಕರಿಗೆ ವಿಶ್ವಸಂಸ್ಥೆ ಅಧಿಕಾರಿ ಶ್ಲಾಘನೆ
ವಿಶ್ವಸಂಸ್ಥೆ, ಮೇ 27: ಕಾಂಗೋದಲ್ಲಿ ಸಶಸ್ತ್ರಧಾರಿ ಗುಂಪಿನ ದಾಳಿಯನ್ನು ಹಿಮ್ಮೆಟ್ಟಿಸಿದ ಭಾರತೀಯ ಶಾಂತಿಪಾಲಕರನ್ನು ಹಾಗೂ ಬ್ಲೂಹೆಲ್ಮೆಟ್ (ಇತರ ದೇಶಗಳ ಯೋಧರನ್ನು ಒಳಗೊಂಡ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ) ಸದಸ್ಯರನ್ನು ವಿಶ್ವಸಂಸ್ಥೆಯ ಉನ್ನತ ಅಧಿಕಾರಿ ಶ್ಲಾಘಿಸಿದ್ದಾರೆ.
ಕಾಂಗೊ ಗಣರಾಜ್ಯದಲ್ಲಿ ನಿಯೋಜನೆಗೊಂಡಿರುವ ವಿಶ್ವಸಂಸ್ಥೆ ಶಾಂತಿಪಾಲನಾ ತಂಡದಲ್ಲಿ ಭಾರತದ 1,888 ಯೋಧರು ಹಾಗೂ 139 ಪೊಲೀಸ್ ಸಿಬಂದಿಗಳಿದ್ದಾರೆ. ಮೇ 22ರಂದು ಶಾಂತಿಪಾಲನಾ ಪಡೆ ಹಾಗೂ ಕಾಂಗೊ ಪಡೆಯ ಮೇಲೆ ಎಂ23 ಉಗ್ರ ಸಂಘಟನೆ ನಡೆಸಿದ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ. ದಾಳಿಯನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿ ಬಲವಾಗಿ ಖಂಡಿಸಿದೆ.
ಭಾರತದ ಶಾಂತಿಪಾಲಕರು ಹಾಗೂ ಇತರ ಹಲವು ದೇಶಗಳ ಯೋಧರು ಎಂ23 ಉಗ್ರರ ದಾಳಿಯನ್ನು ಹಿಮ್ಮೆಟ್ಟಿಸಿದ್ದು ಇದಕ್ಕಾಗಿ ಅವರನ್ನು ಶ್ಲಾಘಿಸುತ್ತೇವೆ ಎಂದು ವಿಶ್ವಸಂಸ್ಥೆಯ ಶಾಂತಿಪಡೆ ಕಾರ್ಯಾಚರಣೆಯ ಅಧೀನ ಪ್ರಧಾನ ಕಾರ್ಯದರ್ಶಿ ಜೀನ್ ಪಿಯರೆ ಲಕ್ರೋಯಿಕ್ಸ್ ಪ್ರತಿಕ್ರಿಯಿಸಿದ್ದಾರೆ.
Next Story