ಈ ಬಾರಿ ಮಾಡಿದಷ್ಟು ತಪ್ಪನ್ನು ಇಡೀ ವೃತ್ತಿಜೀವನದಲ್ಲಿ ಮಾಡಿರಲಿಕ್ಕಿಲ್ಲ: ಕೊಹ್ಲಿ ಕುರಿತು ಸೆಹ್ವಾಗ್ ಪ್ರತಿಕ್ರಿಯೆ

ಅಹಮದಾಬಾದ್: ಶುಕ್ರವಾರ ನಡೆದ ಕ್ವಾಲಿಫೈಯರ್ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತು ಟೂರ್ನಿಯಿಂದ ಹೊರಬಿದ್ದಿದೆ. ಆ ಮೂಲಕ ಆರ್‌ಸಿಬಿ ಮತ್ತು ಅಭಿಮಾನಿಗಳ 15 ವರ್ಷಗಳ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ.
ಭಾರತ ತಂಡದ ಮಾಜಿ ಆಟಗಾರರಾದ ವಿರೇಂದ್ರ ಸೆಹವಾಗ್ ಮತ್ತು ಪಾರ್ಥಿವ್ ಪಟೇಲ್ ಚರ್ಚಿಸಿದ್ದು, ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನದ ಬಗ್ಗೆ ಸೆಹ್ವಾಗ್ ತಮ್ಮ ಅನುಭವದ ಆಧಾರದ ಮೇಲೆ ಪ್ರತಿಕ್ರಿಯಿಸಿದ್ದಾರೆ.
ಕೊಹ್ಲಿಯ ಹಿಂದಿನ ಕೆರಿಯರ್‌ಗಳಿಗೆ ಹೋಲಿಸಿದರೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸುಮಾರು ತಪ್ಪು ಮಾಡಿದ್ದಾರೆ ಎಂದು ಸೆಹ್ವಾಗ್ ಅಭಿಪ್ರಾಯಿಸಿದ್ದಾರೆ.
"ನೀವು ಫಾರ್ಮ್‌ನಿಂದ ಹೊರಗಿರುವಾಗ, ನಿಮ್ಮ ಆತ್ಮವಿಶ್ವಾಸವನ್ನು ಪಡೆಯಲು ಪ್ರತಿ ಬಾಲ್‌ಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದೀರಿ. ಮೊದಲ ಓವರ್‌ನಲ್ಲಿ ಅವರು (ಕೊಹ್ಲಿ) ಕೆಲವು ಎಸೆತಗಳನ್ನು ಬಿಟ್ಟುಕೊಟ್ಟರು, ಫಾರ್ಮ್‌ನಲ್ಲಿ ಇಲ್ಲದಿದ್ದಾಗ ಬಾಲ್ ಅನ್ನು ನೀವು ಬೆನ್ನಟ್ಟಿ ಹೋಗುತ್ತೀರಿ, ಕೆಲವೊಮ್ಮೆ ಅದೃಷ್ಟ ನಿಮಗೆ ಒಲಿಯುತ್ತದೆ, ಕೆಲವೊಮ್ಮೆ ಒಲಿಯುವುದಿಲ್ಲ. ಇದು ನಮಗೆ ತಿಳಿದಿರುವ ವಿರಾಟ್ ಕೊಹ್ಲಿ ಅಲ್ಲ, ಈ ಸೀಸನ್‌ನಲ್ಲಿ ಬೇರೆ ವಿರಾಟ್ ಕೊಹ್ಲಿಯನ್ನು ನೋಡುತ್ತಿದ್ದೇವೆ," ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.
"ಈ ಸೀಸನ್‌ನಲ್ಲಿ ಅವರು ಮಾಡಿದಷ್ಟು ತಪ್ಪುಗಳನ್ನು ಬಹುಶಃ ಅವರ ಇಡೀ ವೃತ್ತಿಜೀವನದಲ್ಲಿ ಮಾಡಿಲ್ಲ. ಈ ಬಾರಿ ವಿರಾಟ್ ಕೊಹ್ಲಿ ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಔಟ್ ಮಾಡಲಾಗಿದೆ. ಅವರು ತಮ್ಮ ಅಭಿಮಾನಿಗಳು ಮತ್ತು RCB ಅಭಿಮಾನಿಗಳನ್ನು ನಿರಾಶೆಗೊಳಿಸಿದರು” ಎಂದು ಕೊಹ್ಲಿಯ ಬಗ್ಗೆ ಸೆಹ್ವಾಗ್ ನುಡಿದಿದ್ದಾರೆ.