ಉ.ಕೊರಿಯಾದ ವಿರುದ್ಧದ ನಿರ್ಣಯವನ್ನು ವಿಟೊ ಬಳಸಿ ತಡೆದ ರಶ್ಯ, ಚೀನಾ
ವಿಶ್ವಸಂಸ್ಥೆ, ಮೇ 27: ದೀರ್ಘದೂರ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಸಹಿತ ಒಂದೇ ದಿನ 3 ಕ್ಷಿಪಣಿಯನ್ನು ಪರೀಕ್ಷೆ ನಡೆಸುವ ಮೂಲಕ ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಒಡ್ಡಿರುವ ಉತ್ತರ ಕೊರಿಯಾದ ಮೇಲೆ ಇನ್ನಷ್ಟು ಕಠಿಣ ನಿರ್ಬಂಧ ಜಾರಿಗೊಳಿಸುವ ನಿರ್ಣಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ರಶ್ಯ ಮತ್ತು ಚೀನಾ ವಿಟೊ ಅಧಿಕಾರ ಬಳಸಿ ತಡೆಯೊಡ್ಡಿದೆ ಎಂದು ವರದಿಯಾಗಿದೆ.
ಅಮೆರಿಕ ಅಧ್ಯಕ್ಷ ಬೈಡನ್ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ಸಂದರ್ಭ ಉತ್ತರ ಕೊರಿಯಾ ಈ ಪರೀಕ್ಷೆ ನಡೆಸಿತ್ತು. ಇದನ್ನು ಖಂಡಿಸಿದ್ದ ಅಮೆರಿಕ, ಆ ದೇಶದ ವಿರುದ್ಧ ಇನ್ನಷ್ಟು ಕಠಿಣ ಕ್ರಮಕ್ಕೆ ಆಗ್ರಹಿಸಿ ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡಿಸಿತ್ತು. ಇದಕ್ಕೆ 13 ಸದಸ್ಯರ ಬೆಂಬಲ ದೊರೆತರೂ, ರಶ್ಯ ಮತ್ತು ಚೀನಾ ತಮ್ಮ ವಿಟೊ ಅಧಿಕಾರ ಪ್ರಯೋಗಿಸಿ ನಿರ್ಣಯವನ್ನು ತಡೆದರು. ಇದು ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಅತ್ಯಂತ ಬೇಸರದ ದಿನವಾಗಿದೆ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್ ಗ್ರೀನ್ಫೀಲ್ಡ್ ಪ್ರತಿಕ್ರಿಯಿಸಿದ್ದಾರೆ.
Next Story