ಟೆಕ್ಸಾಸ್ ಗುಂಡಿನ ದಾಳಿಗೆ ಬಂದೂಕನ್ನು ದೂಷಿಸುವಂತಿಲ್ಲ: ರಾಷ್ಟ್ರೀಯ ರೈಫಲ್ಸ್ ಸಂಘದ ಹೇಳಿಕೆ
ವಾಷಿಂಗ್ಟನ್, ಮೇ 28: ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಿಂದ ತೀವ್ರ ಆಘಾತವಾಗಿದೆ. ಆದರೆ ಇದಕ್ಕೆ ಬಂದೂಕನ್ನು ದೂಷಿಸುವಂತಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ರೈಫಲ್ಸ್ ಸಂಘದ ಬೆಂಬಲಿಗರು ಪ್ರತಿಪಾದಿಸಿದ್ದಾರೆ.
ಈ ದೇಶದಲ್ಲಿ ಈ ಹಿಂದಿನಿಂದಲೂ ಬಂದೂಕುಗಳಿದ್ದವು. ಬಂದೂಕುಗಳಿಂದ ಯಾವುದೇ ಸಮಸ್ಯೆಯಿಲ್ಲ. ಹತ್ಯೆ ಮಾಡುವವರಿಗೆ ನ್ಯಾಯಾಧೀಶರ ಭಯ ಇರುವುದಿಲ್ಲ, ಪೊಲೀಸರ ಭಯವೂ ಇರುವುದಿಲ್ಲ. ಅವರಿಗೆ ತಾವು ಹತ್ಯೆ ಮಾಡಲು ಹೊರಟವರ ಬಗ್ಗೆ ಭಯ ಹುಟ್ಟುವಂತೆ ಮಾಡಬೇಕು. ಟೆಕ್ಸಾಸ್ ಶಾಲೆಯಲ್ಲಿ ನಡೆದ ಘಟನೆಯನ್ನೇ ನೋಡಿ. ಒಂದು ವೇಳೆ ಶಾಲೆಯಲ್ಲಿ ಇದ್ದವರ ಕೈಯಲ್ಲೂ ಬಂದೂಕುಗಳು ಇದ್ದರೆ ಆಗ ಪರಿಸ್ಥಿತಿಯೇ ಬೇರೆ ಆಗುತ್ತಿತ್ತು ಎಂದು ಸಂಘದ ಸದಸ್ಯ ಜೆಹ್ಲೆನ್ ಎಂಬಾತ ಹೇಳಿದ್ದಾನೆ.
ಟೆಕ್ಸಾಸ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣ ನಡೆದ ಕೆಲವೇ ಗಂಟೆಗಳ ಮೊದಲು, ಟೆಕ್ಸಾಸ್ನ ಬಳಿಯ ನಗರದಲ್ಲಿ ನಡೆದ ರಾಷ್ಟ್ರೀಯ ರೈಫಲ್ಸ್ ಸಂಘದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟೆಕ್ಸಾಸ್ ಶಾಲೆಯಲ್ಲಿ ನಡೆದ ದಾಳಿಯನ್ನು ಖಂಡಿಸಿದರು ಹಾಗೂ ಇಂತಹ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜಕೀಯ ಬದಿಗಿರಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಜತೆಗೆ, ಕಾನೂನನ್ನು ಗೌರವಿಸುವ ರೈಫಲ್ಸ್ ಅಸೋಸಿಯೇಷನ್ನ ಸದಸ್ಯರನ್ನು ಖಳನಾಯಕರ ರೀತಿಯಲ್ಲಿ ಚಿತ್ರಿಸುತ್ತಿರುವ ಡೆಮೊಕ್ರಾಟ್ ಪಕ್ಷದವರನ್ನು ಹಿಮ್ಮೆಟ್ಟಿಸುವಂತೆ ಕರೆ ನೀಡಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಜರ್ಮನಿ, ಫ್ರಾನ್ಸ್ಗೆ ಪುಟಿನ್ ಎಚ್ಚರಿಕೆ ಮಾಸ್ಕೊ, ಮೇ 28: ಉಕ್ರೇನ್ಗೆ ಇನ್ನಷ್ಟು ಶಸ್ತ್ರಾಸ್ತ್ರ ಒದಗಿಸಬಾರದು ಎಂದು ಜರ್ಮನಿ ಮತ್ತು ಫ್ರಾನ್ಸ್ಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದು ಶಸ್ತ್ರಾಸ್ತ್ರ ಒದಗಿಸಿದರೆ ಉಕ್ರೇನ್ನಲ್ಲಿನ ಪರಿಸ್ಥಿತಿ ಮತ್ತಷ್ಟು ಅಸ್ಥಿರವಾಗಬಹುದು ಎಂದಿದ್ದಾರೆ. ಉಕ್ರೇನ್ಗೆ ಶಸ್ತ್ರಾಸ್ತ್ರ ರವಾನಿಸುವುದು ಅಪಾಯಕಾರಿ ಎಂಬುದನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಮತ್ತು ಜರ್ಮನ್ ಛಾನ್ಸಲರ್ ಒಲಾಫ್ ಶ್ಹೋಲ್ಝ್ ಗಮನಿಸಬೇಕು. ಹೀಗೆ ಮಾಡಿದರೆ ಉಕ್ರೇನ್ನ ಪರಿಸ್ಥಿತಿ ಮತ್ತಷ್ಟು ಅಸ್ಥಿರಗೊಳ್ಳಬಹುದು ಮತ್ತು ಮಾನವೀಯ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಬಹುದು ಎಂದು ಪುಟಿನ್ ಅವರ ಕಚೇರಿಯ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.